ಕೆ.ಆರ್.ನಗರ: ದಿ:೨೮-೯-೨೦೨೫ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಬಜಾರ್ ರಸ್ತೆಯಲ್ಲಿರುವ ಅಂಬಾಭವಾನಿ ಸಮುದಾಯ ಭವನದಲ್ಲಿ ಸೃಜನ ಲೇಖಕರು ಮತ್ತು ಕಲಾವಿದರ ಬಳಗ ಮತ್ತು ವಿಚಾರ ಪ್ರಜ್ಞೆ ಪತ್ರಿಕಾ ಬಳಗದ ವತಿಯಿಂದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನ ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಡಿ. ರವಿಶಂಕರ್ ರವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ವ್ಯಾಸಂಗ ಮಾಡಿದರೆ, ಪ್ರತಿಭಾ ಪುರಸ್ಕಾರಕ್ಕೆ ಗೌರವ ಬರುತ್ತದೆ. ಸೃಜನ ಬಳಗ ಮತ್ತು ವಿಚಾರ ಪ್ರಜ್ಞೆ ಪತ್ರಿಕಾ ಬಳಗ ಪ್ರತಿವರ್ಷ ೧೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಪ್ರತಿಭಾ ಪುರಸ್ಕಾರ ಪಡೆಯುವ ವಿದ್ಯಾರ್ಥಿಗಳು ಮುಂದೆ ಉನ್ನತ ವ್ಯಾಸಂಗ ಮಾಡಿ ತಾವು ಉತ್ತಮ ಸ್ಥಾನ ಪಡೆದ ನಂತರ ಮುಂದಿನ ದಿನಗಳಲ್ಲಿ, ಸೃಜನ ಬಳಗದ ರೀತಿ ನೀವು ಕೂಡ ಸಾಮಾಜಿಕ ಸೇವಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿ, ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧನೆಯ ದಾರಿಯನ್ನು ಕಂಡು ಕೊಂಡರೆ ನಿಮ್ಮ ದಾರಿಯ ಯಶಸ್ಸಿನ ಮೆಟ್ಟಲನ್ನು ಹತ್ತಲು ಸಹಾಯವಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣಕ್ಕೆ ಅವಶ್ಯಕತೆ ಇರುವ ಎಲ್ಲ ಮೂಲ ಭೂತ ಸೌಕರ್ಯಗಳು ಕೈಗೆ ಸಿಗುತ್ತಿದೆ. ಇದರ ಸದುಪಯೋಗ ಪಡಿಸಿ ಕೊಂಡು, ಸಾಧನೆಯ ಮೆಟ್ಟಿಲು ಹತ್ತಲು ಸಾಧ್ಯವಾ ಗುತ್ತದೆ ಎಂದರು. ನಾನು ಕೂಡ ಈ ಕ್ಷೇತ್ರದ ಶಾಸಕನಾಗಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವು ಅಹಂಕಾರ ಬರದಿರಲಿ ವಿನಯತೆ ಬರಲಿ, ಮುಂದೆ ದೊಡ್ಡ ಗುರಿ ಸಾಧಿಸುವ ಶಕ್ತಿ ಬರಲಿ: ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮೈಸೂರು ವಿಶ್ವ ವಿದ್ಯಾನಿಲಯದ ಪ್ರೊ.ಡಿ.ಆನಂದ್ ರವರು ಮಾತನಾಡಿ, ರಾ.ಸು ರೇಶ್ ರವರು ನಿವೃತ್ತಿಯ ನಂತರ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಇಲ್ಲಿಯವರೆಗೆ ೫೭ ಕಾರ್ಯ ಕ್ರಮಗಳನ್ನು ಮಾಡಿರುವುದು ಹಾಗೂ ಪ್ರಸ್ತುತ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇಕಡ ೯೦ಮೇಲೆ ಅಂಕ ಗಳಿಸಿರುವ ೧೬೦ ವಿದ್ಯಾ ರ್ಥಿಗಳಿಗೆ ಸನ್ಮಾನಿಸುತ್ತಿರುವುದು ಪ್ರಶಂಷನೀಯ. ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಭಾರತ ಗುರುತಿಸಿಕೊಳ್ಳಲು ಶೇಕಡ ೬೦ರ ಷ್ಟು ಯುವಜನತೆ ಕಾರಣವಾಗಿದೆ. ೨೦ ವರ್ಷಗಳಲ್ಲಿ ಬರುವ ಯುವ ಜನತೆ ಸಮರ್ಥವಾಗಿ ಬೆಳೆದರೆ “ಇಂಡಿಯ ಸೂಪರ್ ಪವರ್ ಆಫ್ ಗೋಲ್ಡ್” ಆಗಲಿದೆ. ೨೦೨೦ರಷ್ಟಕ್ಕೆ ಬಲಿಷ್ಠ ರಾಷ್ಟ್ರವಾಗ ಬೇಕೆಂಬುದು ಅಬ್ದುಲ್ಕಲಾಂ ರವರ ಕನಸಾಗಿತ್ತು. ಭಾರತೀಯ ಯುವ ಮನಸ್ಸುಗಳು ಅಮೆರಿಕಕ್ಕೆ ಹೋಲಿಸಿದರೆ ಭಾರತ ಮುಂದೆ ಇದೆ. ಇಂದು ರಾ. ಸುರೇಶ್ ರವರು ತಮಗೆ (ವಿದ್ಯಾರ್ಥಿಗಳಿಗೆ) ಮಾಡುತ್ತಿರುವ ಸನ್ಮಾನ, ನಿಮ ಗೆ ಅಹಂಕಾರ ಬರದಿರಲಿ, ವಿನಯತೆ ಬರಲಿ, ಮುಂದೆ ದೊಡ್ಡ ಗುರಿ ಸಾಧಿಸುವ ಶಕ್ತಿ ಬರಲಿ, ತಾವು ಮಾಡಿದ ಈ ಸಾಧನೆ ದೊಡ್ಡದು ಎನ್ನಬೇಡಿ, ಸಾಧಕರಲ್ಲಿ ಮೂರು ಗುಣ ಇರುತ್ತದೆ ೧.ಕುತೂಹಲ, ೨.ದೃಢÀಸಂಕಲ್ಪ, ೩,ಶುದ್ದ ಚಾರಿತ್ರö್ಯ. ಆದರೆ ಭಾರತದಲ್ಲಿ ಕನಿಷ್ಠ ಆರು ಗಂಟೆ ಸಮಯ ಮೊಬೈಲ್ ನೋಡುವುದರಲ್ಲೇ ಕಳೆಯುತ್ತಾರೆ! ಆದರೆ, ಪುಸ್ತಕದ ಮುಂದೆ ತಲೆ ಭಾಗಿಸಿದವನು ಜಗತ್ತಿನಲ್ಲಿ ತಲೆಎತ್ತಿ ನಡೆ ಯಬಹುದು. ಬಾರತ ನಿಜವಾಗಿಯೂ ವಿಶ್ವಗುರುವಾಗಲು ನಿಮ್ಮೆಲ್ಲರ ಕೊಡುಗೆ ಬೇಕು ಎಂದು ಸೇರಿದ್ದ ಅಪಾರ ವಿದ್ಯಾರ್ಥಿ ಮತ್ತು ವಿದ್ಯಾ ರ್ಥಿನಿಯರಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೈದ್ಯಾಧಿಕಾರಿಗಳಾದ ಡಿ.ನಟರಾಜ್ರವರು ಮಾತನಾಡಿ, ರಾ. ಸುರೇಶ್ ರವರಿಗೆ ಪ್ರಸ್ತುತ ೬೮ ವರ್ಷ ವಯಸ್ಸು, ಡಯಾಬಿಟಿಕ್ ಸಹ ಇದೆ. ಆದರೂ ಈ ರೀತಿ ಕಾರ್ಯಕ್ರಮ ಮಾಡುತ್ತಾರೆ. ಅವರವರ ಜಾತಿಯವರು ಅವರವರ ಜಾತಿಯ ವಿದ್ಯಾರ್ಥಿಗಳಿಗೆ ಸನ್ಮಾನಿಸುತ್ತಾರೆ. ಆದರೆ, ಇಲ್ಲಿ ಎಲ್ಲಾ ಧರ್ಮ ಜಾತಿ ಜನಾಂಗಗಳನ್ನು ಆಹ್ವಾನಿಸಿ ಯಾವುದೇ ಭೇದಭಾವವಿಲ್ಲದೆ ಮಾಡು ತ್ತಿದ್ದಾರೆ. ಆದರೆ ಈ ರೀತಿ ಮಾಡುವುದು ಅಪರೂಪ. ವಿದ್ಯಾರ್ಥಿಗಳಿಗೆ ಅವರವರ ಭಾವಚಿತ್ರವಿರುವ ಫಲಕ (ಮೂಮೆಂಟ್) ಮಾಡಿಸಿ ತ ಮಗೆ ನೀಡುತ್ತಾರೆ. ಅದನ್ನು ನೀವು ನಿಮ್ಮ ಮನೆಯಲ್ಲಿ ಶಾಶ್ವತವಾಗಿ ಇಟ್ಟುಕೊಳ್ಳಬಹುದು. ಆದರೆ, ಇಲಾಖೆಯಲ್ಲಿ ಕೊಡುವ ಅಂಕಪಟ್ಟಿ ಫೈಲ್ನಲ್ಲಿ ಇರುತ್ತೆ. ಇದು ನಿಮಗೆ ಶಾಶ್ವತ ನೆನಪಾಗಿರುತ್ತದೆ. ಕೆ.ಆರ್.ನಗರದಲ್ಲಿ ಟಾಪರ್ಸ್ಗಳು ಹೆಚ್ಚಾಗಿದ್ದಾರೆ. ಆದರೆ ನೀಟ್ನಲ್ಲಿ ಆಗಿಲ್ಲ. ತಾಮಸ್ಆಳ್ವ ಎಡಿಸನ್ ರವರನ್ನು ಶಾಲೆಯಲ್ಲಿ ದಡ್ಡ ಎಂದು ವಾಪಸ್ ಕಳಿಸಿದರು ಆದರೆ ಅವರ ತಾಯಿ ಶಿಕ್ಷಣ ನೀಡಿದ್ದರಿಂದ ಆತ ಶ್ರೀಮಂತ ವಿಜ್ಞಾನಿಯಾಗುತ್ತಾನೆ. ಅಂಕಪಟ್ಟಿಯೊAದಿಗೆ ಜ್ಞಾನವು ಮುಖ್ಯ. ಆದ್ದರಿಂದ ಪುಸ್ತಕಗನ್ನು, ವಾರ್ತಾ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಮತ್ತು ಬೆಟ್ಟದ ನೆಲ್ಲಿ ಕಾಯಿಯ ಜ್ಯೂಸ್ ಕುಡಿಯಿರಿ ಜ್ಞಾನ ಹೆಚ್ಚಾಗುತ್ತದೆ ಎಂದು ಅನೇಕ ವಿಷಯಗಳನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಮೆಗ್ನಟಾಸ್ ಸೆಕ್ಯೂರಿಟಿ ಏಜೆನ್ಸಿ ಸಂಸ್ಥೆಯ ಮಾಲೀಕರಾದ ಶ್ರೀ ಕೆ.ಎ.ಮಹೇಶ್ರವರು ಮಾತನಾಡಿ, ನಾನು ಹಿಂದೆ ಬಿಪಿಎಲ್ ಕಾರ್ಡ್ನಲ್ಲಿದ್ದಾಗ ಬೇಸರವಾಗುತ್ತಿತ್ತು, ಇವಾಗ ನಾನು ಟ್ಯಾಕ್ಸ್ ಪೇಡ್ ಆಗಿದ್ದೇನೆ. ನೀವು ಹಾಗೇ ಆಗಬೇಕು ಅಲ್ಲಿಂದಲೇ ನಮ್ಮ ದೇಶ ಉದ್ದಾರ ಆಗುವುದು. ಬಡತನದಲ್ಲಿದ್ದವರು ಮೇಲೆ ಬಂದಾಗ ಬಡವರಿಗೆ ಸಹಾಯ ಮಾಡಬೇಕು. ಇದು ನನ್ನಿಂದಲೇ ಪ್ರಾರಂಭವಾಗಲಿ.- ನಿಮ್ಮಲ್ಲಿ ಯಾರಾದರೂ ಆರ್ಥಿಕವಾಗಿ ಹಿಂದುಳಿದಿದ್ದರೆ ವ್ಯಾಸಂಗಕ್ಕೆ ತೊಂದರೆಯಾಗಿದ್ದರೆ ಅಂತಹ ವರು ರಾ.ಸುರೇಶ್ರವರನ್ನು ಭೇಟಿಯಾಗಿ ತಿಳಿಸಿ. ಅಂತವರಿಗೆ ನಾನು ನನ್ನ ಕೈಲಾದ ಸಹಾಯ ಮಾಡುತ್ತೇನೆ. ಪರಿಸರ ಜಾಗೃತಿಯ ಚಿನ್ನ ಮ್ಮ ಸೋಲಿಗರು. ಇವರು ಎಲ್ಎಲ್ಬಿ ಮಾಡಿದ್ದಾರೆ ಇವರಿಗೂ ಸಹ ಸಹಾಯ ಮಾಡಿದ್ದೇನೆ. ನೀವು ಸಹ ತಮ್ಮ ವ್ಯಾಸಂಗದ ನಂತರ ಪರೋಪಕಾರ ಮಾಡುವುದನ್ನು ರೂಡಿಸಿಕೊಳ್ಳಿ ಎಂದು ಕರೆ ನೀಡಿದರು.
ಪಿ.ಎಸ್.ಎಂಟರ್ ಪ್ರೆöÊಸಸ್ನ ಮಾಲೀಕರು ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಮಹೇಶ್ಕುಮಾರ್(ಪುನೀತ್)ರವರು ವಿದ್ಯಾರ್ಥಿಗಳಿಗೆ ಲಂಚ್ ಬ್ಯಾಗ್ ನೀಡಿ ಗೌರವಿಸಿದರು. ನವನಗರ ಅರ್ಬನ್ ಬ್ಯಾಂಕಿನ ಅಧ್ಯಕ್ಷರಾದ ಬಸಂತ್.ಕೆ.ಏನ್, ರೈತ ಪರ್ವ ರಾಜ್ಯ ಉಪಾಧ್ಯಕ್ಷರಾದ ಜೆ.ಎಂ.ಕುಮಾರ್, ಪ್ರಗತಿ ಪರ ರೈತ ಅರ್ಜುನಹಳ್ಳಿ ಸಂಪತ್ಕುಮಾರ್, ಕಾಂಗ್ರೇಸ್ ಮುಖಂಡರಾದ ಸಾಲಿಗ್ರಾಮ ತಮ್ಮ ಯ್ಯಣ್ಣ ಮಹಾರಾಷ್ಟç ಧಾರ್ಮಿಕ ಮುಖಂಡರಾದ ಇಸ್ಮಾಯಿಲ್ ಕನ್ಹೋಳಿ, ಶ್ರೀಮತಿ ಚೈತ್ರ ಕಂಠೆೆÃನಳ್ಳಿ ಮುಂತಾದವರುಗಳು ಮಾತನಾಡಿದ ರು. ವಿಶ್ವಜ್ಞಾನಿ ಗ್ರಂಥಾಲಯದ ಗೋವಿಂದರಾಜು, ಎಂ.ಎಸ್ ಬೋನ್ ಸೆಂಟರ್ನ ಮೂಳೆ ತಜ್ಞರಾದ ಹಕ್ಕಿಮ್ ನದೀಮ್, ಬಿ.ಬ್ಲಾಕ್ನ ಕು:ಗೀತಾ ಜಯಕುಮಾರ್, ಶ್ರೀಮತಿ ಚೈತ್ರ ಕಂಠೇನಳ್ಳಿ, ವಿಶ್ವಜ್ಞಾನಿ ಗ್ರಂಥಾಲಯ ಕಲಾತಂಡದಿAದ ಗಾಯನ ಕಾರ್ಯಕ್ರಮವನ್ನು ಏರ್ಪಡಿ ಸಲಾಗಿತ್ತು.
ಕಾರ್ಯಕ್ರಮದಲ್ಲಿ ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಸಾಲಿಗ್ರಾಮ ಕಾಂಗ್ರೆಸ್ ಮುಖಂಡ ತಮ್ಮಯ್ಯಣ್ಣ, ಸರ್ಕಾರಿ ನೌಕರರ ಸಂಘ ದ ಉಪಾಧ್ಯಕ್ಷ ಮತ್ತು ಬಿಸಿಎಂ ಇಲಾಖೆಯ ಅಧಿಕಾರಿ ಉಮೇಶ್, ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎಂ.ಜೆ. ಕುಮಾರ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರು ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿಗಳೂ ಆದ ಭೀಮ ರಾವ್ ಸಾಠೆ, ನಗರ ಕಾಂಗ್ರೇಸ್ ಅಧ್ಯಕ್ಷ ಎಂ.ಜೆ. ರಮೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಜಯಲಕ್ಷಿö್ಮ, ಶ್ರೀಮತಿ ಸುನೀತಾ ರ ಮೇಶ್, ರೈತ ವಿದ್ಯಾರ್ಥಿ ಮುಖಂಡ ರಾಮಪ್ರಸಾದ್, ಧಾರ್ಮಿಕ ಮುಖಂಡ ಇಸ್ಮಾಯಿಲ್ ಕನ್ಹೋಲಿ, ಪುರೋಹಿತರಾದ ಸಾಗರ್ ಭಾರಧ್ವಾಜ್, ಶಿಕ್ಷಕರು ಹಾಗೂ ಸಾಮರಸ್ಯ ಸಹಕಾರ ಸಂಘದ ನಿರ್ದೇಶಕರಾದ ಡಿ.ಕೆ.ಕೃಷ್ಣನಾಯಕ್, ಶಿವಮ್ಮ, ಕೆ.ಆರ್.ನಗರ ಮತ್ತು ಸಾಲಿ ಗ್ರಾಮ ತಾಲೂಕು ಭಾಗದ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು. ಸೃಜನ ಲೇಖಕರು ಮತ್ತು ಕಲಾವಿದರ ಬಳಗದ ಅಧ್ಯಕ್ಷರು ಹಾಗೂ ವಿಚಾರಪ್ರಜ್ಞೆ ಪತ್ರಿಕೆಯ ಸಂಪಾದಕ ರಾ.ಸುರೇಶ್ ಸ್ವಾಗತಿಸಿದರು. ಪ್ರಾರ್ಥನೆ ಇಂ:ಸೋಮಸುAದರ್ ಮಾಡಿದರು. ಎಲ್ಲರಿಗೂ ನಂತರ ಊಟದ ವ್ಯವಸ್ಥೆ ಮಾಡಲಾಗಿತ್ತು.