ತನ್ನ ಯಶಸ್ಸು ಕ್ಷಣಿಕವಲ್ಲ ಎಂಬುದನ್ನು ಭಾರತದ ಯುವ ಕ್ರಿಕೆಟ್ ಆಟಗಾರ ವೈಭವ್ ಸೂರ್ಯವಂಶಿ ಯುವ ಏಕದಿನ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಉನ್ಮುಕ್ತ್ ಚಂದ್ ಅವರ ೩೮ ಸಿಕ್ಸರ್ಗಳ ದಾಖಲೆಯನ್ನು ಮುರಿದಿದ್ದಾರೆ. ಬ್ರಿಸ್ಬೇನ್ನಲ್ಲಿ ನಡೆದ ಭಾರತ ಮತ್ತು ಆಸ್ಟೆçÃಲಿಯಾ ನಡುವಿನ ಅಂಡರ್ ೧೯
ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ವೈಭವ್ ಅವರು ಕೇವಲ ೧೦ ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಆಸ್ಟೆçÃಲಿಯಾ ವಿರುದ್ಧ ಅವರು ೭೦ ರನ್ ಗಳಿಸಿ ಔಟಾದರು. ಸೂರ್ಯವಂಶಿ ಈಗ ಯುವ ಏಕದಿನ ಪಂದ್ಯಗಳಲ್ಲಿ ಒಟ್ಟು ೫೪೦ ರನ್ ಗಳಿಸಿದ್ದಾರೆ. ಇದರಲ್ಲಿ ಶೇಕಡಾ ೨೬ರಷ್ಟು ರನ್ ಗಳು ಕೇವಲ ಬೌಂಡರಿಗಳಿAದಲೇ ಬಂದಿವೆ ಎಂಬುದು ವಿಶೇಷವಾಗಿದೆ. ಅವರ ಹೆಸರಿನಲ್ಲಿ ಈಗ ೪೧ ಸಿಕ್ಸರ್ಗಳಿವೆ. ಉನ್ಮುಕ್ತ್ ಚಾಂದ್ ಅವರು ೩೮ಸಿಕ್ಸರ್ ಬಾರಿಸಿದ್ದು ಈ ಹಿಂದಿನ ದಾಖಲಾಗಿತ್ತು. ಅದನ್ನು ವೈಭವ್ ಅವರು ಮೀರಿ ನಿಂತಿದ್ದಾದೆ. ಆಸ್ಟೆçÃಲಿಯಾ ಪ್ರವಾಸದಲ್ಲಿ ಅವರು ಮತ್ತಷ್ಟು ಸಾಧನೆಗಳನ್ನು ಮಾಡುವ ನಿರೀಕ್ಷೆ ಇದೆ. ವೈಭವ್-ವಿಹಾನ್ ಶತಕದ ಜೊತೆಯಾಟ ಬುಧವಾರ ಬ್ರಿಸ್ಬೇನ್ ನ ಓವರ್ ನಲ್ಲಿ ನಡೆಯುತ್ತಿವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟೆçÃಲಿಯಾ ತಂಡ ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿತು.
ಭಾರತದ ನಾಯಕ ಆಯುಷ್ ಮಾತ್ರೆ ಅವರು ವಿಲ್ ಬೈರೋಮ್ ಅವರು ಎಸೆದ ಮೊದಲ ಒವರ್ ನ ಎರಡನೇ ಎಸೆತದಲ್ಲೇ ಶೂನ್ಯಕ್ಕೆ ಔಟಾದರು. ಈ
ವೇಳೆ ವಿಹಾನ್ ಮಲ್ಹೋತ್ರಾ ಅವರನ್ನು ಸೇರಿಕೊಂಡ ವೈಭವ್ ಸೂರ್ಯವಂಶಿ ಅವರು ಆಸೀಸ್ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದರು. ಅವರಿಬ್ಬರೂ ಎರಡನೇ ವಿಕೆಟ್ ಆಸೀಸ್ ವಿರುದ್ಧ ಸೂರ್ಯವಂಶಿ ೬ ಸಿಕ್ಸ್!; ಯುವ ಏಕದಿನದಲ್ಲಿ ಹೊಸ ವಿಶ್ವದಾಖಲೆಗೆ ೧೧೭ ರನ್ ಗಳ ಜೊತೆಯಾಟವಾಡಿದ್ದರಿಂದ
ಭಾರತ ದೊಡ್ಡ ಮೊತ್ತದ ಕಡೆಗೆ ಮುಖಮಾಡುವಂತಾಯಿತು.
ಒಟ್ಟು ೬೮ ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ ಅವರು ೫ ಬೌಂಡರಿ ಮತ್ತು ೬ ಸಿಕ್ಸರ್ ಗಳನ್ನು ಒಳಗೊಂಡ ೭೦ ರನ್ ಗಳಿಸಿ ಆಸೀಸ್ ನಾಯಕ ವೈಭವ್ ದೇಶಮುಖ್ ಅವರ ಬೌಲಿಂಗ್ ನಲ್ಲಿ ಆರ್ಯನ್ ಶರ್ಮಾ ಅವರಿಗೆ ಕ್ಯಾಚಿತ್ತು ಔಟಾದರು. ಮತ್ತೊಂದೆಡೆ ವಿಹಾನ್ ಮಲ್ಹೋತ್ರಾ ಅವರು ೭೪ ಎಸೆತದಲ್ಲಿ ೭ ಬೌಂಡರಿ ಮತ್ತು ೧ ಸಿಕ್ಸರ್ ಗಳನ್ನು ಒಳಗೊಂಡ ೭೦ ರನ್ ಗಳಿಸಿ ದೇಶಮುಖ್ ಅವರಿಗೇ ವಿಕೆಟ್ ಒಪ್ಪಿಸಿದರು.