ಬೆಂಗಳೂರು: ಸುಶ್ರಾವ್ಯ ಅಕಾಡೆಮಿ ಫಾರ್ ಮ್ಯೂಸಿಕ್ ಸಂಸ್ಥೆಯ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಡಿಸೆಂಬರ್ 17, ಭಾನುವಾರ ಮಧ್ಯಾಹ್ನ 3-00 ಗಂಟೆಗೆ ಗಿರಿನಗರದ ಎಂಟನೇ ಅಡ್ಡರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪಕ್ಕದಲ್ಲಿರುವ ಸಂಸ್ಕೃತ ಭಾರತಿ ಅಕ್ಷರಂ ಸಭಾಂಗಣದಲ್ಲಿ ಗಾನಕಲಾಭೂಷಣ ಡಾ|| ಆರ್.ಕೆ. ಪದ್ಮನಾಭ ಅಧ್ಯಕ್ಷತೆಯಲ್ಲಿ ಹಾಗೂ ಮುಖ್ಯ ಅತಿಥಿಗಳ ಸ್ಥಾನ ವಹಿಸುವ ಪ್ರೊ|| ಹರಿದಾಸ ಭಟ್ ಇವರುಗಳ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮಗಳು :
ವಾಣಿ ಮತ್ತು ಶಿಷ್ಯರಿಂದ ಪ್ರಾರ್ಥನೆ, ಸುಶ್ರಾವ್ಯ ಚಿಣ್ಣರಿಂದ ದೇವರನಾಮಗಳು, ವಿಶೇಷ ಆಹ್ವಾನಿತರಾದ ಡಾ|| ವಾಣಿಶ್ರೀ (ಖ್ಯಾತ ಜೀವಶಾಸ್ತ್ರಜ್ಞೆ) ಇವರಿಂದ ಕಿರುನುಡಿ, ಕೊಳಲು ವಾದನ : ಸಮರ್ಥ, ಮೃದಂಗ : ಪ್ರಭಂಜನ, ಮತ್ತೊಬ್ಬ ವಿಶೇಷ ಆಹ್ವಾನಿತರಾದ ಶ್ರೀ ಗುರುಪ್ರಸಾದ್ ಅಥಣಿ (ಖ್ಯಾತ ಭೌತಶಾಸ್ತ್ರಜ್ಞ) ಇವರಿಂದ ಕಿರುನುಡಿ, ನಂತರ ಸ್ಮೃತಿ,ಆದ್ಯ, ಪೂರ್ಣಿತಾ ಮತ್ತು ಚಂದನ ಇವರುಗಳಿಂದ ದೇವರನಾಮಗಳು. ತಾಳದ ಸಂಕ್ಷಿಪ್ತ ಪರಿಚಯ ಮಾಡಿಕೊಡಲಿದ್ದಾರೆ
ವೈಭವಿ, ಅದಿತಿ,ಶ್ರೀಯಾ ಮತ್ತು ಶ್ರಾವ್ಯ. ಸಮೂಹ ಗಾಯನ : ಸುಶ್ರಾವ್ಯ ಶಾಲೆಯ ವಿದ್ಯಾರ್ಥಿಗಳಿಂದ. ಸಭಾ ಕಾರ್ಯಕ್ರಮದ ನಂತರ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ ಮಾ|| ಅಕ್ಷಯ್ ಆರ್.ವಿ. ಮತ್ತು ಮಾ|| ಅಭಿಷೇಕ್ ಆರ್.ವಿ. ಸಹೋದರರು. ವಾದ್ಯ ಸಹಕಾರ : ಮಾ|| ಅಭಿರಾಮ್ (ಪಿಟೀಲು), ಮಾ|| ಪ್ರಣವ್ ಎಸ್. ಬಾಲಕೃಷ್ಣ (ಮೃದಂಗ). ಈ ಕಾರ್ಯಕ್ರಮದಲ್ಲಿ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ಮುಖ್ಯಸ್ಥರೂ ಹಾಗೂ ಗುರುಗಳೂ ಆದ ವಿದುಷಿ ಶ್ರೀಮತಿ ವಾಣಿಶ್ರೀಶಾ ಅವರು ವಿನಂತಿಸಿದ್ದಾರೆ.