ಬೆಂಗಳೂರು: ಭಾರತದ ಪ್ರಮುಖ ಈವ್ನಿಂಗ್ ಮತ್ತು ಒಕೇಷನ್ ಉಡುಗೆ ಬ್ರ್ಯಾಂಡ್ ಆಗಿರುವ ಸೋಚ್ ತನ್ನ ಬೇಸಿಗೆ ಕಾಲದ ಹೊಸ ಸ್ಪ್ರಿಂಗ್ ಸಮ್ಮರ್ ಕಲೆಕ್ಷನ್ 2024 ಅನ್ನು ಬಿಡುಗಡೆ ಮಾಡಿದೆ. ಈ ಹೊಸ ದಿರಿಸು ಸಂಗ್ರಹವು ವಿಶಿಷ್ಟವಾದ ಸಾಂಪ್ರಾದಾಯಿಕ ಶೈಲಿಯ ಜೊತೆಗೆ ನಿಮ್ಮ ಬೇಸಿಗೆಯನ್ನು ಬೆಳಗುವ ಅತ್ಯುತ್ತಮ ಗುಣಮಟ್ಟದ ಬಟ್ಟೆ ವಿಶಿಷ್ಟ ಶೈಲಿಯ ದಿರಿಸುಗಳನ್ನು ಹೊಂದಿದೆ.
ಈ ಸಂಗ್ರಹವು ಇಂಡಿಗೊ ಹ್ಯೂಸ್, ಸ್ಕಿಫ್ಲಿ ಚಿಕ್, ಕೋಟಾ ಕೌಚರ್, ಐವರಿ ಎಲಿಗನ್ಸ್, ಬ್ರೀಜಿ ಥ್ರೆಡ್ಗಳು ಮತ್ತು ವಿವಿಡ್ ಬ್ಲೂಮ್ಸ್ ಇತ್ಯಾದಿ ಥೀಮ್ಗಳ ವಿಶಿಷ್ಟವಾಗಿ ಸಿದ್ಧಗೊಳಿಸಿದ ದಿರಿಸುಗಳನ್ನು ಹೊಂದಿದೆ. ಪ್ರತೀ ಹೊಸ ಸಂಗ್ರಹವು ಈ ಕಾಲದ ಮಹಿಳೆಯರ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ವಿನ್ಯಾಸಗೊಂಡಿದೆ ಮತ್ತು ಸಾಂಪ್ರದಾಯಿಕ ದಿರಿಸುಗಳು ಅಂದ್ರೆ ಎತ್ನಿಕ್ ವೇರ್ ಕುರಿತ ಹೊಸ ಪರಿಕಲ್ಪನೆಯನ್ನು ಪ್ರಸ್ತುತ ಪಡಿಸಲಿದೆ.
ಈ ಸಂಗ್ರಹದ ಹೊರತಾಗಿ ಸೀರೆಗಳು, ಚೂಡಿದಾರ್ ಸೆಟ್ಗಳು, ಉಡುಪುಗಳು, ಕುರ್ತಾಗಳು, ಕಫ್ತಾನ್ಗಳು ಮತ್ತು ಲೆಹೆಂಗಾಗಳ ವಿಭಾಗಗಳಲ್ಲಿ ಸೋಚ್ನ ವಿಶಿಷ್ಟ ವಿನ್ಯಾಸದ ದಿರಿಸುಗಳು ದೊರೆಯಲಿವೆ. ಈ ಸಮಗ್ರ ಸಂಗ್ರಹವನ್ನು ಒದಗಿಸುವ ಮೂಲಕ ಸೋಚ್ ಬ್ರಾಂಡ್ ಪ್ರತೀ ಮಹಿಳೆಯ ಸಾಂಪ್ರದಾಯಿಕ ಹಾಗೂ ಸಮಕಾಲೀನ ದಿರಿಸುಗಳಿಗಾಗಿ ಶಾಪಿಂಗ್ ಹೋಗಬಹುದಾದ ಒನ್-ಸ್ಟಾಪ್ ಸ್ಥಳವಾಗಿ ಮನ್ನಣೆ ಗಳಿಸಿದೆ.
ಇಂಡಿಗೊ ಹ್ಯೂಸ್ ಸಂಗ್ರಹವು ಕಾಲಾತೀತವಾದ ಸೊಬಗಿನ ಗುಣವನ್ನು ಹೊಂದಿದೆ. ಗಾಢವಾದ, ತೀವ್ರವಾದ ಮತ್ತು ಟ್ರೋಪಿಕಲ್ ನೀಲಿ ಬಣ್ಣದಿಂದ ಸ್ಫೂರ್ತಿಯನ್ನು ಪಡೆದು ಸಿದ್ಧವಾದ ಈ ಸಂಗ್ರಹವು ಆಧುನಿಕ ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸಲಾದ ಹೊಸ ಶೈಲಿಯ ದಿರಿಸುಗಳಾಗಿವೆ. ಈ ಸಂಗ್ರಹವು ಸಾಂಪ್ರದಾಯಕತೆ ಮತ್ತು ನಾವೀನ್ಯತೆಗಳ ಉತ್ತಮ ಮಿಶ್ರಣವಾಗಿದ್ದು, ಯಾವುದೇ ತರಹದ ಸಂದರ್ಭಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ.
ಆರಂಭಿಕ ಬೆಲೆ ರೂ.1498 ರಿಂದ ಬೇಸಿಗೆಯ ಸಂಗ್ರಹವು ದೊರೆಯಲಿದ್ದು, ಎಲ್ಲಾ ಸೋಚ್ ಮಳಿಗೆಗಳು ಮತ್ತು ವೆಬ್ ಸೈಟ್ soch.com ನಲ್ಲಿ ಲಭ್ಯವಿದೆ.
ಹೊಸ ಆಫರ್ ಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಹೊಸ ಅಪ್ಡೇಟ್ ಗಳನ್ನು ಪಡೆಯಲು ಸೋಚ್ ಅನ್ನು -Instagram, Facebook, Youtubeಮತ್ತು Pinterest ನಲ್ಲಿ ಫಾಲೋ ಮಾಡಿ. ಹೆಚ್ಚಿನ ಮಾಹಿತಿಗಳಿಗೆ ಮತ್ತು ಅಪೂರ್ವ ಶಾಪಿಂಗ್ ಅನುಭವ ಪಡೆಯಲು ಕಂಪನಿಯ ವೆಬ್ ಸೈಟ್ ಗೆ ಭೇಟಿ ನೀಡಿ- soch.com