ರಾಮನಗರ: ತಾಲ್ಲೂಕಿನ ಲಿಂಗೇಗೌಡನದೊಡ್ಡಿ ಗ್ರಾಮದಲ್ಲಿ ಒಡಿಸ್ಸಾ ಮೂಲದ ಯುವಕ ನರೇಂದ್ರ ಜಗತ್ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಯುವಕ ನರೆಂದ್ರ ಜಗತ್ (21)ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ
ಇಂದು ಮುಂಜಾನೆ ನಡೆದಿರುವ ಘಟನೆ ಇದಾಗಿದೆ.
ರಕ್ತದ ಮಡುವಿನಲ್ಲಿ ಸಾವನ್ನಪ್ಪಿರುವ ಮೃತ ಯುವಕ ನರೇಂದ್ರ ಜಗತ್ಒಡಿಸ್ಸಾ ಮೂಲದವನಾಗಿದ್ದು, ಕಳೆದ ಮೂರು ವರ್ಷಗಳಿಂದ ಲಿಂಗೇಗೌಡನದೊಡ್ಡಿ ಗ್ರಾಮದ ರಾಜೇಂದ್ರ ಅವರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.