ಹುಬ್ಬಳ್ಳಿ: ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಬಿ.ಆರ.ಗವಾಯಿ ರವರು ನ್ಯಾಯಾಲಯ ಕಲಾಪ ನಡೆಸುವ ಸಂಧರ್ಭದಲ್ಲಿಯೇ ಅಕ್ರಮ ಪ್ರವೇಶ ಮಾಡಿ ಅಪಮಾನ
ಮಾಡಿದ ಜಾತಿವಾದಿ ಮನುವಾದಿ ಸನಾತನ ಸಂಘೀ ಕಿಶೋರ ರಾಕೇಶ ನಡೆಯನ್ನ ಖಂಡಿಸಿ ಇಂದು ಹು -ಧಾ ಮಹಾನಗರ ಜಿಲ್ಲೆಯ ಸಮಸ್ತ ಅಹಿಂದ
ಬಾAಧವರು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮAಡಳ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಡಾ. ಬಿಆರ್ ಅಂಬೇಡ್ಕರ್ ಸರ್ಕಲ್ ನಲ್ಲಿ ರಸ್ತೆ
ಬಂಧಗೋಳಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಈ ಪ್ರತಿಭಟನೆಯಲ್ಲಿ ದಲಿತಪರ ಹಿರಿಯ ಮುಖಂಡ ಗುರುನಾಥ ಉಳ್ಳಿಕಾಶಿ. ಅನ್ವರ್ ಮುಧೋಳ್. ರಾಜಶೇಖರ ಮೆಣಸಿನಕಾಯಿ. ಸೇರಿದಂತೆ ಪ್ರಮುಖರು ಮಾತನಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸುವ ಮುಖಾಂತರ ಸ್ವಾತAತ್ರ÷್ಯ ಪೂರ್ವದ ಸಂವಿಧಾನ ಜಾರಿಯ ಪೂರ್ವದ ಭಾರತದ ಮನುವಾದಿಗಳ ಮನುಸ್ಥಿತಿ ಇಂದೂ ಸಹ ಬದಲಾಗಿಲ್ಲ ಎಂಬುದು ಈ ಹೀನ ದುಷ್ಕçತ್ಯದಿಂದ ಬಯಲಾಗಿದ್ದು ಇಂತಹ ಸಂವಿಧಾನದ ಮೇಲಿನ ಅಕ್ರಮ ಆಕ್ರಮಣವನ್ನ ನಾವು ಪ್ರಬಲವಾಗಿ ವಿರೋಧಿಸುತ್ತೇವೆ.
ದೇಶದಲ್ಲಿ ಆಢಳಿತಾರೂಢ ಸಮ್ಮಿಶ್ರ ಸರ್ಕಾರದ ಬಹುದೊಡ್ಡ ಪಕ್ಷ ಭಾಜಪ ವಾಗಿದ್ದು ಮನುವಾದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷ ಕುಮ್ಮಕ್ಕೂ ಕೇಂದ್ರ ಸರ್ಕಾರದ್ದಿದೆ
ಎಂಬುದಕ್ಕೂ ಸಹ ಈ ಪ್ರಕರಣ ಸಾಕ್ಷಿಯಾಗಿದೆ.