ಬೆಂಗಳೂರು: ಭಾರತದ ಸ್ಟಾರ್ ಬ್ಯಾಟರ್ ರ್ಸೂರ್ಯಕುಮಾರ್ ನಿಯಮ್ಯೂನಿಚ್ನಲ್ಲಿ ಯಶಸ್ವಿಸೊಂಟದ (ತೊಡೆಸಂದು)ಶಸ್ತ್ರ ಚಿಕಿತ್ಸೆಗೆಒಳಗಾಗಿದ್ದಾರೆ.
ಸೂರ್ಯಕುಮಾರ್ ಅವರ ಪತ್ನಿ ದೇವಿಶಾ ಅವರೊಂದಿಗೆ ಜರ್ಮನಿಯಲ್ಲಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಸೂರ್ಯ ಕುಮಾರ್ ಅವರು ಭಾರತ ಮತ್ತು ಅಫ್ಘಾನಿಸ್ಥಾನ ನಡುವಿನ ರೋಚಕ ಹಣಾಹಣಿಯನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಶಸ್ತ್ರಚಿಕಿತ್ಸೆ ನಡೆದಿದೆ, ಎಲ್ಲರ ಕಾಳಜಿ ಮತ್ತು ನನ್ನ ಆರೋಗ್ಯ ಚೇತರಿಕೆಗೆ ಕೋರಿದ ಶುಭಾಶಯಗಳಿಗಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮತ್ತು ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ನಿಮಗೆ ಹೇಳಲು ನನಗೆ ಸಂತೋಷಪಡುತ್ತೇನೆ ಎಂದು ಸೂರ್ಯಕುಮಾರ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಒಂದು ವಾರದಲ್ಲಿ ಸೂರ್ಯಕುಮಾರ್ ಯಾದವ್ ಭಾರತಕ್ಕೆ ಮರಳುವ ಸಾಧ್ಯತೆಯಿದೆ. ಬಳಿಕ, ಬೆಂಗಳೂರಿನ ಎನ್ಸಿಎಯಲ್ಲಿ ರಿಹ್ಯಾಬ್ನಲ್ಲಿರುವುದಾಗಿ ತಿಳಿಸಿದ್ದಾರೆ. ಸೂರ್ಯ ಎರಡನೇ ಬಾರಿ ತೊಡೆಸಂದು ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈಗ ಚೇತರಿಸಿಕೊಳ್ಳಲು ಎರಡು ತಿಂಗಳು ಬೇಕಾಗಬಹುದು. ಐಪಿಎಲ್-2024 ರ ವೇಳೆಗೆ ಫಿಟ್ ಆಗಬಹುದು ಎಂದು ಹೇಳಲಾಗುತ್ತಿದೆ.