ಬೆಂಗಳೂರು: ಉತ್ತರಹಳ್ಳಿ ಕುಸುಮ ಪುತ್ರಿ ವಾಸವಿ ಮಂಡಳಿಯವರ ಆಶ್ರಯದಲ್ಲಿ ಆಯೋಜಿಸಿದ್ದ 10 ದಿನಗಳ ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳ ಉಚಿತ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಹಾಗೂ ಮಕ್ಕಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ವಾಸವಿ ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ಶ್ರೀಯುತ. ರಮೇಶ್ ಬಾಬು , ಅಖಿಲ ಕರ್ನಾಟಕ ಆರ್ಯ ವೈಶ್ಯ ಮಹಿಳಾ ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ರೀಮತಿ ಸುಧಾ ಮೂರ್ತಿ, ಕೋಶಾಧ್ಯಕ್ಷರಾದ ಶ್ರೀಮತಿ ಶ್ರೀವಿದ್ಯಾ ಅವರು, ಆರ್ಯ ವೈಶ್ಯ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ರಾದ ಶ್ರೀಮತಿ ವತ್ಸಲಾ ಮದನ್ ಅವರು, ಬೆಂಗಳೂರು ಆರ್ಯ ವೈಶ್ಯ ಮಹಿಳಾ ಮಂಡಳಿಗಳ ಒಕ್ಕೂಟದ ಕೋಶಾಧ್ಯಕ್ಷರಾದ ಶ್ರೀಮತಿ ಸಿ ಪಿ ರಾಧಾರವರು ಉಪಸ್ಥಿತರಿದ್ದರು.
ಈ ಶಿಬಿರದ ಮುಖ್ಯ ಆಯೋಜಕರಾದ ಶ್ರೀಮತಿ ಮಾಧವಿ ಹರಿನಾಥ್ ರವರು ಮಾತನಾಡಿ ಬೇಸಿಗೆ ಶಿಬಿರವು ವಿಶೇಷವಾಗಿ ರಚಿಸಲಾದ ಕಾರ್ಯಕ್ರಮವಾಗಿದ್ದು, ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸುವುದರ ಜೊತೆಗೆ ವ್ಯಕ್ತಿತ್ವ ರೂಪಿಸುವುದಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿತ್ತು. ಬೇಸಿಗೆ ಬಂದರೆ ಮಕ್ಕಳು ಕೇವಲ ಟಿವಿ ಮೊಬೈಲ್ ಟ್ಯಾಬ್ ಗಳ ಮುಂದೆ ಕುಳಿತು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದರ ಜೊತೆಗೆ ತಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿರುವುದು ಖೇದದ ಸಂಗತಿ.
ಈ ಕೊರತೆಯನ್ನು ನೀಗಿಸಲು ಮತ್ತು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ದೃಷ್ಟಿಯಿಂದ ಆಯೋಜಿಸಲಾದ ಈ ಶಿಬಿರದಲ್ಲಿ ಮಕ್ಕಳು ಅತಿ ಉತ್ಸಾಹದಿಂದ ಭಾಗವಹಿಸಿದ್ದರು. 66 ಮಕ್ಕಳು ಭಾಗವಹಿಸಿದ್ದ ಈ ಹತ್ತು ದಿನದ ಶಿಬಿರದಲ್ಲಿ ಕಥೆ ಹೇಳುವ ಕಾರ್ಯಕ್ರಮ-ಶ್ಲೋಕಗಳು-ಭಗವದ್ಗೀತೆ ಪಠನೆ-ಯೋಗ-ದೇಶಭಕ್ತಿ ಗೀತೆ ಗಾಯನ- ಸಂಗೀತ- ನೃತ್ಯ- ಗಣಿತ ಕಸರತ್ತು- ಪೇಟಿಂಗ್ ಇತ್ಯಾದಿಗಳನ್ನು ಭೋದಿಸಲಾಯಿತು ಎಂದರು.
ಪಾರಿಜಾತ ,ಆಶ್ರವಿ ,ಸುಚಿತ್ರ ಶ್ರೀರೇಖಾ ದೀಪಿಕಾ ,ನಾಗವಿಶ್ವಾಸ್ ರಜಿತ ಮತ್ತು ಜ್ಯೋತಿ ಯವರು ಮಕ್ಕಳಿಗೆ ವಿಶೇಷ ಜ್ಞಾನದ ತರಬೇತಿಯನ್ನು ನೀಡಿದರು.
ಉತ್ತರಹಳ್ಳಿ ಕುಸುಮ ಪುತ್ರಿ ವಾಸವಿ ಮಂಡಳಿಯ ಕಾರ್ಯದರ್ಶಿ ಗೀತಾ ರಘು, ಖಜಾಂಚಿ ವಿನುತಾ ಪ್ರಕಾಶ ಮತ್ತು ಇತರೆ ಸಂಸ್ಥೆಯ ಸದಸ್ಯರು ಈ 10 ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



