ಢಾಕಾ (ಬಾಂಗ್ಲಾದೇಶ): ಏಷ್ಯಾ ಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳ ವೇಳೆ ಭಾರತೀಯ ಆಟಗಾರರನ್ನು ಕೆರಳಿಸುವಂಥ ಸAಜ್ಞೆಗಳನ್ನು ತೋರಿದ ಆಧಾರದ ಮೇರೆಗೆ ಪಾಕಿಸ್ತಾನದ ಬೌಲರ್ ಹ್ಯಾರಿಸ್ ರವೂಫ್ ಹಾಗೂ ಪಾಕಿಸ್ತಾನ ಆಟಗಾರರೊಂದಿಗೆ ವರ್ತಿಸುವಾಗ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಏಷ್ಯಾ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ವಿರುದ್ಧ ಅಂತಾರಾಷ್ಟಿçÃಯ ಕ್ರಿಕೆಟ್ ಸಂಸ್ಥೆ (ಐಸಿಸಿ)
ಕ್ರಮ ಕೈಗೊಂಡಿದೆ.
ಹಾರಿಸ್ ರೌಫ್ಗೆ ಪಂದ್ಯದ ಸಂಭಾವನೆಯ ಮೇಲೆ ಶೇ. ೩೦ರಷ್ಟು ದಂಡ ಹಾಗೂ ಮುಂಬರುವ ಪಾಕಿಸ್ತಾನ ಪರ ಆಡಬಹುದಾದ ಎರಡು ಏಕದಿನ ಪಂದ್ಯಗಳಿAದ ಅವರಿಗೆ ನಿಷೇಧ ಹೇರಲಾಗಿದೆ. ಜೊತೆಗೆ, ನಾಲ್ಕು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ. ಅತ್ತ, ಭಾರತದ ಸೂರ್ಯಕುಮಾರ್ ಯಾದವ್ಗೆ ಪಂದ್ಯ ಶುಲ್ಕದ ಶೇ. ೩೦ರಷ್ಟು ದಂಡ ವಿಧಿಸಿ, ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ. ಏಷ್ಯಾ ಕಪ್ ಟೂರ್ನಿಯ ಅಂಗವಾಗಿ, ಸೆ. ೧೪, ೨೧ ಮತ್ತು ೨೮ರಂದು ನಡೆದ ಪಂದ್ಯಗಳ ವೇಳೆ ಉಭಯ ಆಟಗಾರರು ನಿಯಮಗಳನ್ನು
ಗಾಳಿಗೆ ತೂರಿ, ಪರಸ್ಪರ ಪ್ರಚೋದನಕಾರಿ ವರ್ತನೆ ತೋರಿದ್ದರು. ರವೂಫ್ ಅವರು ಆಕ್ಷೇಪಾರ್ಹಸಂಜ್ಞೆಗಳನ್ನು ಮಾಡಿದ್ದರೆ, ಅತ್ತ ಸೂರ್ಯ ಕುಮಾರ್ ಯಾದವ್ ಪಂದ್ಯದ ಮುಗಿದಾದ
ಮೇಲೆ ಪಾಕಿಸ್ತಾನದ ಆಟಗಾರರೊಂದಿಗೆ ಹಸ್ತಲಾಘವ ನಿರಾಕರಿಸಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು.
ಇದೇ ರೀತಿಯ ಉಲ್ಲಂಘನೆಗಾಗಿ ಪಾಕಿಸ್ತಾನದ ಸಾಹಿಬ್ಜಾದಾ ಫರ್ಹಾನ್ಗೂ ಎಚ್ಚರಿಕೆ ನೀಡಲಾಗಿದ್ದು, ಒಂದು ಡಿಮೆರಿಟ್ ಅಂಕವನ್ನು ನೀಡಲಾಗಿದೆ. ಭಾರತದ ಅರ್ಷದೀಪ್ ಸಿಂಗ್ ವಿರುದ್ಧದ ಆರೋಪ ಸಾಬೀತಾಗಿಲ್ಲ. ಆದರೆ, ಹಾರಿಸ್ ರೌಫ್ ಅವರ ಸನ್ನೆಗಳಿಗೆ ಪ್ರತಿಕ್ರಿಯೆಯಾಗಿ ಅದೇ ರೀತಿಯ ಸನ್ನೆ ಮಾಡಿದಭಾರತದ ಜಸ್ಪ್ರೀತ್ ಬುಮ್ರಾ ಒಂದು ಡಿಮೆರಿಟ್ ಅಂಕವನ್ನು ಒಪ್ಪಿಕೊಂಡಿದ್ದಾರೆ. ಏಷ್ಯಾ ಕಪ್ಗೂ ಮುನ್ನ, ಭಾರತದಲ್ಲಿ ರಾಜಕೀಯ ಉದ್ವಿಗ್ನತೆಗಳ ನಡುವೆ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ನಡೆಸಬೇಕೇ ಎಂಬ ಬಗ್ಗೆ ಸಾರ್ವಜನಿಕ ಚರ್ಚೆ ನಡೆದಿತ್ತು.



