ಆನೇಕಲ್: ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಪೂರಕ ಪರೀಕ್ಷೆ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೈಗೊಂಡಿರುವ ಯೋಜನೆಗೆ ಸಹಕಾರ ನೀಡುವುದಾಗಿ ಶಾಸಕ ಎಂ.ಸತೀಶ್ ರೆಡ್ಡಿ ತಿಳಿಸಿದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಂ.ಜಿ.ಪಾಳ್ಯದ ಶುಭೋಧಿನಿ ಆಂಗ್ಲ ಪ್ರೌಢಶಾಲೆಯಲ್ಲಿ ಎಸಿಪಿ ಎಲ್.ವೈ.ರಾಜೇಶ್ ರವರ ರಾಜ ಲಾಂಛನ ಯುಕ್ತಿ ಸಂಸ್ಥಾನದ ಮಾರ್ಗದರ್ಶನದಲ್ಲಿ ದರ್ಪಣ ಟೀಂ ಜೊತೆಯಲ್ಲಿ ಹಮ್ಮಿಕೊಂಡಿದ್ದ 10ನೇ ತರಗತಿ ಪೂರಕ ಪರೀಕ್ಷೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದ ಬಹು ದೊಡ್ಡ ಘಟ್ಟವಾಗಿದೆ.
ನಪಾಸದ ಮಾತ್ರಕ್ಕೆ ಧೃತಿಗೆಡುವ ಅವಶ್ಯಕತೆಯಿಲ್ಲಾ, ತರಬೇತಿ ಶಿಬಿರದ ಪ್ರಯೋಜನ ಪಡೆದು ಮತ್ತೋಮ್ಮೆ ಪೂರಕ ಪರೀಕ್ಷೆ ಬರೆಯುವ ಮೂಲಕ ಭವಿಷ್ಯತ್ತನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.ರಾಜ ಲಾಂಛನ ಯುಕ್ತಿ ಸಂಸ್ಥಾನದ ಸಂಸ್ಥಾಪಕ ಎಸಿಪಿ ಎಲ್.ವೈ.ರಾಜೇಶ್ ಮಾತನಾಡಿ ಕೇವಲ ಮೂರು ವರ್ಷಗಳಿಂದ ಶುರು ಮಾಡಿದ ಉಚಿತ ಪೂರಕ ಪರೀಕ್ಷೆ ತರಬೇತಿ ಶಿಬಿರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಪದವಿ ಹಾಗೂ ಡಿಗ್ರಿ ಕಾಲೇಜುಗಳಿಗೆ ಸೇರಿ ವ್ಯಾಸಂಗ ಮಾಡುತ್ತಿದ್ದಾರೆ.
ನಾನಾ ಕಾರಣಗಳಿಂದ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಹಿಂದುಳಿದು ಅನುತ್ತೀರ್ಣರಾಗಿರುತ್ತಾರೆ.ಅಂತಹ ವಿದ್ಯಾರ್ಥಿ ಭವಿಷ್ಯದ ದೃಷ್ಟಿಯಿಂದ ರಾಜ ಲಾಂಛನ ಯುಕ್ತಿ ಸಂಸ್ಥಾನ ಮತ್ತು ದರ್ಪಣ ಟೀಂ ಕೆಲಸ ಮಾಡುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೂರಕ ಪರೀಕ್ಷೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಶಿಕ್ಷಕರು , ಸ್ವಯಂಸೇವಕರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.ಗೋವಿಂದ ಬಾಬು ಪೂಜಾರಿ, ಹೇಮಾ ನಿರಂಜನ್, ಡಾ.ನಟರಾಜ್, ಶಾಲಾ ಕಾರ್ಯದರ್ಶಿ ಉಮೇಶ್, ವೀರಕ ಪುತ್ರ ಶ್ರೀನಿವಾಸ್, ರಾಜೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.