ಕೆ.ಆರ್.ಪೇಟೆ:ಬಿಸಿಲಿನ ಬೇಗುದಿಗೆ ಸಿಲುಕದ ರೈತಾಪಿ ವರ್ಗ ತಾಲ್ಲೂಕಿನ ಕೆಇಬಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಿಲುಕಿ ನಲುಗುತ್ತಿದೆ ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ವಿನುತ ಅವರಿಗೆ ಶಾಸಕ ಹೆಚ್. ಟಿ ಮಂಜು ತೀವ್ರ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಕೆಇಬಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಕೆಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆರೋಪಿಸಿದ ಹಿನ್ನೆಲೆಯಲ್ಲಿ ಸಭೆಗೆ ಗೈರಾಗಿದ್ದ ಅಧಿಕಾರಿ ವಿನುತಾ ರವರಿಗೆ ದೂರವಾಣಿಯ ಮೂಲಕ ಮಾತನಾಡಿದರು.
ತಾಲ್ಲೂಕಿನಲ್ಲಿ ನಿಮ್ಮ ಇಲಾಖೆಯ ಬೇಜವಾಬ್ದಾರಿತನದಿಂದ ನಮ್ಮ ದೇಶದ ಬೆನ್ನೆಲುಬು ನಮ್ಮ ತಾಲೂಕಿನ ಮುಗ್ಧ ರೈತರು ಸಾವಿಗೀಡಾಗಿದ್ದರೆ ಈಗಲಾದರೂ ಎಚ್ಚೆತ್ತುಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸೋಣ ಎಂಬ ಮನೋಭಾವನೆಯಿಂದ ಇಂತಹ ಪ್ರಮುಖ ಸಭೆಗಳಿಗೆ ಭಾಗವಹಿಸಿ ಇಲಾಖೆಯಿಂದ ಲೋಪದೋಷಗಳನ್ನ ಚರ್ಚಿಸುವ ಅವಕಾಶವಿದ್ದರೂ ಕುಂಟುನೆಪ ಹೇಳುತ್ತಾ ಸಹಾಯಕ ಅಧಿಕಾರಿ ಕಳಿಸಿ ನಿಮ್ಮ ಕರ್ತವ್ಯದಲ್ಲಿ ತೋರಿಸುವ ಬೇಜವಾಬ್ದಾರಿಯನ್ನೇ ಅನೇಕ ಪ್ರಮುಖ ಸಭೆಗಳಲ್ಲಿ ಗೈರಾಗುವ ಮೂಲಕ ಪ್ರದರ್ಶನ ಮಾಡಿದ್ದೀರಿ.
ಹಾಗೇ ಉಡಾಫೆ ಉತ್ತರ ಹೇಳುವ ಅಧಿಕಾರಿಗಳ ಅವಶ್ಯಕತೆ ನನ್ನ ಕ್ಷೇತ್ರಕ್ಕಿಲ್ಲ ಎಂದು ಶಾಸಕರಾದ ಹೆಚ್. ಟಿ ಮಂಜು ತೀವ್ರ ತರಾಟೆಗೆ ತೆಗೆದುಕೊಂಡರು.ಸಭೆಯಲ್ಲಿ ತಹಸಿಲ್ದಾರ್ ನಿಸರ್ಗಪ್ರಿಯ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸತೀಶ್, ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ್,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಭಿಯಂತಕರಾದ ರಶ್ಮಿ, ಸಹಾಯಕ ಇಂಜಿನಿಯರ್ ಪ್ರವೀಣ್, ಬಿಂದು, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.