ಬೆಂಗಳೂರು: ಜ್ಞಾನಭಾರತಿ ವಿವಿ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಬೆಳಕಿಗೆ ಬಂದಿದೆ. ರಂಗನಾಥ್ ನಾಯಕ್ (27) ಸಾವಿಗೀಡಾದ ವಿದ್ಯಾರ್ಥಿ.
ಪಿಹೆಚ್ ಡಿ ವ್ಯಾಸಂಗ ಮಾಡುತ್ತಿದ್ದ ರಂಗನಾಥ್ ನಿನ್ನೆ ಬೆಳಗ್ಗೆ ಕ್ಯಾಂಟೀನ್ಗೆ ಹೋಗಿ ತಿಂಡಿ ತಿಂದು ರೂಮಿಗೆ ಹೋಗಿ ಲಾಕ್ ಹಾಕಿಕೊಂಡಿದ್ದ. ಮಧ್ಯಾಹ್ನ ರೂಮೇಟ್ ಹೋಗಿ ಬಾಗಿಲು ಬಡಿದಾಗ ತೆಗೆದಿರಲಿಲ್ಲ. ಅನುಮಾನ ಬಂದು ಬಾಗಿಲು ಬಡಿದು ನೋಡಿದಾಗ ಆತ ಸಾವನ್ನಪ್ಪಿರುವುದು ಗೊತ್ತಾಗಿದೆ. ಮಾಹಿತಿ ನೀಡಿದ ಮೇರೆಗೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ರಂಗನಾಥ್, ಕಳೆದ ಕೆಲ ತಿಂಗಳ ಹಿಂದೆ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದನು. ನಂತರ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದನು. ಆಯುರ್ವೇದಿಕ್ ಚಿಕಿತ್ಸೆ ಪಡೆಯುತ್ತಿದ್ದ. ನಿನ್ನೆ ಬೆಳಗ್ಗೆ ತಿಂಡಿ ತಿಂದು ಮಲಗಿದಾತ ಏಕಾಏಕಿ ಸಾವನ್ನಪ್ಪಿದ್ದಾನೆ. ಹೇಗೆ ಸಾವಿಗೀಡಾಗಿದ್ದಾನೆ ಎನ್ನುವುದು ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.