ಮಾಗಡಿ: ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜಾನಪದ ಕಲೆಯನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಅಹಿಂದಾ ಹೋರಾಟ ಹಕ್ಕುಗಳ ರಾಜ್ಯಾದ್ಯಕ್ಷರು ಸಮಾಜ ಸೇವಕರಾದ ಹೆಗ್ಗನಹಳ್ಳಿ ಆಂಜನಪ್ಪ ಹೇಳಿದರು.
ಜೈ ಮಾರುತಿ ಜಾನಪದ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ)ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಜಾನಪದ ಸಿರಿ ಉತ್ಸವ ಮತ್ತು ಗೀತ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಾನಪದ ಕಲೆ ಉಳಿಸಲು ಹಳ್ಳಿಗರಾದ ನಾವುಗಳು ಅವುಗಳಿಗೆ ಪ್ರೋತ್ಸಾಹ ನೀಡಬೇಕು.
ಇತ್ತೀಚೆಗೆ ಟಿ.ವಿ.ಮಾದ್ಯಮ,ಸಾಮಾಜಿಕ ಜಾಲತಾಣ,ಟ್ವಿಟರ್ ಸೇರಿದಂತೆ ಇನ್ನಿತರೆ ತಂತ್ರಜ್ಞಾನಕ್ಕೆ ಮೊರೆ ಹೋಗಿರುವ ಮನುಷ್ಯನು ಆಧುನಿಕತೆಯನ್ನು ಮರೆಯುತ್ತಿದ್ದಾನೆ.ಗ್ರಾಮೀಣ ಸೊಗಡಿನ ಜಾನಪದ ಕಲೆಯು ಇನ್ನೂ ಜೀವಂತವಾಗಿದ್ದು ಇವುಗಳನ್ನು ಗುರುತಿಸಿ ಗೌರವಿಸಿದಾಗ ಮಾತ್ರ ಅವುಗಳು ಉಳಿಯಲು ಸಾಧ್ಯವಾಗುತ್ತದೆ.ಜಾನಪದ ಕಲೆಗಳಲ್ಲಿ ಪ್ರಸ್ತುತ ಸಮಾಜವನ್ನು ತಿದ್ದುವ ಶುಭ ಸಂದೇಶಗಳಿವೆ.ಇದನ್ನು ಅರ್ಥೈಸಿಕೊಂಡು ಶ್ರೀಮತಿ ಶ್ವೇತಾ ಹೊಸಹಳ್ಳಿ ಪುಟ್ಟರಾಜು ದಂಪತಿಗಳು ಜಾನಪದ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.ಇವರ ಜೊತೆಗೆ ನಾವು ನೀವೆಲ್ಲರೂ ಕೈ ಜೋಡಿಸೋಣ ಎಂದು ಆಂಜನಪ್ಪ ಕರೆ ನೀಡಿದರು.
ಜೈ ಮಾರುತಿ ಜಾನಪದ ಕಲಾ ಟ್ರಸ್ಟ್ ಅದ್ಯಕ್ಷ ಹೊಸಹಳ್ಳಿ ಪುಟ್ಟರಾಜು ಮಾತನಾಡಿ ನಮ್ಮ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸಾಕಷ್ಟು ವರ್ಷಗಳಿಂದಲೂ ಜಾನಪದ ಕಲಾವಿದರಿಗೆ ಉತ್ತಮ ವೇದಿಕೆ ನಿರ್ಮಾಣ ಮಾಡುವ ಮೂಲಕ ಅವರಲ್ಲಿರುವ ಅಗಾದವಾದ ಕಲೆಗಳನ್ನು ಅನಾವರಣಗೊಳಿಸಲು ಅನುವು ಮಾಡಿಕೊಂಡು ಬರಲಾಗುತ್ತಿದೆ.ಸುಮಾರು ಏಳು ವರ್ಷಗಳ ಈ ಕಲೆ ಮತ್ತು ಸಂಸ್ಕೃತಿಯ ಪ್ರೋ ತ್ಸಾಹಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ.
ಗ್ರಾಮೀಣ ಕಲೆಗೆ ಬೆಲೆ ನೀಡುವ ಮೂಲಕ ಕಲೆಗಾರರಿಗೆ ಅವಕಾಶ ನೀಡುವುದರಿಂದ ಒಂದೊಂದು ವೇದಿಕೆಯಲ್ಲಿ ಸಾಕಷ್ಟು ಕಲಾವಿದರು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡುವ ಮೂಲಕ ಗ್ರಾಮೀಣತೆಯನ್ನು ಜೀವಂತಗೊಳಿಸುತ್ತಿದ್ದಾರೆ.ಇಂತಹ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಆಯೋಜಿಸಲಾಗುವುದು ಎಂದು ಪುಟ್ಟಸ್ವಾಮಿ ಸ್ಪಷ್ಟಪಡಿಸಿದರು.ಮಾಗಡಿ ತಾಲ್ಲೂಕು ಛಲವಾದಿ ಮಹಾ ಸಭಾ ಅದ್ಯಕ್ಷ ಆಶ್ವಥಪ್ಪ, ಮಹೇಶ್ ಸುರುವೇ, ಜಾನಪದ ಕಲಾವಿದ ಸಬ್ಬನಹಳ್ಳಿ ರಾಜು, ಶ್ವೇತಾ ಪುಟ್ಟರಾಜು, ಶಂಕರ್, ಹೊಂಬಾಳಯ್ಯ ಸೇರಿದಂತೆ ಮತ್ತಿತರಿದ್ದರು.