ಕೆಂಗೇರಿ: ಶಾಶ್ವತವಾಗಿ ಕುಡಿಯುವ ನೀರಿನ ಭವಣೆಯನ್ನು ನಿವಾರಿಸುವ ಸಲುವಾಗಿ ಯೋಜನೆಯನ್ನು ರೂಪಿಸಲಾಗಿದೆ ಅದರ ಭಾಗವಾಗಿ ಜಲ ಜೀವನ್ ಮಿಷನ್ ಯೋಜನೆಯ ಮುಖಾಂತರ ಮನೆಮನಗೆ ನಳನೀರು ಪೂರೈಸಲು ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಬಳಿಕ ಮಾತನಾಡಿದ ಅವರು ಮಂಚನಬೆಲೆ ಜಲಾಶಯದ ಮೂಲಕ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹದಿನ್ಯೂಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲು ಚಾಲನೆ ನೀಡಲಾಗಿದೆ ಅದರ ಭಾಗವಾಗಿ ಹೆಚ್ ಗೂಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಟನಾಯಕನಪುರ ಹೆಚ್ ಗೂಲ್ಲಹಳ್ಳಿ ಹಾಗು ದೊಡ್ಡಬೆಲೆ ಗ್ರಾಮಗಳಲ್ಲಿ ಮನೆ ಮನೆಗೆ ನೀರನ್ನು ಒದಗಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಅದರಂತೆ ರಾಮೋಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮೋಹಳ್ಳಿ ಯಲ್ಲಿ ಸುಮಾರು 75 ಸಾವಿರ ಲೀಟರ್ ಸಾಮರ್ಥ್ಯದ ಬೃಹತ್ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಭೂಮಿಯನ್ನು ನೆರವೇರಿಸಲಾಯಿತು.
ಈ ದೊಡ್ಡಬೆಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಪಿ ನಾಗೇಶ್ ಉಪಾಧ್ಯಕ್ಷ ರಾಧಿಕಾ ದೇವರಾಜ್ ನಿಕಟಪೂರ್ವ ಜಿಲ್ಲಾ ಪಂಚಾಯತಿ ಸದಸ್ಯ ಶಿವಮಾದಯ್ಯ ಸದಸ್ಯರಾದ ಶಶಿಕಲಾ ನಾಗರಾಜ್. ಸರೋಜಮ್ಮ ಕೃಷ್ಣಮೂರ್ತಿ.ಮುನಿರಾಜ್ ಟಿಎಂ.ಎಂ ಸಿ ಪುಷ್ಪಾವತಿ ಜಿ ಮಂಜುನಾಥ್ ರೇಖಾ ಜಗದೀಶ್ ಉಮಾಶಂಕರ್ ಭಾಗ್ಯ ಟಿ.ರಾಜು ಹೀರಯ್ಯ , ಪಿಡಿಒ, ಇಂಜಿನಿಯರ್ ನಾಗಲೇಖ ಸೇರಿದಂತೆ ಹಲವಾರು ಭಾಗವಹಿಸಿದ್ದರು.