ಬೆಂಗಳೂರು: “ಸುಖಾಂಕ್ಷ” ಇತ್ತೀಚೆಗಷ್ಟೆ ನೋಂದಣಿ ಮಾಡಲಾದ “ ಸುಖಾಂಕ್ಷ ರಂಗ ಮಡಿಲು (ರಿ) “ ಸಂಸ್ಥೆ ಅನಾವರಣ ವನ್ನು ಕಥೆಗಾರರಾದ ಡಾ. ಕೂಡ್ಲೂರು ವೆಂಕಟಪ್ಪ ಅವರು ಸುಖಾಂಕ್ಸ ಟ್ರಸ್ಟ್ ನ ಆಶ್ರಮವಾಸಿ ಮಕ್ಕಳಾದ ಖುಷಿ ಮತ್ತು ಮಣಿಕಂಠ ಎಂಬಿಬ್ಬರ ಮುಖಕ್ಕೆ ಸಾಂಕೇತಿಕವಾಗಿ ರಂಗದ ಬಣ್ಣ ಹಚ್ಚುವ ಮುಖೇನ ವಿನೂತನವಾಗಿ ನೆರವೇರಿಸಿದರು.
ಕಲೆ, ಸಾಹಿತ್ಯ ನಮ್ಮ ಬಹು ಸಂಸ್ಕೃತಿಯ ಪ್ರತೀಕ. ಮತ್ತು ನಿಜ ಸಮಾಜದ ಕಣ್ಣುಗಳು . ಸಾಂಸ್ಕೃತಿಕ ಶಿಕ್ಷಣ ಸಮಾಜದ ಸ್ವಾಸ್ಥ್ಯವನ್ನು ಪ್ರತಿನಿಧಿಸುವ ಜತೆಗೆ ವ್ಯವಸ್ಥೆಯನ್ನು ತೀಡುವ ಜವಾಬ್ಧಾರಿಯನ್ನು ನಿಭಾಯಿಸುತ್ತದೆ ಎಂದರು.
ಗತರಾಜ್ಯೋತ್ಸವದ ನೆನಪಿನಲ್ಲಿ ಬೆಂಗಳೂರಿನ ಕಡಬೆಗೆರೆಯ ವೃದ್ಧರ ಆಶ್ರಮದ ಅಂಗಳದಲ್ಲಿ ಸುಖಾಂಕ್ಷ ರಂಗ ಮಡಿಲು (ರಿ ) ಲೋಕಾರ್ಪಣೆ ಬಳಿಕ ಧಾತ್ರಿ ರಂಗಸಂಸ್ಥೆ ಸಿರಿಗೆರೆ ಪ್ರಯೋಗದ “ ಅಕ್ಕ ನಾಗಲಾಂಭಿಕೆ “ ನಾಟಕ ಪ್ರದರ್ಶನವನ್ನು ಆಯೋಜಾಸಲಾಗಿತ್ತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಂಗಕರ್ಮಿ ಸಂಸಾಸುರೇಶ್ ಉಪಸ್ಥಿತರಿದ್ದರು. ಸಂಸ್ಥೆ ಅಧ್ಯಕ್ಷೆ ಜಿ. ಯಶೋಧ, ಪ,ಬ, ಜ್ಯಾನೇಂದ್ರ ಹಾಗಾ ಧಾತ್ರಿ ರಂಗ ಸಂಸ್ಥೆ ಪದಾದಿ ಕಾರಿಗಳು ಉಪಸ್ಥಿತರಿದ್ದರು.