ಚಿಕ್ಕಬಳ್ಳಾಪುರ: ಹೆಂಡತಿ ಅಸುನೀಗಿದ್ದನ್ನು ಸಹಿಸಿಕೊಳ್ಳದಾದ ಪತಿರಾಯ ಅದೇ ನೋವಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದೂ ಪತ್ನಿಯ ಸಮಾಧಿಯ ಬಳಿಯೇ ನೇಣು ಬಿಗಿದುಕೊಂಡು ಅಸುನೀಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ತೀಮಾಕಹಳ್ಳಿ ಬಳಿ ಸ್ಮಶಾನದಲ್ಲಿ ಈ ಕರುಣಾಜನಕ ಘಟನೆ ನಡೆದಿದೆ.ಬಾಗೇಪಲ್ಲಿ ಪಟ್ಟಣದ ಗುರುಮೂರ್ತಿ(38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಪತ್ನಿ ಮೌನಿಕಾಳ ಸಮಾಧಿ ಪೂಜೆ ಮಾಡಿ, ನಂತರ ಅಲ್ಲೇ ಇದ್ದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬಾಗೇಪಲ್ಲಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.