ವಾರಣಾಸಿ: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಅವರು ಮೂರನೇ ಬಾರಿ ಸ್ಪರ್ಧಿಸುತ್ತಿದ್ದಾರೆ.
ಪ್ರತಿಬಾರಿ ನಾಮಪತ್ರ ಸಲ್ಲಿಸುವಾಗಲೂ ಪ್ರಧಾನಿ ಮೋದಿ ದಶಾಶ್ವಮೇಧ ಘಾಟ್ನಲ್ಲಿ ಗಂಗಾಪೂಜೆ ನೆರವೇರಿಸುತ್ತಾರೆ. ಈ ಬಾರಿಯೂ ಅಂಗರಕ್ಷಕರ ನಡುವೆ ಅವರು ನಿಧಾನವಾಗಿ ಆದರೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುತ್ತಾ ದಶಾಶ್ವಮೇಧ ಘಾಟ್ನ ಮೆಟ್ಟಿಲುಗಳನ್ನು ಇಳಿಯುತ್ತಾ ಗಂಗೆಯ ತಟಕ್ಕೆ ಬಂದಿದ್ದಾರೆ.
ಪ್ರಧಾನಿಯವರ ಆಗಮನಕ್ಕಾಗಿ ಐವರು ಅರ್ಚಕರು ಕಾದು ನಿಂತಿದ್ದರು.
ಅಲ್ಲಿಗೆ ಬಂದಾಕ್ಷಣ ಪ್ರಧಾನ ಅರ್ಚಕರು ಮೋದಿಯವರ ಹೆಗಲ ಮೇಲೆ ಶಲ್ಯ ಹೊದಿಸಿ ಹಣೆಗೆ ತಿಲಕವನ್ನಿಟ್ಟರು. ಗಂಗೆ ಪೂಜೆ ಸಲ್ಲಿಸುವ ಮೊದಲು ಪ್ರಧಾನಿ ಮೋದಿ ಸೂರ್ಯನಿಗೆ ನಮಸ್ಕಾರ ಮಾಡಿ, ಅರ್ಚಕರ ನಿರ್ದೇಶನದ ಮೇರೆಗೆ ಪೂಜಾವಿಧಿಗಳು ನೇರವೇರಿಸಿದರು. ನಿನ್ನೆ ಸುಮಾರು 6 ಕಿಮೀ ಉದ್ದ ರೋಡ್ ಶೋನಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 11.30 ಕ್ಕೆ ನಾಮಪತ್ರ ಸಲ್ಲಿಸಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತಿತರರ ಪ್ರಮುಖರು ಪ್ರಧಾನಿಯವರ ಜತೆಗಿದ್ದರು.