ಬೆಂಗಳೂರು : ಹೆಂಡತಿಯ ನಡತೆಯ ಬಗ್ಗೆ ಅನುಮಾನಗೊಂಡು ಕೇಬಲ್ ವೈರ್ ಅಥವಾ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸೋಲದೇವನಹಳ್ಳಿಯಲ್ಲಿ ಜರುಗಿದೆ.
ಅರ್ಚನಾ ಎಂಬಾಕೆಯೆ ಸಾವನ್ನಪ್ಪಿರುವ ದುರ್ದೈವಿಯಾಗಿದ್ದು, ಆನಂದ್ ಕೊಲೆಗೈದ ಪಾಪಿ ಪತಿಯಾಗಿದ್ದಾನೆ. ಅರ್ಚನಾಳ ನಡತೆಯ ಬಗ್ಗೆ ಸಂಶಯಗೊAಡು ಆಗಾಗೆ ಗಲಾಟೆಯಾಗುತ್ತಿತ್ತು,
ಆಕೆಯು ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದಳು, ಇದೇ ವಿಚಾರವಾಗಿ ನಿನ್ನೆ ಗಲಾಟೆ ಮಾಡಿಕೊಂಡು ಹಗ್ಗ ಅಥವಾ ಕೇಬಲ್ ವೈರ್ನಿಂದ ಬಿಗಿದು ಕೊಲೆ ಮಾಡಿರುತ್ತಾನೆ ಎಂದು ನೆಲಮಂಗಲ ಗ್ರಾಮಾಂತರ ಪೊಲೀಸರು ತಿಳಿಸಿರುತ್ತಾರೆ.
ಕೊಲೆ ಮೊಕದ್ದಮೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.



