ಮಾಗಡಿ: ತಾಲ್ಲೂಕಿನ ರೇಷ್ಮೆ ಇಲಾಖೆಯ ನೌಕರ ಹೊಸಪೇಟೆ ಸುಲ್ತಾನ್ ಬಾಬಾ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ದೇಗಳಲ್ಲಿ ಭಾಗವಹಿಸಿ ವೇಟ್ ಲಿಫ್ಟಿಂಗ್ ಮತ್ತು ಕುಸ್ತಿ ಪಂದ್ಯದಲ್ಲಿ ಚಿನ್ನದಪದಕ ಪಡೆದು ರಾಜ್ಯಮಟ್ಟದಿಂದ ರಾಷ್ಟ್ರೀಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮುಂದಿನ 2024 ರ ಜನವರಿಯಲ್ಲಿ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ವೇಟ್ ಲಿಫ್ಟಿಂಗ್ ಮತ್ತು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.ಈ ಸಾಧನೆಗೈದಿರುವ ಸುಲ್ತಾನ್ ಬಾಬಾ ಅವರಿಗೆ ಶಾಸಕ ಹೆಚ್.ಸಿ.ಬಾಲಕೃಷ್ಣ, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಸರಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷ ಷಡಕ್ಷರಿ, ಮಾಗಡಿ ತಾಲ್ಲೂಕು ಸರಕಾರಿ ನೌಕರರ ಸಂಘದ ಅದ್ಯಕ್ಷ ಸಿ.ಪ್ರಕಾಶ್, ನಿಕಟಪೂರ್ವ ಅದ್ಯಕ್ಷ ಶಿವರಾಮಯ್ಯ, ರೋಟರಿ ಸಂಸ್ಥೆಯ ಅದ್ಯಕ್ಷ ಪ್ರಭಾಕರ್, ರೇಷ್ಮೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶುಭ ಕೋರಿದ್ದಾರೆ.