ಬೆಂಗಳೂರು: ಕತ್ರಿಗುಪ್ಪೆಯಲ್ಲಿರುವ ಯುಕೆ ನವೀನ್ ಡ್ಯಾನ್ಸ್ ಸ್ಟುಡಿಯೋದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಖ್ಯಾತ ನಿರೂಪಕಿ ನವಿತಾ ಜೈನ್ ಅವರು ಉದ್ಘಾಟಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ ಶ್ರೀ ಶಂಕರ್ ಎಸ್ ಎನ್, ನಟ ಶಟಮರ್ಶನ್ ಅವಿನಾಶ್, ಡ್ಯಾನ್ಸ್ ಸ್ಟೂಡಿಯೋ ಮುಖ್ಯಸ್ಥರಾದ ನವೀನ್, ನೃತ್ಯ ತರಬೇತುದಾರರಾದ ವಿನೋದ್, ಅನೀಲ್ ಕುಮಾರ್, ಶೃತಿ. ಜಿ, ರಂಗಕರ್ಮಿ ರಾಜೇಶ್ ಸಾಣೇಹಳ್ಳಿ ಉಪಸ್ಥಿತರಿದ್ದರು.
21 ದಿನಗಳ ಕಾಲ ನಡೆದ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನೃತ್ಯ, ಸಂಗೀತ, ಯೋಗ ಮತ್ತು ರಂಗಕಲೆಗಳ ತರಬೇತಿ ನೀಡಲಾಯಿತು. ಮತ್ತು ಆರೋಗ್ಯ, ವೈಯಕ್ತಿಕ ಸ್ವಚ್ಚತೆ, ಕರಕುಶಲ ವಸ್ತುಗಳ ತಯಾರಿಕೆ ಮೊದಲಾದ ವಿಷಯಗಳ ಕುರಿತು ತಜ್ಞರು ಆಗಮಿಸಿ ಮಕ್ಕಳಿಗೆ ತಿಳುವಳಿಕೆ ನೀಡಿದರು.
Leave a Review