This is the title of the web page
This is the title of the web page

“ಡ್ಯಾಶ್” ಹಾಡಿನ ಮೂಲಕ ಕೋಟಿ ಜನರ ಮನಸೆಳೆದ “ಸೂತ್ರಧಾರಿ”

ಹೊಸ ವರ್ಷದ ಸಂಭ್ರಮಕ್ಕಾಗಿ ಡಿಸೆಂಬರ್ ಕೊನೆಯಲ್ಲಿ ‘ಸೂತ್ರಧಾರಿ’ ಚಿತ್ರದ “ಡ್ಯಾಶ್” ‘ ಹಾಡು ಬಿಡುಗಡೆಯಾಗಿತ್ತು. ಈ ಹಾಡಿಗೆ ಪ್ರೇಕ್ಷಕರಿಂದ ಅದ್ಭುತ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಡಿಮೆ ಸಮಯದಲ್ಲೇ ಈ ಹಾಡು 10 ಮಿಲಿಯನ್ ಗೂ ಅಧಿಕ ಬಾರಿ ವೀಕ್ಷಣೆ ಗೊಂಡು ದಾಖಲೆ ನಿರ್ಮಿಸಿದೆ.

ಇತ್ತೀಚಿಗೆ ಕೇಕ್ ಕಟ್ ಮಾಡುವ ಮೂಲಕ ಚಿತ್ರತಂಡ ಸಂಭ್ರಮಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ನವರಸನ್, ‘ನನಗೆ ಈ ಸಂಭ್ರಮ ವಿಶೇಷ. ನಾನು ಇಷ್ಟು ದಿನ ಮಾಡಿರುವ ಸಿನಿಮಾಗಳ ಪೈಕಿ ಇಷ್ಟು ಒಳ್ಳೆಯ ರೆಸ್ಪಾನ್ಸ್ ಯಾವ ಹಾಡಿಗೂ ಸಿಕ್ಕಿಲ್ಲ. ನನ್ನ ಚಿತ್ರದಲ್ಲಿ ಹಿಟ್ ಗೀತೆಯೊಂದು ಬರಬೇಕೆಂದು ಆಸೆಯಿತ್ತು.

ಈಗ ಇಡೇರಿದೆ. ಹೊಸ ವರ್ಷಕ್ಕಾಗಿಯೇ ಈ ಸಾಂಗ್ ಮಾಡಿದ್ದೆವು. ಚಿತ್ರದಲ್ಲಿ ಇನ್ನೂ ಮೂರು ಹಾಡುಗಳಿದ್ದು, ಆ ಹಾಡುಗಳು ಅದ್ಭುತವಾಗಿದೆ. ಫೆಬ್ರವರಿಯಲ್ಲಿ ಟ್ರೇಲರ್ ಬಿಡುಗಡೆ ಮಾಡುತ್ತೇವೆ. ಏಪ್ರಿಲ್, ಮೇನಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದೇವೆ. ಈ ಒಂದು ಕೋಟಿ ವೀಕ್ಷಣೆಯ ಸಕ್ಸಸ್ ಚಿತ್ರತಂಡಕ್ಕೆ ಸಲ್ಲುತ್ತದೆ’ ಎಂದರು.

ಈ ಹಾಡನ್ನು ಬರೆದು, ಸಂಗೀತ ಸಂಯೋಜಿಸುವ ಜೊತೆಗೆ ನಾಯಕನಾಗೂ ನಟಿಸಿರುವ ಚಂದನ್ ಶೆಟ್ಟಿ ಮಾತನಾಡಿ, ‘ಸಾಂಗ್ ರಿಲೀಸ್ ಆದ ಮೂರು ವಾರದಲ್ಲೇ ಒಂದು ಕೋಟಿ ವೀಕ್ಷಣೆ ಆಗಿರುವುದು ಮಾಧ್ಯಮಗಳ ಸಹಕಾರದಿಂದ. ಈ ಗೀತೆಗೆ ನಾನು ಹಾಗೂ ಚೇತನ್ ಸೇರಿ ಸಾಹಿತ್ಯ ಬರೆದಿದ್ದೇವೆ’ ಎಂದರು.

‘ಪ್ರಾರಂಭದಲ್ಲಿ ನಿರ್ಮಾಪಕರಿಗೆ ಹಾಡು ಚೆನ್ನಾಗಿ ಬರಬೇಕು ಸರ್. ಇದೇ ಮೊದಲಬಾರಿ ನಾನು ಬೇರೆ ಸಿನಿಮಾವೊಂದರ ಹಾಡಿನಲ್ಲಿ ನಟಿಸುತ್ತಿದ್ದೆನೆ ಎಂದಿದ್ದೆ. ಇಂದು ಈ ಗೀತೆಯಲ್ಲಿ ನಾನಿರುವುದು ಖುಷಿಯಾಗಿದೆ ಎನ್ನುತ್ತಾರೆ ನಟಿ ಸಂಜನಾ ಆನಂದ್.
‘ಈ ಗೀತೆ ನಮ್ಮ ಸಿನಿಮಾಗೆ ಆಮಂತ್ರಣ ಆಗಿದ್ದು, ಹಾಡು ನೋಡಿ ಬಂದ ಜನರನ್ನು ಇಡೀ ಸಿನಿಮಾವನ್ನು ನೋಡುವ ಹಾಗೆ ಮಾಡುವ ಜವಾಬ್ದಾರಿ ನನ್ನದು ಎಂದು ನಿರ್ದೇಶಕ ಕಿರಣ್ ಕುಮಾರ್ ತಿಳಿಸಿದರು.

ಕೊರಿಯೋಗ್ರಾಫರ್ ಮೋಹನ್ ಮಾಸ್ಟರ್ ಮಾತನಾಡುತ್ತಾ, ಈ ಹಾಡು ಕೇವಲ ಎರಡು ದಿನಗಳಲ್ಲಿ ಆಗಿದೆ. ನನ್ನ ಮತ್ತು ಚಂದನ್ ಶೆಟ್ಟಿ ಕಾಂಬಿನೇಷನ್ ನ 2ನೇ ಹಿಟ್ ಗೀತೆ ಇದು ಎಂದರು.

ಈ ಸಂತಸದ ಸಮಾರಂಭದಲ್ಲಿ ನಟ ತಬಲಾನಾಣಿ, ಸೆಟ್ ವರ್ಕ್ ಮಾಡಿರುವ ಕಿರಣ್, ನಟಿ ಪಲ್ಲವಿ ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್, ಸಾಹಿತಿ ಕಿನ್ನಾಲ್ ರಾಜ್ ತಮ್ಮ ಅನುಭವ ಹಂಚಿಕೊಂಡರು.
ಸಸ್ಪೆನ್ಸ, ಥ್ರಿಲ್ಲರ್ ಕಥಾ ಹಂದರ ಒಳಗೊಂಡ ಈ ಚಿತ್ರದಲ್ಲಿ ಅಪೂರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ.