ಚಿಕ್ಕಬಳ್ಳಾಪುರ: ದೇಶದಲ್ಲಿ ನಡೆಯುತ್ತಿರುವ 18ನೇ ಲೋಕಸಭೆ ಚುನಾವಣೆ ಇಂದು ಬೆಳಗಿನಿಂದಲೇ ಆರಂಭಗೊಂಡಿದ್ದು ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರು ಅಂತಿಮ ಕ್ಷಣದಲ್ಲಿ ಮತದಾರರ ಒಲವು ಗಳಿಸಲು ಕಸರತ್ತು ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಬೂತ್ ನಂಬರ್ 180 ಹಾಗೂ ಬೂತ್ ನಂಬರ್ 164 ಭುವನೇಶ್ವರಿ ವೃತ್ತದಲ್ಲಿನ ನಗರಸಭೆ ಒಳ ವರ್ಣದಲ್ಲಿ ಇರುವ ಎರಡು ಬೂತ್ ಗಳಲ್ಲಿ ಮತದಾನ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಪಾಲ್ಗೊಂಡಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಶ್ರೀ ಭುವನೇಶ್ವರಿ ವೃತ್ತದ ನಗರ ಸಭೆ ಒಳ ಆವರಣದ 160 ಮತ್ತು 180 ಮತ್ತು ಬೂತ್ ಗಳಲ್ಲಿ ಮತದಾನ ಪ್ರಕ್ರಿಯೆ ಉತ್ತಮ ರೀತಿಯಲ್ಲಿ ಮುಂದುವರೆದಿದೆ,
ಮಾಜಿ ಶಾಸಕ ಡಾಕ್ಟರ್ ಎಂ ಶಿವಾನಂದ ಭಾರತೀಯ ಜನತಾ ಪಕ್ಷದ ಮುಖಂಡ ಶ್ರೀ ಕೆ ವಿ ಮತ್ತು ಪಂಚಗಿರಿ ಶಿಕ್ಷಣದ ದತ್ತಿಗಳ ಅಧ್ಯಕ್ಷ ಕೆ ವಿ ನವೀನ್ ಕಿರಣ್ ನಗರ ಸಭೆ ಸದಸ್ಯರುಗಳಾದ ಸುಬ್ರಮಣ್ಯ ಆಚಾರ್ ಯತೀಶ್ ಸತ್ಯನಾರಾಯಣ ರೆಡ್ಡಿ ಆಕರ್ ಮುನಿರಾಜು ಒಳಗೊಂಡಂತೆ ಅನೇಕ ಮಂದಿ ಬಿಜೆಪಿ ಬೆಂಬಲಿತರು ಮತದಾನ ನಡೆಯುವ ಮತದಾರರಿಗೆ ಮತ ನೀಡುವಂತೆ ಕೋರಿದರು.