This is the title of the web page
This is the title of the web page

ಆಯಾಯ ಧರ್ಮ, ಜಾತಿ ಮತ್ತು ವರ್ಗಗಳಿಗೆ ಅನುಕೂಲಕರ ಕಾನೂನುಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ: ಸುನಿಲ್ ಬೋಸ್

ತಿ.ನರಸೀಪುರ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರು ಭಾರತದ ಎಲ್ಲ ಜಾತಿ, ಧರ್ಮ, ಪಂಥಗಳಿಗೂ ಸಂವಿಧಾನವನ್ನು ರಚಿಸಿ ಕೊಟ್ಟಿದ್ದಾರೆ. ಆಯಾಯ ಧರ್ಮ, ಜಾತಿ ಮತ್ತು ವರ್ಗಗಳಿಗೆ ಅನುಕೂಲಕರ ಕಾನೂನುಗಳನ್ನು ಸಂವಿಧಾನದಲ್ಲಿ ಅಳ ವಡಿಸಿದ್ದಾರೆ ಎಂದು ಯುವ ಮುಖಂಡ ಸುನಿಲ್ ಬೋಸ್ ಹೇಳಿದರು.

ತಾಲೂಕಿನ ಮುಸುವಿನಕೂಪ್ಪಲು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ನೂತನ ಪುತ್ಧಳಿಯನ್ನು ಮಾಜಿ ಸಚಿವ ಎಸ್ ಸಿ ಮಹದೇವಪ್ಪ ಜೊತೆಗೂಡಿ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಸುನೀಲ್ ಬೋಸ್ ಅನಾವರಣಗೂಳಿಸಿ ಮಾತನಾಡಿದ ಅವರು.
ಮಹದೇವಪ್ಪನವರು ತಮ್ಮೆಲ್ಲರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದು ಮಂತ್ರಿಯಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಹಾಗಾಗಿ ಕ್ಷೇತ್ರದ ಜನತೆಯ ಆಶೀರ್ವಾದ ನಮ್ಮ ತಂದೆ ಮತ್ತು ನನ್ನ ಮೇಲೆ ಸದಾ ಹೀಗೆ ಇರಲಿ. ಮುಂದೆಯೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು.

ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಸಿದ್ದಮ್ಮ, ಗ್ರಾಪಂ ಸದಸ್ಯ ನಾಗೇಶ್, ಮುಖಂಡರಾದ ದೊಡ್ಡಮಾದನಾಯಕ, ಸಿದ್ದರಾಜು, ಮಹದೇವಯ್ಯ, ಮಹೇಶ, ಮಹದೇವಸ್ವಾಮಿ, ಆನಂದ್, ಮಹದೇವ ಸ್ವಾಮಿ, ಶಿವು, ನಂಜುಂಡಸ್ವಾಮಿ, ಮಹೇಶ್ , ರಾಚಯ್ಯ, ಮರಿಸಿದ್ದಯ್ಯ, ಮಹದೇವಯ್ಯ, ಕರಿಯಣ್ಣ, ಗುರುನಂಜಪ್ಪ, ರವಿಚಂದ್ರನ್ , ಎಂ.ರಾಜು ಮುಂತಾದವರು ಹಾಜರಿದ್ದರು