ಬೆಂಗಳೂರು : ಧರ್ಮಸ್ಥಳದ ವಿರುದ್ಧ ಷಡ್ಯಂತರ ಮತ್ತು ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ, ಮಹೇಶ ಶೆಟ್ಟಿ, ತಿಮರೋಡಿ, ಎಂ ಡಿ ಸಮೀರ್ ಗಿರೀಶ್ ಮಟ್ಟಣ್ಣನವರ್ ಟಿ. ಜಯಂತ್, ಅಜಯ್ ಅಂಜನ್ ವಿರುದ್ಧ ತನಿಖೆ ಕೋರಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು. ಎಸ್ಐಟಿ, ಆದಾಯ ತೆರಿಗೆ ಇಲಾಖೆ ಮತ್ತು
ಇಡಿಯಿಂದ ತನಿಖೆಗೆ ಮನವಿ ಮಾಡಲಾಗಿದೆ. ತೇಜಸ್ ಗೌಡ, ಧನ ಕೀರ್ತಿ ಅರಿಗ ಇತರ ರಿಂದ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಈ ಹಿನ್ನೆಲೆ ಇದೀಗ ಗೃಹ ಇಲಾಖೆ, ಎಸ್ಐಟಿ, ಇಡಿ ಮತ್ತು ಐಟಿ ಇಲಾಖೆಗೆ ಹೈ ಕೋರ್ಟ್ ನೋಟಿಸ್ ನೀಡಿದೆ.
ಬಳಿಕ ವಿಚಾರಣೆಯನ್ನು ಅಕ್ಟೋಬರ್ ೧೬ಕ್ಕೆ ನಿಗದಿಪಡಿಸಿತು. ಧರ್ಮಸ್ಥಳದ ವಿರುದ್ಧ ಆಧಾರ ರಹಿತ ಸುಳ್ಳು ಆರೋಪ ಮಾಡಿದ್ದಾರೆ. ಕೋಟ್ಯಂತರ ಜನರ ಧಾರ್ಮಿಕ ಭಾವನೆಗಳಿಗೆಧಕ್ಕೆ ತಂದಿದ್ದಾರೆ. ದೂರು ನೀಡಿದರೂ ಪ್ರತಿವಾದಿಗಳು ತನಿಖೆ ನಡೆಸಿಲ್ಲ. ಹೀಗಾಗಿ ಸಮಗ್ರ ತನಿಖೆಗೆ ನಿರ್ದೇಶನ ಕೋರಿ ರಿಟ್
ಅರ್ಜಿ ಸಲ್ಲಿಸಲಾಗಿದೆ.