ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಸುಮಲತಾ ಅವರು ಬಿಜೆಪಿಯೊಂದಿಗೆ ಮೈತ್ರಿಯನ್ನು ಮುಂದುವರಿಸುತ್ತಾರೆಯೇ, ಮೈತ್ರಿ ಧರ್ಮಪಾಲನೇ ಮಾಡುತ್ತಾರೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಇದೀಗ ಚರ್ಚೆ ನಡೆದಿದೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.ರಾಜ್ಯದಲ್ಲಿ 2024 ರ ಲೋಕಸಭಾ ಚುನಾವಣೆಯನ್ನು ಮೈತ್ರಿಯಾಗಿ ಎದುರಿಸಬೇಕೆಂದಾಗ ಮೈತ್ರಿ ಧರ್ಮ ಪರಿಪಾಲನೆ ಮಾಡಲೇಬೇಕು ಎಂದುಸಜ್ಜಾಗುತ್ತಿರುವ ಸುಮಲತಾ, ಸದ್ಯ ನಾನು ಪಕ್ಷೇತರಳಾಗಿ ಸಂಸದೆಯಾಗಿದ್ದೇನೆ.
ನನ್ನ ಬಾಹ್ಯ ಬೆಂಬಲವನ್ನು ಬಿಜೆಪಿಗೆ ಎಂದು ತಿಳಿಸಿದ್ದೇನೆ. ಇನ್ನು ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಮೈತ್ರಿಯ ಹಿನ್ನೆಲೆಯಲ್ಲಿ, ಮಂಡ್ಯ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳಲಿ ಎನ್ನುವುದು ನನ್ನ ಆಸೆ. ಆದರೆ, ಇದು ಎರಡು ಪಕ್ಷಗಳ ನಾಯಕರಿಗೆ ಸೇರಿರುವ ವಿಚಾರ.
ಹೀಗಾಗಿ, ಮೈತ್ರಿಯಲ್ಲಿ ನನಗೆ ಟಿಕೆಟ್ ಸಿಕ್ಕರೆ, ಇನ್ನೊಂದು ಪಕ್ಷದ ನಾಯಕರನ್ನು ಕರೆದು, ಮೈತ್ರಿ ಧರ್ಮ ಪರಿಪಾಲನೆ ಮಾಡಲು ಸೂಚನೆ ನೀಡಬೇಕು. ಇಲ್ಲ ಕ್ಷೇತ್ರವನ್ನು ಅವರಿಗೆ ಬಿಟ್ಟುಕೊಟ್ಟಿದ್ದೇ ಆದರೆ, ನನ್ನನ್ನು ಬಿಜೆಪಿ ಹೈಕಮಾಂಡ್ ನಾಯಕರು ಕರೆದು ಮಾತುಕತೆ ಮಾಡಬೇಕು ಎಂದಿದ್ದಾರೆ.
ಪಕ್ಷ ಏನು ಹೇಳುತ್ತದೋ, ಹಾಗೇ ನಡೆದುಕೊಳ್ಳಬೇಕು, ನಾನು ಮೈತ್ರಿ ಧರ್ಮ ಪರಿಪಾಲನೆ ಮಾಡಲು ಸಿದ್ಧ ಎಂದಿದ್ದಾರೆ.
ಇಷ್ಟು ದಿನ ಕ್ಷೇತ್ರಕ್ಕಾಗಿ ಬಿಗಿಪಟ್ಟು ಹಿಡಿದಿದ್ದ ಅವರು, ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಪಟ್ಟು ಸಡಿಲಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಗೆ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಘೋಷಣೆ ವಿಚಾರ.
ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು, ಹಣಕ್ಕಾಗಿ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಸುಮಲತಾ ಆರೋಪಿಸಿದ್ದಾರೆ.ಸ್ಟಾರ್ ಚಂದ್ರು ಅವರ ಹಿನ್ನೆಲೆಯೇ ಅವರೊಬ್ಬ ಕಾಂಟ್ರಾಕ್ಟರ್. ಮಂಡ್ಯ ಜಿಲ್ಲೆಯವರು ಎಂದು ಅವರಿಗೆ ಟಿಕೆಟ್ ಕಾಂಗ್ರೆಸ್ ಪಕ್ಷ ನೀಡಿಲ್ಲ.
ಈವರೆಗೂ ರಾಜಕಾರಣದಲ್ಲಿಯೇ ಗುರಿತಿಸಿಕೊಂಡಿರದ ವ್ಯಕ್ತಿ ಸ್ಟಾರ್ ಚಂದ್ರು. ಮಂಡ್ಯದ ಕಾಂಗ್ರೆಸ್ ಟಿಕೆಟ್ ಬಗ್ಗೆ ನಾನು ಮಾತ್ರ ಅಲ್ಲ, ಇಡೀ ಜಿಲ್ಲೆಯವರೇ ಹೇಳುತ್ತಾರೆ. ಮಂಡ್ಯ ಅಂದರೆ ಯಾರೂ ಬೇಕಾದರೂ ಗೆಲ್ಲಬಹುದಾ? ಎಂದು ಪ್ರಶ್ನಿಸಿದ್ದಾರೆ.ಹಣವೇ ಇಲ್ಲಿ ಮಾನದಂಡವಾ? ಅವರೊಬ್ಬ ಕಾಂಟ್ರಾಕ್ಟರ್.
ಸರ್ಕಾರದಿಂದ 350 ಕೋಟಿ ರೂಪಾಯಿ ಗುತ್ತಿಗೆ ಕೆಲಸ ಅವರಿಗೆ ವಹಿಸಿದ್ದಾರೆ. ಸರ್ಕಾರ ಆಡಳಿತದ ಯಂತ್ರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇದು ನಿಯಮ ಉಲ್ಲಂಘನೆ ಅಲ್ಲವೇ, ಸಂವಿಧಾನದಲ್ಲಿ ಇದು ಇದೆಯೇ? ಎಂದು ಪ್ರಶ್ನಿಸಿದ್ದಾರೆ.ಅಭ್ಯರ್ಥಿ ಎಂದು ಘೋಷಿಸಿ, ಈಗಾಗಲೇ ಸರ್ಕಾರದ ಕಾರ್ಯಕ್ರಮದ ವೇದಿಕೆಯಲ್ಲಿ ಅವರನ್ನು ಕರೆದು ಕೂರಿಸಿ, ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.