ಬೆಂಗಳೂರು: ಈಗಾಗಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ಚುನಾವಣಾ ಕಣಕ್ಕೆ ಇಳಿಯುವ ದಿವಸ ನಾಮಪತ್ರ ಸಲ್ಲಿಸುವ ವೇಳೆ ಶಿಗ್ಗಾವಿಯಲ್ಲಿ ಅವರ ಪರ ರೋಡ್ ಶೋ ನಡೆಸಿ ಪ್ರಚಾರ ನಡೆಸಿದ್ದ ಚಿತ್ರನಟ ಕಿಚ್ಚ ಸುದೀಪ್ ಇಂದಿನಿಂದ ಬಿಜೆಪಿ ಪರ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ
ಇಂದು ಬೆಳಿಗ್ಗೆ ಬೆಂಗಳೂರಿನಿಂದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿಗೆ ತೆರಳಿದ ಸುದೀಪ್ ಅಲ್ಲಿನ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಪರ ಪ್ರಚಾರ ನಡೆಸಿದ್ದಾರೆ. ಹೆಲಿಕಾಪ್ಟರ್‍ನಲ್ಲಿ ಮೊಳಕಾಲ್ಮೂರಿಗೆ ಬಂದ ಸುದೀಪ್ ಅವರನ್ನು ನೋಡಲು ಅಭಿಮಾನಿ ಪಡೆಯೇ ಸೇರಿತ್ತು. ಅವರನ್ನು ನೋಡಿ ಅಭಿಮಾನಿಗಳು ಶಿಳ್ಳೆ-ಕೇಕೆ ಹಾಕಿ ಸಂಭ್ರಮಿಸಿದರು.
ಮೊಳಕಾಲ್ಮೂರಿನ ಬಸ್ ನಿಲ್ದಾಣದಿಂದ ಸುದೀಪ್ ಪಕ್ಷದ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಅವರೊಂದಿಗೆ ರೋಡ್‍ಶೋ ನಡೆಸಿದರು.
Leave a Review