ಪೀಣ್ಯ ದಾಸರಹಳ್ಳಿ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಲಕ್ಷ್ಮಿ ಶ್ರೀ ಹರಿ ಅವರು ಡಿಸಿ ಕಚೇರಿಯ ಚುನಾವಣಾ ಅಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಲಾಯಿತು. ಯಶವಂತಪುರ ವಿಧಾನಸಭಾ ಕ್ಷೇತ್ರದ ಮತ್ತಿಕೆರೆ ನಿವಾಸದ ಹತ್ತಿರದ ಈಶ್ವರ ದೇವಾಲಯದಲ್ಲಿ ಪೂಜಾ ಸಲ್ಲಿಸಿ ಅಪಾರ ನೂರಾರು ಕಾರ್ಯಕರ್ತರುಗಳೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಯಿತು.
ತಮ್ಮ ಕಾರ್ಯಕರ್ತರುಗಳಾದಶ್ರೀ ಹರಿ, ನಾಗರಾಜ್, ಪ್ರಸನ್ನ, ಧನಂಜಯ್, ಅರುಣ್ ಕುಮಾರ್, ಕೃಷ್ಣಮೂರ್ತಿ, ವಿಶಾಲ್, ವಿನೋದ್ ಹಾಗೂ ಮಹಿಳಾ ಕಾರ್ಯಕರ್ತರುಗಳಾದ ಪ್ರೇಮ ಹೇಮಾ, ರಾಧಾ , ಚಂದ್ರ ಶೇಖರ್ ಇನ್ನಿತರ ಬೆಂಬಲಿಗರೊಂದಿಗೆ ಲಕ್ಷ್ಮಿ ಶ್ರೀ ಹರಿ ಅವರು ಉಮೇದುವಾರಿಕೆ ಸಲ್ಲಿಸಿದರು .ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜೀವ್ ಗೌಡ ಇವರುಗಳಿಗೆ ತೀವ್ರ ಪೈಪೋಟಿಯೊಂದಿಗೆ ಚುನಾವಣೆ ಎದುರಿಸಲು ಸಿದ್ಧವಾಗಿರುವ,
ಲಕ್ಷ್ಮೀ ಶ್ರೀ ಹರಿ ಅವರು ಮೂಲತ ಕಾರ್ಮಿಕರಿಗೋಸ್ಕರ ಹಗಲಿರುಳು ದುಡಿದು ಶ್ರಮಿಸಿ ಸೇವೆ ಸಲ್ಲಿಸಿರುವದರಿಂದ ಹಾಗೂ ಕಾರ್ಮಿಕರುಗಳಿಗೆ ಸರ್ಕಾರದ ಸೌಲತ್ತುಗಳು ಕೊಡಿಸುವ ನಿಟ್ಟಿನಲ್ಲಿ ಸೇವೆ ಮಾಡಿರುವದರಿಂದ ಉತ್ತರ ಭಾಗದ ಪೀಣ್ಯ ದಾಸರಹಳ್ಳಿ ಏಷ್ಯಾ ಖಂಡದಲ್ಲಿ ಎರಡನೇ ಅತಿದೊಡ್ಡ ಕೈಗಾರಿಕಾ ಏರಿಯಾ ಆಗಿರುವುದರಿಂದ ಈ ಭಾಗದಲ್ಲಿ ಲಕ್ಷಾಂತರ ಕಾರ್ಮಿಕರುಗಳಿದ್ದು ಅವರ ಆಶೀರ್ವಾದದ ಮತಗಳು ಬೀಳುವುದರಿಂದ ಅಭ್ಯರ್ಥಿ ಲಕ್ಷ್ಮೀಶ್ರೀ ಹರಿ ಜಯಶಾಲಿಯಾಗುವುದು ಶತಸಿದ್ಧ ಎನ್ನುತ್ತಾರೆ. ಕಾರ್ಮಿಕ ಕಾರ್ಯಕರ್ತರುಗಳು.
ಇದೇ ವೇಳೆ ಈಶ್ವರ ದೇವರ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಮಾತನಾಡಿದ ಲಕ್ಷ್ಮಿ ಶ್ರೀಹರಿ ಮಾಧ್ಯಮದವರೊಂದಿಗೆ ತಮ್ಮ ಮನದಾಳದ ಮಾತುಗಳಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ಕೈ ಮುಗಿದು ನನಗೆ ಮತ ಹಾಕಿಸಿ ಗೆಲ್ಲಿಸಿ ದೆಹಲಿಗೆ ಕಳುಹಿಸುತ್ತಿರಿ ಎಂದು ನಂಬಿದ್ದೇನೆ ನನಗೆ ನಿಮ್ಮ ಮತ ನೀಡಿ ಎಂದು ಶರಗೊಡ್ಡಿ ಮನವಿ ಮಾಡುತ್ತಾ ಮಾತನಾಡಿದರು.ಇದೇ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರುಗಳು ಮಹಿಳೆಯರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.