ಬೆಂಗಳೂರು: ಸೈನಿಕ, ಶಿಕ್ಷಕ, ರೈತರ ಅನುಪಮ ಸೇವೆಯಿಂದ ದೇಶ ಕಟ್ಟಲು ಸಾಧ್ಯವಾಗಿದೆ. ಹಿರಿಯ ತ್ಯಾಗ-ಬಲಿದಾನಗಳಿಂದ ಸ್ವಾತಂತ್ರ್ಯವನ್ನು ಗಳಿಸಿಕೊಂಡಿದ್ದೇವೆ. ಅವರನ್ನು ಸ್ಮರಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ಹೇಳಿದರು.
ಸುಭಾಷ್ ಸಹಾಯ ಹಸ್ತ ಟ್ರಸ್ಟ್ ನ 8ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನ್ಯಾಷನಲ್ ಪಬ್ಲಿಕ್ ವಾಯ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಸಹಯೋಗದಲ್ಲಿ ಚಂದ್ರಾಲೇಔಟ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಹೆಮ್ಮೆಯ ಭಾರತೀಯ ಪ್ರಶಸ್ತಿಯನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರಧಾನ ಮಾಡಿ ಗೌರವಿಸಿದರು.
ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ದಲಿತ ಸಂಘರ್ಷ ಸೇನೆ ರಾಜ್ಯಾಧ್ಯಕ್ಷ ಎಂ. ಲಿಂಗರಾಜು, ಅಖಿಲ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ ಎಂ ಮಹೇಶ್, ಪತ್ರಕರ್ತ ಮತ್ತು ಜಾಂಬವ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರ. ನರಸಿಂಹಮೂರ್ತಿ, ರಾಜ್ಯ ಮಹಿಳಾ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷೆ ಶೈಲಜಾ, ಸಮಾಜಸೇವಕರಾದ ಸುರೇಶ್ ಮತ್ತಿತರಿಗೆ ಹೆಮ್ಮೆಯ ಭಾರತೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಕೆಎಎಸ್ ಅಧಿಕಾರಿ ಲಕ್ಷ್ಮೀಪತಯ್ಯ, ಹಿರಿಯ ವೈದ್ಯಾಧಿಕಾರಿ ಡಾ ಶಂಕರ್ ಲಿಂಗಯ್ಯ, ಭಾರತದ ಅಂಧರ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕಿ ವರ್ಷ,ಪೋಲಿಸ್ ಅಧಿಕಾರಿಗಳಾದ ಸಂಜೀವ್ ಗೌಡರು, ಅಂಬಿಕಾ, ಸುಭಾಷ್ ಸಹಾಯಸ್ತ ಟ್ರಸ್ಟ್ ಅಧ್ಯಕ್ಷ ರಾಮೇಗೌಡ ಮತ್ತಿತರರು ಹಾಜರಿದ್ದರು.