This is the title of the web page
This is the title of the web page

ಸ್ಟಾರ್ ಸುವರ್ಣದ ಹೊಸತನಕ್ಕೆ ಸಾಕ್ಷಿಯಾದ “ಸುವರ್ಣ ಯುಗಾದಿ ಶುಭಾರಂಭ”

ಸುವರ್ಣ ವಾಹಿನಿಯು ಕನ್ನಡಿಗರಿಗೆ ಹಿಂದಿನಿಂದಲೂ ವಿಭಿನ್ನ ರೀತಿಯ ವಿಶಿಷ್ಟ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ನಮ್ಮ ಲಚ್ಚಿ, ಕಥೆಯೊಂದು ಶುರುವಾಗಿದೆ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆ ಮನೆಯ ಮಾತಾಗಿದೆ.

ಈ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸ್ಟಾರ್ ಸುವರ್ಣ ವಾಹಿನಿಯು “ಸುವರ್ಣ ಯುಗಾದಿ ಶುಭಾರಂಭ” ಎಂಬ ಕಾರ್ಯಕ್ರಮವನ್ನು ನಡೆಸಿದೆ. ಯುಗಾದಿ ಹಬ್ಬವನ್ನು ಹೊಸತನದಿಂದ ಬರಮಾಡಿಕೊಳ್ಳಲು ಸ್ಟಾರ್ ಸುವರ್ಣ ವಾಹಿನಿಯು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಬೇವು ಬೆಲ್ಲದ ರುಚಿಯನ್ನು ಸವಿಯಲು ಕನ್ನಡ ಬೆಳ್ಳಿತೆರೆಯ ಕಲಾವಿದರ ಜೊತೆ ಸುವರ್ಣ ಪರಿವಾರದ ನಕ್ಷತ್ರಗಳು ಪಾಲ್ಗೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ.

ನಟ ಡಾಲಿ ಧನಂಜಯ್ ಅವರ ರಗಡ್ ಡೈಲಾಗ್ ಗೆ ಕುಪ್ಪಳಿಸಿದ ಸುವರ್ಣ ಸ್ಟಾರ್ಸ್. ಗೋಲ್ಡನ್ ಕ್ವೀನ್ ಅಮೂಲ್ಯ ದಂಪತಿಗಳು ಈ ಯುಗಾದಿಯನ್ನು ಸ್ಟಾರ್ ಸುವರ್ಣದ ಜೊತೆ ಸಂಭ್ರಮಿಸಿದ್ದು ಖುಷಿ ತಂದಿದೆ. ಜೊತೆಗೆ ಕಾಂತಾರದ ಸಪ್ತಮಿ ಗೌಡ, ಸಾನಿಯಾ ಅಯ್ಯರ್, ವಾಸುಕಿ ವೈಭವ್ ಸೇರಿದಂತೆ ಇನ್ನಷ್ಟು ಕಲಾವಿದರು ಮನರಂಜನೆಯ ಹೂರಣವನ್ನು ನೀಡಿದ್ದಾರೆ. ‘ಹೊಂಗನಸು’ ಧಾರಾವಾಹಿ ಖ್ಯಾತಿಯ ಮುಕೇಶ್ ಗೌಡ ಆಗಮಿಸಿದ್ದು ಇದೇ ಮೊದಲ ಬಾರಿಗೆ ಡಬ್ಬಿಂಗ್ ಧಾರಾವಾಹಿಯ ಕಲಾವಿದರನ್ನು ಕಾರ್ಯಕ್ರಮದಲ್ಲಿ ಕಾಣಬಹುದು.

ತಪ್ಪದೇ ವೀಕ್ಷಿಸಿ “ಸುವರ್ಣ ಯುಗಾದಿ ಶುಭಾರಂಭ” ಮಾರ್ಚ್ 19 ರಂದು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಹೊಸತನಕ್ಕೆ ಇನ್ನೊಂದು ಹೆಸರು “ಸ್ಟಾರ್ ಸುವರ್ಣ”.