ಡಲ್ಲಾಸ್: ಅಂತರಾಷ್ಟೀಯ ಮಟ್ಟದ ಕ್ರಿಕೆಟ್ಗೆ ಹೊಸದಾಗಿ ಸೇರಿ ಐಸಿಸಿ ವಿಶ್ವಕಪ್ ಟಿ-20 ಪಂದ್ಯಾವಳಿಯಲ್ಲಿ ಅದ್ಬುತ ಆಟ ತೋರುತ್ತಿರುವ ಅಮೆರಿಕ ತಂಡ ರೋಚಕ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನವನ್ನು ಮಣಿಸಿದೆ. ಇಲ್ಲಿ ನಡೆದ ಗ್ರೂಪ್ ಎ ತಂಡಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಆರಂಭಿಕ ಆಘಾತ ಅನುಭವಿಸಿದರೂ ಅಂತಿಮವಾಗಿ 20ಒವರ್ನಲ್ಲಿ 7 ವಿಕೆಟ್ ಕಳೆದು 159 ರನ್ ಗಳಿಸಿತು ಭಾರತ ಮೂಲದ ಅಮೆರಿಕ ತಂಡ ಎಡಗೈ ಸ್ಪಿನ್ನರ್ ನೊಸ್ತುಶ್ ಕೆಂಜಿಗೆ 30 ರನ್ಗಳಿಗೆ ಮೂರು ವಿಕೆಟ್ಗಳನ್ನು ಕಬಳಿಸಿ ಗಮನ ಸೆಳೆದರು.
ಅಲ್ಪ ಮೊತ್ತ ಬೆನ್ನಟ್ಟಿದ ಅಮೆರಿಕ ಬ್ಯಾಟ್ಸಮನ್ಗಳು ತಾಳಯ ಆಟ ಪ್ರದರ್ಶಿಸಿದರು ನಾಯಕ ಮೊನಾಂಕ್ ಪಟೇಲ್ (50), ಆರೋನ್ ಜೋನ್ಸ(36) ಮತ್ತು ಆಂಡ್ರೀಸ್ ಗೌಸ್ ( 35) ಅವರ ಅದ್ಬುತ ಸಮಯೋಚಿತ ಆಟದಿಂದ ರೋಚಕ ಸನ್ನಿವೇಶಕ್ಕೆ ಸಾಕ್ಷಿಯಾಗಿ 3 ವಿಕೆಟ್ಗೆ 159 ರನ್ ಗಳಿಸಿತು ಸಮಬಲ ಕಂಡಿತು.
ನಂತರ ನಡೆದ ಸೂಪರ್ ಓವರ್ ಒತ್ತಡ ಎರಡೂ ತಂಡದ ಮೇಲಿತ್ತು.
ಮೊದಲು ಪಾಕ್ನ ಮೊಹಮ್ಮದ್ ಅಮೀರ್ ಬೌಲಿಂಗ್ ಮಾಡಿ ಸೂಪರ್ ಓವರ್ನಲ್ಲಿ, ಅಮೆರಿಕ 18 ರನ್ ಪೇರಿಸಿತು. ಶಾಂತಚಿತ್ತದಿಂದ ಅಮೆರಿಕ ಪರವಾಗಿ ಬೌಲ್ ಮಾಡಿದ ಸೌರಭ್ ನೇತ್ರಾವಲ್ಕರ್ ಅದ್ಭುತ ಎಸೆತದ ಗತಿ ಅರಿಯದೆ ಬ್ಯಾಟ್ ಬೀಸಿದ ಪಾಕ್ ಕೇವಲ13ರನ್ ಕಲೆ ಹಾಕಲು ಮಾತ್ರ ಸಾಧ್ಯವಾಗಿ ಸೋಲು ಒಪ್ಪಿಕೊಂಡಿತು .
ಟಿ20 ವಿಶ್ವಕಪ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಪಾಕಿಸ್ತಾನಕ್ಕೆ ಸೂಪರ್ ಓವರ್ ಮೂಲಕ ಅಮೆರಿಕದ ಹೊಸಬರ ತಂಡ ಆಘಾತ ನೀಡಿ ಅತಿ ದೊಡ್ಡ ಗೆಲುವು ದಾಖಲಿಸಿ ಪಂಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.ಈ ಫಲಿತಾಂಶವು ವೆಸ್ಟ್ ಇಂಡೀಸ್ನಲ್ಲಿ ನಡೆದ 2007 ರ ವಿಶ್ವಕಪ್ನಲ್ಲಿ ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಮೂರು ವಿಕೆಟ್ಗಳ ಸೋಲನ್ನು ನೆನಪಿಸುತ್ತದೆ, ಅದು ಅವರನ್ನು ಆಪಂದ್ಯಾವಳಿಯಿಂದ ಹೊರಹಾಕಿತು.