ಚಳ್ಳಕೆರೆ: ಬಿಜೆಪಿ ಪಕ್ಷದ ಸಂಸ್ಥಾಪನೆ ದಿನವ ನ್ನು ಚಳ್ಳಕೆರೆ ಬಿಜೆಪಿ ಪಕ್ಷದ ಕಚೇರಿಯಲ್ಲಿ ಪಕ್ಷದ ತಾಲ್ಲೂಕು ಅಧ್ಯಕ್ಷರಾದ ಬಿ.ಎಂ.ಸುರೇಶ್ ರ ಅಧ್ಯ ಕ್ಷತೆಯಲ್ಲಿ ಕಚೇರಿ ಮೇಲೆ ಪಕ್ಷದ ಧ್ವಜಾರೋಹಣ ಮಾಡಿ. ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಪಕ್ಷದ ಸಂಸ್ಥಾಪನ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಬಿ. ಎಂ.ಸುರೇಶ್. ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯಲ್ಲಿ ಹಾಗೂ ಎಲ್.ಕೆ.ಅಡ್ವಾಣಿ ರವರ ನೇತೃತ್ವದಲ್ಲಿ ಸ್ಥಾಪನೆ ಆದ ಬಿಜೆಪಿ ಪಕ್ಷ ಇಂದು ವಿಶ್ವದ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ.ದೇಶದ ಸಂಸತ್ ನಲ್ಲಿ ಕೇವಲ ಎರಡು ಬಿಜೆ ಪಿ ಸಂಸತ್ ಸದಸ್ಯರೊಂದಿಗೆ ಆರಂಭವಾದ ಬಿಜೆಪಿ ಪಕ್ಷ ಇಂದು ದೇಶವನ್ನು ಅಳುವ ಪಕ್ಷವಾಗಿ ಹೊರಹೊಮ್ಮಿದ್ದು. ವಿಶ್ವದ ಅತ್ಯಂತ ಪ್ರಭಾವಿ ನಾಯಕ ಪ್ರಧಾನಿ ನರೇಂದ್ರ ಮೋದಿಜಿರವರು ಇಂದು ಮೂರನೇ ಅವಧಿಗೆ ಪ್ರಧಾನಿ ಆಗಿ ದೇಶವನ್ನು ಸರ್ವಂಗೀಣ ಅಭಿವೃದ್ಧಿಯ ಕಡೆ ಕೊಂಡಯುತ್ತಿರುವ ಯಶಸ್ವಿ ಪ್ರಾಧಾನಿಯಾಗಿದ್ದಾರೆ ಎಂದು ಹೇಳಿದರು.ನಗರ ಘಟಕದ ಪ್ರಧಾನ ಕಾರ್ಯದರ್ಶಿ ಡಾ:ರಾಮರಾಜು ಮಾತನಾಡಿ. ಕರ್ನಾಟಕದಲ್ಲಿ ರಾಜ್ಯ ಬಿಜೆಪಿ ಪಕ್ಷ ಸ್ಥಾಪನೆಯಾದಾಗ,ಚಳ್ಳಕೆರೆಯಲ್ಲಿ ರಾಜ್ಯಪಕ್ಷದ ಶಾಖೆ ಪ್ರಾರಂಭವಾದ ದಿನವೇ ಬಿಜೆಪಿ ತಾಲ್ಲೂಕು ಘಟಕ ದ ಶಾಖೆ ಆರಂಭ ಮಾಡಿ, ಕರ್ನಾಟಕದ ಎರಡನೇ ಬಿಜೆಪಿ ಪಕ್ಷದ ಕಚೇರಿ ಸ್ಥಾಪನೆಯಾಗಿದ್ದು, ಚಳ್ಳಕೆರೆ ಇತಿಹಾಸ ನಿರ್ಮಿಸಿದೆ. ಈ ಒಂದು ಸಾಧನೆ ಹೆಮ್ಮೆಯ ರೂವಾರಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಆದಿ ಭಾಸ್ಕರಶೆಟ್ಟಿರವರು. ನಂತರ ಮಹಾದೇವಯ್ಯ, ಖಂಡೆರಾವ್, ಬಸವರಾಜ್ ಮಂಡಿ ಮಠ ಸೇರಿದಂತೆ ಅನೇಕರ ಕೊಡಿಗೆಯಿಂದ ಪಕ್ಷದ ಸಂಘಟನೆಯಾಗಿದೆ.ವಿಶೇಷ ವಾಗಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದ ಸ್ಯರಾದ ಬಾಳೆಕಾಯಿ ರಾಮದಾಸ್ ರವ ರ ನೇತೃತ್ವದಲ್ಲಿ 80ರ ದಶಕದಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ,ದೇಶದಲ್ಲಿ ರಾಮ ಜನ್ಮ ಭೂಮಿ ಸಂಘರ್ಷದ ಆ ದಿನ ಗಳಲ್ಲಿ ಯುವಕರ ಪಡೆಯನ್ನುಕಟ್ಟಿ ಬಿಜೆಪಿ ಪಕ್ಷದ ತತ್ವ ಸಿದ್ಧಾಂತವನ್ನು ತುಂಬಿ, ಪಕ್ಷಕ್ಕೆ ಭೀಮ ಬಲವನ್ನು ತಂದು ಕೊಟ್ಟು.ಇಂದು ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ಬಾರಿ ಆಯ್ಕೆಯಾಗಲು ಕಾರಣರಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡರು ಹಾಗೂಬಿಜೆಪಿ ಜಿಲ್ಲಾ ಕೋಶಧ್ಯಕ್ಷರಾದ ಸಿ.ಎಸ್.ಪ್ರಸಾದ್, ಹಿರಿಯ ಮುಖಂಡರಾದ ಬಿ.ಎಸ್. ಶಿವಪುತ್ರಪ್ಪ ಹಾಗೂ ಹಿರಿಯ ಮಹಿಳಾ ಮುಖoಡೆ ಬಡಕ್ಕ ರ ವರಿಗೆ ಗೌರವ ಸನ್ಮಾನ ಮಾಡಿದರು.ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾಉಪಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಕಾಂತರಾಜ್, ಖಜಾಂಚಿ ಬಿ.ಎಂ.ಶ್ರೀನಿ ವಾಸ್, ಪ್ರಧಾನ ಕಾರ್ಯದರ್ಶಿ ಮೀರಾಸಾಬಿ ಹಳ್ಳಿ ಸುರೇಶ್, ಕಾರ್ಯದ ರ್ಶಿಗಳಾದ ಅಶೋಕ್, ಅಂಬಿಕಾ, ಎಸ್ಟಿ ಮೋರ್ಚಾ ಅಧ್ಯಕ್ಷ ದೊರೆ ನಾಗ ರಾಜ್,ಪ್ರ.ಕಾರ್ಯದರ್ಶಿ ನಾಗರಾಜು, ಎಸ್ಸಿ ಮೋರ್ಚಾ ಅಧ್ಯಕ್ಷ ವೀರಭ ದ್ರಪ್ಪ, ಪ್ರಧಾನಕಾರ್ಯದರ್ಶಿ ಶ್ರೀನಿವಾಸ್, ಬಿಎಲ್ಓ1 ದಯಾನಂದ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ,ಉಪಾಧ್ಯ ಕ್ಷ ಶೋ ಭರಾಜ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸಹನಾ, ಪ್ರ.ಕಾರ್ಯದ ರ್ಶಿ ಲಕ್ಷಿ÷್ಮ, ಶಾಂತಲಾ, ಜಗದಂಭಾ, ಜಯಲಕ್ಷಿ÷್ಮ, ಶಿವಅನ್ನಪೂರ್ಣ, ಶ್ರೀದೇವಿ, ಮುಖಂಡರಾದ ಕಾಟಯ್ಯ, ನವೀನ್, ದ್ಯಾಮಣ್ಣ ಉಪಸ್ಥಿತರಿದ್ದರು.



