ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್, ಎರಡುವರೆ ವರ್ಷಗಳನ್ನು ಪೂರೈಕೆ ಮಾಡಿದ ಬೆನ್ನಲ್ಲೇ, ನವೆಂಬರ್ ತಿಂಗಳಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲಿದೆ ಎಂಬ ಗುಸುಗುಸು ಆರಂಭವಾಗಿದೆ. ಇದೇ ತಿಂಗಳ ೧೩ ರಂದು ಸಿಎA ಸಿದ್ಧರಾಮಯ್ಯ ಎಲ್ಲಾ ಕಾಂಗ್ರೆಸ್ ಶಾಸಕರನ್ನು ಡಿನ್ನರ್ಗೆ ಆಹ್ವಾನಿಸಿದ್ದು, ಬಿಹಾರ ರಾಜ್ಯದ ಸಾರ್ವತ್ತಿಕ ವಿಧಾನಸಭಾ ಚುನಾವಣೆ ಮುಕ್ತಾಯವಾದ ಬಳಿಕ ರಾಜ್ಯದಲ್ಲಿ ಸಂಪುಟ ಪುನಾರಚನೆ ಆಗುವ ಲಕ್ಷಣಗಳು ಗೋಚರವಾಗುತ್ತಿದೆ.
ಇನ್ನು ಈಗಿರುವ ಮಾಹಿತಿಯ ಪ್ರಕಾರ ಸಂಪುಟ ಪುನಾರಚನೆ ಅಷ್ಟುಸುಲಭದ ಮಾತಲ್ಲ. ಆದ್ರೂ ಸಹ ಸಂಪುಟ ಪುನಾರಚನೆ ಮಾಡಲೇಬೇಕೆಂದು ಕಾಂಗ್ರೆಸ್ ಪಕ್ಷ
ನಿರ್ಧರಿಸಿದ್ದು, ಇದಕ್ಕೆ ಯಾವ ರೀತಿ ಚರ್ಚೆ ಪಕ್ಷದೊಳಗೆ ಆಗುತ್ತಿದೆ ಎಂಬುದನ್ನು ದೂರದಿAದಲೇ ಉಸ್ತುವಾರಿಗಳು ಹಾಗೂ ಎಐಸಿಸಿ ಅಧ್ಯಕ್ಷರು ನೋಡುತ್ತಿದ್ದಾರೆ
ಎನ್ನಲಾಗಿದೆ.ಇತ್ತ, ಒಂದು ಡಜನ್ಗೂ ಹೆಚ್ಚಿನ ಸಚಿವರನ್ನು ಕ್ಯಾಬಿನೆಟ್ನಿಂದ ಗೇಟ್ಪಾಸ್ಕೊಟ್ಟು ಹೊಸ ಮುಖದವರಿಗೆ ಅವಕಾಶ ಕಲ್ಪಿಸುವ ಉದ್ದೇಶ ಕಾಂಗ್ರೆಸ್ದಾಗಿದೆ. ಹಾಲಿ ಸಚಿವರುಗಳ ಮೌಲ್ಯಮಾಪನ ಮುಕ್ತಾಯವಾಗಿದ್ದು ಸಂಪುಟ ಸೇರ್ಪಡೆಯಾಗುವ ಸಂಭಾವ್ಯರ ಪಟ್ಟಿ ಕೂಡ ರೆಡಿಯಾಗಿದೆ ಎನ್ನಲಾಗಿದೆ.
ಇನ್ನು ಈ ಪಟ್ಟಿಯ ಬಗ್ಗೆ ನಮಗೂ ಕೂಡ ಮಾಹಿತಿ ಇದೆ. ಒಂದು ಡಜನ್ಗೂ ಹೆಚ್ಚಿನ ಸಚಿವರನ್ನು ಕೈ ಬಿಟ್ಟು, ಹೊಸದಾಗಿ ಯಾರನ್ನೆಲ್ಲಾ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ನೋಡುವುದಾರೆ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್, ಯಲ್ಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ, ಬೆಂಗಳೂರಿನ ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಶಿರಾ ಕ್ಷೇತ್ರದ ಟಿ.ಬಿ.ಜಯಚಂದ್ರ, ಕೆಜಿಎಫ್ನ ರೂಪಾ ಶಶಿಧರ್, ಅರಸೀಕೆರೆಯ ಶಿವಲಿಂಗೇಗೌಡ, ಬಳ್ಳಾರಿ ಗ್ರಾಮೀಣದ ಬಿ.ನಾಗೇಂದ್ರ, ಮುದ್ದೇಬಿಹಾಳದ ಅಪ್ಪಾಜಿ ನಾಡಗೌಡ, ಅಥಣಿಯ ಲಕ್ಷ÷್ಮಣ್ ಸವದಿ, ತರೀಕೆರೆಯ ಶ್ರೀನಿವಾಸ್, ಬೆಂಗಳೂರಿನ ಶಿವಾಜಿನಗರದ ರಿಜ್ವಾನ್ ಅರ್ಷದ್, ಹಾಲಿ ಸಭಾಧ್ಯಕ್ಷ ಯು.ಟಿ.ಖಾದರ್, ಚಳ್ಳಕೆರೆಯ ರಘುಮೂರ್ತಿ, ಮಧುಗಿರಿಯ ಕೆ.ಎನ್.ರಾಜಣ್ಣ, ಮಳವಳ್ಳಿಯ ಪಿ.ಎಂ.ನರೇAದ್ರ ಸ್ವಾಮಿ, ಅನೇಕಲ್ನ ಶಿವಣ್ಣ, ಜೇವರ್ಗಿಯ ಡಾ.ಅಜಯ್ ಸಿಂಗ್ ಅವರ ಹೆಸರುಗಳು ಮುಂಚೂಣಿಯಲ್ಲಿದ್ದು,
ಸAಪುಟ ಪುನಾರಚನೆ ಆದ್ರೆ,ಇವರಲ್ಲಿ ಕೆಲವರಿಗೆ ಮಣೆ ಹಾಕುವ ಸಾಧ್ಯತೆಯಿದೆ ಎನ್ನಲಾಗಿದೆ.