ಬೆಂಗಳೂರು: ಮೊದಲನೇ ವರ್ಷದ ಬಿ ಇ ಎಲೆಕ್ಟ್ರಾನಿಕ್ ಸೈನ್ಸ್ ವಿಷಯದಲ್ಲಿ ಆರ್ ಆರ್ ಇಂಜಿನಿಯರಿಂಗ್ ಕಾಲೇಜ್ ಹೆಸರಘಟ್ಟದಲ್ಲಿ ಓದುತ್ತಿದ್ದ ವಿಶು ಉತ್ತಪ್ಪ(19) ಎಂಬ ಯುವಕ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಚಿಕ್ಕಬಿದರ ಕಲ್ಲಿನ ತಿರುಮಲಾಪುರದಲ್ಲಿ ವಾಸವಿರುವ ರವಿ ತಮ್ಮಯ್ಯ ಎಂಬುವವರ ಮಗನಾದ ವಿಶು ಉತ್ತಪ್ಪ ನಿನ್ನೆ ಸಂಜೆ ಸುಮಾರು ಐದುವರೆ ಗಂಟೆಗೆ ತಮ್ಮ ತಂದೆಯ…ಬಳಿ ಇದ್ದ ರಿವಾಲ್ವರ್ನಿಂದ ಸ್ವತಃ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುತ್ತಾನೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡೆ ತಿಳಿಸಿದ್ದಾರೆ.
ಮೃತನ ತಂದೆಯು ನೈಸ್ ಕಂಪನಿಯಲ್ಲಿ ಸುಮಾರು 12 ವರ್ಷಗಳಿಂದ ಗನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತನಾ ತಂದೆ-ತಾಯಿಯು ನಿನ್ನೆ ಸಂಜೆ ಕಾರಿನಲ್ಲಿ ಹೊರಗೆ ಹೋಗಿದ್ದಾಗ ಈ ಘಟನೆ ಸಂಭವಿಸಿರುತ್ತದೆ, ಮೃತನು ಶೂಟ್ ಮಾಡಿಕೊಂಡ ನಂತರ ತಂದೆ- ತಾಯಿಗೆ ದೂರವಾಣಿ ಕರೆ ಮಾಡಿ ಕ್ಷಮಿಸಿ ಅಮ್ಮ ಎಂದು ಎರಡು ಸಲ ಕರೆ ಮಾಡಿ ಅಂಗಲಾಚಿರುತ್ತಾನೆ. ತಕ್ಷಣ ಎಚ್ಚೆತ್ತ ತಂದೆ ತಾಯಿ ಇಬ್ಬರು ಮನೆಗೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದನು.
ತಕ್ಷಣ ಹತ್ತಿರದಲ್ಲಿರುವ ಪ್ರಕ್ರಿಯ ಹಾಸ್ಪಟಲ್ಗೆ ದಾಖಲಿಸಿರುತ್ತಾರೆ. ವೈದ್ಯರು ಪರಿಶೀಲಿಸಿ ಮತಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾರೆ.
ಘಟನಾ ಸ್ಥಳಕ್ಕೆ ಫಾರೆನ್ಸಿಕ್ ಅಧಿಕಾರಿಗಳನ್ನು ಕರೆಸಿರುತಾರೆ. ಮಾದನಾಯಕನಹಳ್ಳಿ ಪೊಲೀಸರು ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.