ಕೆ.ಆರ್.ಪುರಂ: ಕೆಲ ಆಸ್ಪತ್ರೆಗಳು ಮಾರ್ಜಿನಲ್ ಕಿಡ್ನಿ ಎಂದು ಪರಿಗಣಿಸಿ ಬಳಸಲು ಹಿಂಜರಿದಿದ್ದ
ಕಿಡ್ನಿಗಳನ್ನು ಬಳಸಿಕೊಂಡು ಮೆಡಿಕವರ್ ಆಸ್ಪತ್ರೆ
ಯ ವೈದ್ಯರು ಇಬ್ಬರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗಳಿಗೆ ಹೊಸ ಜೀವನ ನೀಡಿದ್ದಾರೆ. ಫೆಬ್ರವರಿ ೨೭ ರಂದು ನಡೆದ ಈ ಶಸ್ತçಚಿಕಿತ್ಸೆಯಲ್ಲಿ ಒಂದೇ ದಿನ ಇಬ್ಬರು ರೋಗಿ
ಗಳಿಗೆ ಯಶಸ್ವಿಯಾಗಿ ಕಿಡ್ನಿ ಟ್ರಾನ್ಸಾ÷್ಪ÷್ಲಂಟ್ ಮಾಡಲಾಗಿದೆ. ಕ್ಯಾಡವರ್ ದಾನದ ಮೂಲಕ ಲಭಿಸಿದ್ದ ಎರಡು ಕಿಡ್ನಿಗಳನ್ನು ಇತರ ಆಸ್ಪತ್ರೆಗಳು ಬಳಸಲು ನಿರಾಕರಿಸಿದ್ದವು. ಆದರೆ ಮೆಡಿಕವರ್ ಆಸ್ಪತ್ರೆಯ ಡಾ. ಹರೀಶಾ ಬಾಬು, ಸೀನಿಯರ್ ಕನ್ಸಲ್ಟಂಟ್ ನೆಫ್ರೋಲಾಜಿಸ್ಟ್ ಹಾಗೂ ಕಿಡ್ನಿ ಟ್ರಾನ್ಸ್ಪ್ಲಾಂಟ್ ಸ್ಪೆಷಲಿಸ್ಟ್, ತಮ್ಮ ವೈದ್ಯಕೀಯ ಅನುಭವ ಮತ್ತು ದೃಢ ನಂಬಿಕೆಯೊಂದಿಗೆ ಆ ಕಿಡ್ನಿಗಳನ್ನು ಸ್ವೀಕರಿಸಿ ಅಗತ್ಯವಾದ ಕ್ರಾಸ್ ಮ್ಯಾಚಿಂಗ್ ಪರೀಕ್ಷೆ ನಡೆಸಿ ರೋಗಿಗಳಿಗೆ ಬಳಸುವ ನಿರ್ಧಾರ ಕೈಗೊಂಡರು.
ಶಸ್ತ್ರಚಿಕೆತ್ಸೆಯಲ್ಲಿ ಒಂದೇ ದಿನ ಇಬ್ಬರು ರೋಗಿಗಳಿಗೆ ಯಶಸ್ವಿಯಾಗಿ ಕಿಡ್ನಿ ಟ್ರಾನ್ಸ್ಪ್ಲಾಂಟ್



