ಬೆಂಗಳೂರು: ಇಂದು ಅಂಬಿ ಜನ್ಮದಿನಕ್ಕೆ ಸುಮಲತಾ ಬರ್ತ್ಡೇ ವಿಶ್ ತಿಳಿಸಿದ್ದಾರೆ. `ಸ್ವರ್ಗದಲ್ಲಿರುವ ನಿಮಗೆ ಜನ್ಮದಿನದ ಶುಭಾಶಯಗಳು’ ಎಂದು ಸುಮಲತಾ ಹೇಳಿದ್ದಾರೆ.
ಅಂಬರೀಷ್ ಅವರ ಬಾಲ್ಯದ ಫೋಟೋ, ಯಂಗ್ ಆಗಿದ್ದಾಗಿನ ಪೋಟೋ ಹಾಗೂ ವಯಸ್ಸಾದ ಮೇಲಿನ ಪೋಟೋಗಳನ್ನು ಸುಮಲತಾ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ಪ್ರೀತಿಯಿಂದ ಸಾಲುಗಳನ್ನು ಬರೆದುಕೊಂಡಿದ್ದಾರೆ. ಕವನ ರೂಪದಲ್ಲಿ ಈ ಸಾಲುಗಳು ಇವೆ.`ನಿಮ್ಮ ನೆನಪಾಗುತ್ತಿದೆ..ಯಾವಾಗಲೂ ನಗು ತರುತ್ತದೆ..ನಿನ್ನನ್ನು ಮಿಸ್ ಮಾಡಿಕೊಳ್ಳೋದು ಯಾವಾಗಲೂ ಉಳಿಯುವ ನೋವು..ನೀವು ನಮ್ಮ ಜೀವನದ ಒಂದು ಭಾಗಅದು ಪ್ರತಿ ದಿನ, ಪ್ರತಿ ಕ್ಷಣ ಮತ್ತು ಎಂದೆಂದಿಗೂ?
ನೀವು ಬದುಕನ್ನು ಮೀರಿದವರುನೀವೇ ಜೀವನಸ್ವರ್ಗದಲ್ಲಿರುವ ನಿಮಗೆ ಜನ್ಮದಿನದ ಶುಭಾಶಯಗಳುಎಂದು ಸಾಲುಗಳನ್ನು ಬರೆದುಕೊಂಡಿದ್ದಾರೆ ಅವರು.
ಅಂಬರೀಷ್ ಅವರ ಸಮಾಧಿಗೆ ತೆರಳಿ ಸುಮಲತಾ ಪೂಜೆ ಸಲ್ಲಿಸಿದರು. `ಅಂಬಿ ಅವರು ನಮ್ಮ ಮನಸ್ಸಲ್ಲಿ ಅಷ್ಟೇ ಅಲ್ಲ ಅಭಿಮಾನಿಗಳ ಮನಸ್ಸಲ್ಲಿ ಇದ್ದಾರೆ. ಆರು ವರ್ಷವಾದರೂ ಅಭಿಮಾನಿಗಳು ಈ ರೀತಿ ಸೆಲೆಬ್ರೇಷನ್ ಮಾಡುತ್ತಾರೆ. ಅವರು ಮಾಡಿದ ಒಳ್ಳೆ ಕೆಲಸಗಳಿಂದ ಜನ ಶಾಶ್ವತವಾಗಿ ಅವರನ್ನು ನೆನಪಿನಲ್ಲಿ ಉಳಿಸಿಕೊಂಡಿದ್ದಾರೆ. ಆ ಪ್ರೀತಿಯನ್ನೇ ನೋಡ್ಕೊಂಡು ನಾವು ತೃಪ್ತಿ ಪಡುತ್ತಿದ್ದೇವೆ’ ಎಂದಿದ್ದಾರೆ.