ಬೇಲೂರು: ಸಾಂಸ್ಕೃತಿಕವಾಗಿ ತನ್ನದೇ ಕೊಡುಗೆ ನೀಡಿರುವ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಹೊಯ್ಸಳ ಸಾಮ್ರಾಜ್ಯದಿಂದ ಸಾಂಸ್ಕೃತಿಕವಾಗಿ ಸಾಕಷ್ಟು ಪ್ರಗತಿ ಕಂಡಿದೆ ಎಂದು ಶಾಸಕ ಹೆಚ್.ಕೆ.ಸುರೇಶ್ ಹೇಳಿದರು.
ಐವತ್ತನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದ ಅಭಿವೃದ್ದಿ ತೀರಾ ಕಡೆಗಣನೆಯಾಗಿದೆ. ಅಭಿವೃದ್ಧಿಗೆ ಪೂರಕವಾಗಿ ಯೋಜನೆ ಸಿದ್ದಪಡಿಸಿದ್ದೇವೆ. ಬೇಲೂರಿನಿಂದ ಹಾಸನ ರಸ್ತೆ ವಿಸ್ತರಣೆ, ಆಟದ ಮೈದಾನಕ್ಕೆಕಾಂಪೌಂಡ್ ಆಗಿದೆ. ಕನ್ನಡ ಭಾಷೆಯ ಶಿಲಾ ಶಾಸನ ಕೊಡುಗೆನೀಡಿದ, 900 ವರ್ಷ ಇತಿಹಾಸ ಉಳ್ಳ ಶ್ರೀಚನ್ನಕೇಶವ ಸ್ವಾಮಿ ದೇವಾಲಯ, ಹೊಯ್ಸಳರ ಕಾಲದ ಹತ್ತು ಹಲವು ದೇಗುಲಗಳ ನಿರ್ಮಾಣ ಮಹತ್ತರವಾಗಿವೆ ಎಂದರು.
ಸ್ಥಗಿತಗೊಂಡಿರುವ ಹೊಯ್ಸಳ ಮಹೋತ್ಸವವನ್ನು ಹಳೇಬೀಡು ಹಾಗೂ ಬೇಲೂರಿನಲ್ಲಿ ನಡೆಸಲು ಉದ್ದೇಶಿಸ ಲಾಗಿದ್ದು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಬಳಿ ಚರ್ಚಿಸಿದ್ದೇನೆಂದರು. ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಹೊಯ್ಸಳರು ಆಳಿದ ಸ್ಥಳದಲ್ಲಿ ನಾವು ಕನ್ನಡ ನಾಡಹಬ್ಬ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಕನ್ನಡ ಧ್ವಜವಾಗಿ ಹಳದಿ ಮತ್ತು ಕೆಂಫು ಬಣ್ಣದ ಧ್ವಜವನ್ನು ಬಳಕೆ ಮಾಡುತ್ತಿದ್ದು ಕೆಂಫು ಭುವನೇಶ್ವರಿಯ ಹರಿಶಿನ ಕುಂಕುಮವಾಗಿದೆ.
ಹರಿಶಿನ ಶಾಂತಿಯ ಸಂದೇಶವಾದರೆ, ಕುಂಕುಮವು ಕ್ರಾಂತಿಯ ಸಂದೇಶವಾಗಿದೆ, ಕನ್ನಡಿಗರು ಶಾಂತಿಗೂ ಬದ್ಧ, ಯುದ್ಧಕ್ಕೂ ಸಿದ್ದ ಎಂಬುದನ್ನು ತೋರಿಸುತ್ತದೆ ಎಂದು ವ್ಯಾಖ್ಯಾನಿಸಿದರು.ಕನ್ನಡದ ಪ್ರಥಮ ಶಿಲಾ ಶಾಸನ ನೀಡಿದ ಹಲ್ಮಿಡಿ ಗ್ರಾಮದಇತಿಹಾಸವನ್ನು ವಿಸ್ತಾರವಾಗಿ ತಿಳಿಸಿದರು. ವಿವಿಧ ಕ್ಷೇತ್ರದಲ್ಲಿಸಾಧನೆ ಮಾಡಿದ ಎ.ಸಿ.ನಿಂರಂಜನ್ (ಸಾಹಿತ್ಯ) ಬಿ.ಆರ್. ಪ್ರಜ್ವಲ್ (ಚಿತ್ರಕಲೆ) ರಂಜಿಕುಮಾರ್ (ಪತ್ರಿಕೋಧ್ಯಮ) ಸೈಯದ್ಇಸಾಕ್ (ಕೃಷಿ) ಬಿ.ಎ.ಲಾವಣ್ಯ (ಕೋಂ, ದಿ.ನಾಗರಾಜು (ಸಮಾಜಸೇವೆ-ಮರಣೋತ್ತರ ಪ್ರಶಸ್ತಿ) ಹೆಚ್.ಎ.ಪ್ರಸನ್ನ (ಕನ್ನಡಪರ ಹೋರಾಟ) ಯಶೋಧಮ್ಮ ಪೌರಕಾರ್ಮಿಕರು, ಶೇಖ್ರಾಜು, ಧರ್ಮರಾಜು ಗ್ರಾಮ ಸಹಾಯಕ (ನಾಗರೀಕ) ಬಿ.ಆರ್.ತೀರ್ಥಂಕರ್ (ಕನ್ನಡಪರ ಹೋರಾಟ) ವಿ.ಲಕ್ಷಣ (ಶಿಕ್ಷಣ) ಹಾಗೂ ಹತ್ತನೆ ತರಗತಿ, ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಭುವನೇಶ್ವರಿ ದೇವಿ ವಿಗ್ರಹಕ್ಕೆ ಶಾಸಕರು ಹಾಗೂ ತಹಸೀಲ್ದಾರ್ ಪೂಜೆ ಸಲ್ಲಿಸಿ ವಿವಿಧ ಸ್ಥಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು. ಸ್ಥಬ್ಭಚಿತ್ರದಲ್ಲಿ ಹಲ್ಮಿಡಿಶಾಸನ, ಸಾಧುಸಂತರು, ರಸ್ತೆಸಾರಿಗೆ ಸಂಸ್ಥೆಯಿಂದ ಸಾರಿಗೆ ಬಸ್ ಅಲಂಕರಿಸಿ ಭುವನೇಶ್ವರಿ ದೇವಿ ಮೆರವಣಿಗೆ ಮಾಡಿದರು. ವಿಷ್ಣುಅರಸ್ ಎಮ್ಮೆಯೊಂದಿಗೆ ಬಂದು ಕನ್ನಡ ಗೀತೆಗೆ ನೃತ್ಯ ಮಾಡಿ ರಂಜಿಸಿದರು. ಹಲ್ಮಿಡಿಯಿಂದ ಜ್ಯೋತಿಯನ್ನು ಕರವೇ ಕಾರ್ಯಕರ್ತರು ತಂದರು.
ಮೌಂಟ್ಕಾರ್ಮೆಲ್ (ಕನ್ನಡ ವಚನಕಾರರು) ಯುನೈಟೆಡ್ (ಹಂಪೆರಥ) ಸರ್ವೋದಯ ವಿದ್ಯಾವಿಕಾಸ (ವಿಶ್ವಪರಂಪರೆತಾಣ) ಸರ್ವೋದಯ (ಹಲ್ಮಿಡಿ ಶಾಸನ) ದಿವ್ಯಶಾಲೆ (ಒನಕೆ ಓಬವ್ವ, ಹೆಚ್ಪಿಜಿಎಸ್. (ಕನ್ನಡ ನಾಡಿನ ವೀರಮಣಿಗಳು) ಬೇಲೂರು ಪಬ್ಲಿಕ್ ಶಾಲೆ (ವಚನಕಾರರು)ಪೂರ್ಣಪ್ರಜ್ಞಾ ಶಾಲೆ, ಮೌಂಟ್ಕಾರ್ಮೆಲ್, ಶಾಂತಲಾ ಪ್ರೌಢಶಾಲೆ, ಯುನೈಟೆಡ್, ಹೊಯ್ಸಳ, ವಿಶ್ವಪ್ರೌಢಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ತಾ.ಪಂ.ಇಒ ಸತೀಶ್, ಬಿಇಒ ಕೆ.ಪಿ.ನಾರಾಯಣ್, ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿವೆಂಕಟೇಶ್, ಪೊಲೀಸ್ ಇನ್ಸ್ಪೆಕ್ಟರ್ ರವಿಕಿರಣ್, ಸಿಪಿಐ ಜಯರಾಂ, ಪುರಸಭ ಸದಸ್ಯರು, ಸಂಘಟನೆಯ ಪ್ರಮುಖರಾದ ಚಂದ್ರಶೇಖರ್, ಬೋಜೇಗೌಡ, ಎಸ್.ಎಂ.ರಾಜು, ಡಾ.ರಾಜ್ ಸಂಘದ ತೀರ್ಥಂಕರ್, ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿ ನೌಕರರು ಇದ್ದರು. ವಿದ್ಯಾರ್ಥಿಗಳಿಂದ ರೈತಗೀತೆ, ನಾಡಗೀತೆ, ರಾಷ್ಟ್ರಧ್ವಜಾಗೀತೆ ಮೊಳಗಿತು. ಉಪನ್ಯಾಸಕ ಲಕ್ಷಿನಾರಾಯಣ್ ನಿರೂಪಿಸಿದರು. ದೈಹಿಕ ಶಿಕ್ಷಕ ಅಧೀಕ್ಷಕ ಪಾಲಾಕ್ಷಮೂರ್ತಿ, ದೈಹಿಕ ಶಿಕ್ಷಕರಾದ ನಂದೀಶ್, ಭದ್ರೇಗೌಡ ಇವರು ಧ್ವಜಾರೋಹಣ ಪೂರ್ವಸಿದ್ದತೆ ನೋಡಿಕೊಂಡರು. ಭುವನೇಶ್ವರಿದೇವಿ ಹಾಗೂ ಇನ್ನಿತರ ಸ್ಥಬ್ಧಚಿತ್ರಗಳ ಮೆರವಣಿಗೆ ನಡೆಯಿತು.