ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ 45 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಸುಮಾರು 473 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಂದ ಆರು ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಜಾರ್ಜ್ ಶೀಟ್ನಲ್ಲಿ ಉಲ್ಲೇಖಗೊಂಡಿರುವ ಅಂಶಗಳೆAದರೆ ಆರೋಪಿಗಳಲ್ಲಿ ಕೆಲವರು ನಟ ಸುದೀಪ್ ಅಭಿಮಾನಿಗಳು. ನಕಲಿ ಐಡಿಗಳನ್ನು ಕ್ರಿಯೇಟ್ ಮಾಡಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಕಾಮೆಂಟ್ ಮಾಡೋ ಉದ್ದೇಶಕ್ಕೆ ನಕಲಿ ಅಕೌಂಟ್ ಓಪನ್.
ದರ್ಶನ್ ಪತ್ನಿ ವಿಜಯಲಕ್ಷ್ಮೀಯನ್ನು ಟಾರ್ಗೆಟ್ ಮಾಡಿ ಮೆಸೇಜ್. ತುಂಬಾ ಕೆಟ್ಟ ರೀತಿಯಲ್ಲಿ ಫೋಟೋ ಹಾಕಿ ಕಾಮೆಂಟ್. ಆರೋಪಿಗಳಿಗೆ ಅಶ್ಲೀಲ ಮೆಸೇಜ್ ಅನ್ನೋ ಗಮನಕ್ಕೆ ಇದ್ದೇ ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್ ಮಾಡಿರೋ ಬಗ್ಗೆ ತಪ್ಪೊಪ್ಪಿಕೊಂಡಿರೋ ಆರೋಪಿಗಳು. ಆರೋಪಿಗಳ ಮೊಬೈಲ್ ಫೋನ್ ಗಳು ಜಫ್ತಿ ಮಾಡಿದ್ದು ಎಫ್ಎಸ್ಎಲ್ ಗೆ ರವಾನೆ. ಇನ್ನು ಎಫ್ ಎಸ್ ಎಲ್ ನಿಂದ ಮೊಬೈಲ್ ರಿಟ್ರೀವ್ ರಿಪೋರ್ಟ್ ಬರಬೇಕಿದೆ ಇನ್ನು 12 ಐಡಿಗಳ ಮಾಹಿತಿ ಸಿಕ್ಕಿಲ್ಲ, ಕಂಪನಿಗಳಿಗೆ ಪತ್ರ ಬರೆಯಲಾಗಿದೆ. ಐಡಿ ಕ್ರಿಯೇಟ್ ಮಾಡಿರೋ ಕಂಪನಿಯಿAದ ಇನ್ನೂ ಉತ್ತರ ಬರಬೇಕಿದೆ.
ಸದ್ಯ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸೋದಾಗಿ ಉಲ್ಲೇಖ. ಇತ್ತ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದೇ ಆರು ಆರೋಪಿಗಳಿಂದ ಜಾಮೀನು ಕೋರಿ ಅರ್ಜಿ. ಹೈಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿರೋ ಆರೋಪಿಗಳು. ಮಾರ್ಚ್ 24 ಕ್ಕೆ ಅರ್ಜಿ ವಿಚಾರಣೆ ಮಾಡೋದಾಗಿ ಮುಂದೂಡಿದ ಹೈಕೋರ್ಟ್. 65 ದಿನಗಳಾದ್ರೂ ಕಾಮೆಂಟ್ ಮಾಡಿದ ತಪ್ಪಿಗೆ ಜೈಲಿನಲ್ಲಿರೋ ಆರು ಆರೋಪಿಗಳು.
ವಿಜಯಲಕ್ಷ್ಮೀ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ ಪ್ರಕರಣ..! ಚಾರ್ಜ್ ಶೀಟ್ ಸಲ್ಲಿಕೆ



