ಬೆಂಗಳೂರು: ಎಫ್‍ಸಿ ಬೆಂಗಳೂರು ಯುನೈಟೆಡ್ ತಂಡವು ಬಿಡಿಎಫ್‍ಎ ಸೂಪರ್ ಡಿವಿಷನ್ ಫುಟ್‍ಬಾಲ್ ಲೀಗ್ ಚಾಂಪಿಯನ್‍ಷಿಪ್‍ನ ಪಂದ್ಯದಲ್ಲಿ 8-0ಯಿಂದ ಬಿಯುಎಫ್‍ಸಿ ತಂಡವನ್ನು ಮಣಿಸಿತು.
ಮಂಗಳವಾರ ನಡೆದ ಪಂದ್ಯದಲ್ಲಿ ಯುನೈಟೆಡ್ ತಂಡದ ಪರವಾಗಿ ಜೆರಿ ಒನೆಸೆಮಾಸ್ ಪುಲಮ್ಟೆ (50, 66ನೇ), ಚೆಸ್ಟರ್ ಪೌಲ್ ಲಿಂಗ್ಡೋ (58, 89ನೇ), ರಿಭವ್ ಸರ್ದೇಸಾಯಿ (69, 90+2ನೇ) ತಲಾ ಎರಡು ಗೋಲು ಗಳಿಸಿದರೆ, ಪಿ. ಕಮಲೇಶ್ (53ನೇ), ಅಹ್ಮದ್ ಫೈಜ್ ಖಾನ್ (76ನೇ) ತಲಾ ಒಂದು ಗೋಲು ದಾಖಲಿಸಿದರು.
ಮತ್ತೊಂದು ಪಂದ್ಯದಲ್ಲಿ ಕೊಡಗು ಎಫ್‍ಸಿ ತಂಡವು 2-1ರಿಂದ ಯಂಗ್ ಚಾಲೆಂಜರ್ಸ್ ಪರಾಭವಗೊಳಿಸಿತು. ಕೊಡಗು ತಂಡದ ಶ್ಲೋಕ್ ತಿವಾರಿ (7ನೇ), ಜೆಮ್ಶೀದ್ ಅಲಿ (56ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
Leave a Review