This is the title of the web page
This is the title of the web page

ಯೋಗ ಗುರುವಿನಿಂದ ಮಕ್ಕಳಿಗೆ ಈಜು ಕಲಿಕಾ ಶಿಬಿರ

ಚಿಂತಾಮಣಿ: ತಾಲ್ಲೂಕಿನಾದ್ಯಂತ ಯೋಗಾ ಮತ್ತು ಮಕ್ಕಳಿಗೆ ಸ್ಕೇಟಿಂಗ್ ಕಲಿಸುವಲ್ಲಿ ಹೆಸರು ಪಡೆದಿರುವ ಇಲ್ಲಿನ ಯೋಗಾಗುರು ಗೋವಿಂದ್‍ರವರು ಮಕ್ಕಳಿಗಾಗಿ ಕಡಿಮೆ ವೆಚ್ಚದಲ್ಲಿ ಬೇಸಿಗೆಯ ರಜೆ ದಿನಗಳಲ್ಲಿ ಯೋಗ, ಸ್ಕೇಟಿಂಗ್ ಶಿಬಿರದ ಜೊತೆಗೆ ಮಕ್ಕಳಿಗೆ ಈಜು ಕಲಿಸುತ್ತಿದ್ದಾರೆ.

ಈಜು ಬಾರದ ಹಲವಾರು ಮಕ್ಕಳು ಈಜು ಕಲಿಯಲು ಹೋಗಿ ಕೆರೆ, ಕುಂಟೆ, ಬಾವಿ ಮತ್ತಿತರ ಕಡೆ ಹೋಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಈಜು ಕಲಿಸುವ ಶಿಬಿರವನ್ನು ಹಮ್ಮಿಕೊಂಡಿದ್ದಾರೆ.

ಬೇಸಿಗೆಯಲ್ಲಿ ಮಕ್ಕಳಿಗೆ ನೀರಿನಲ್ಲಿ ಆಟವಾಡುವುದೆಂದರೆ ಎಂದರೆ ಎಲ್ಲಿಲ್ಲದ ಪ್ರೀತಿ, ದೊಡ್ಡ ದೊಡ್ಡ ಮಹಾ ನಗರಗಳಲ್ಲಿ ಐಷರಾಮಿ ಹೋಟೆಲ್, ರೆಸಾರ್ಟಗಳಲ್ಲಿ ಈಜು ಕೊಳಗಳಿವೆ ಆದರೆ ಪಟ್ಟಣ, ನಗರ ಮತ್ತು ಗ್ರಾಮೀಣ ಮಕ್ಕಳಿಗೆ ಹರಿಯುವ ಹೊಳೆ, ನದಿ, ಕೆರೆ, ಬಾವಿಗಳು ಈಜುಕೊಳಗಳಾದರೆ ಇನ್ನು ಕೆಲವು ಕಡೆ ತೋಟಕ್ಕೆ ನೀರಾವರಿಗೆ ಬಳಸಲು ಕಟ್ಟಿರುವ ನೀರು ಸಂಗ್ರಹದ ಟ್ಯಾಂಕ್‍ಗಳು ಸಹ ಮಕ್ಕಳ ಈಜು ಕೊಳಗಳಾಗಿ ಬಳಕೆಯಾಗುತ್ತವೆ.

ಗೋವಿಂದ್‍ರವರು ಸುಮಾರು 3 ರಿಂದ 40 ವರ್ಷದೊಳಗಿನ ವಯಸ್ಸಿನವರಿಗೂ ಬೇಸಿಗೆ ಕಾಲದಲ್ಲಿ ಈಜು ಕಲಿಯಲು ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಈಜು ಕಲಿಸಲು ಮುಂದಾಗಿರುವ ಅವರು ನೀರಿನ ಬಾವಿಗಾಗಿ ಬಾಗೇಪಲ್ಲಿ ಮುಖ್ಯ ರಸ್ತೆಯಲ್ಲಿರುವ ನಲಮಾಚನಹಳ್ಳಿ ರೈತ ಲಿಂಗಾರೆಡ್ಡಿ ಎಂಬ ತೋಟದ ಬಾವಿಯಲ್ಲಿ ಈಜು ಕಲಿಸಲು ಆಯ್ಕೆ ಮಾಡಿಕೊಂಡಿದ್ದಾರೆ.

ಈಜು ಬಾರದೆ ಕೆರೆಗಳಿಗೆ ಈಜಲು ಹೋಗಿ ಮಕ್ಕಳು ಸಾವನ್ನಪ್ಪುತ್ತಿರುವ ಸುದ್ದಿ ಮಾಧ್ಯ ಮಗಳಲ್ಲಿ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಶಿಬಿರದಲ್ಲಿ ಮಕ್ಕಳಿಗೆ ಪರಿಪೂರ್ಣವಾಗಿ ಈಜು ಕಲಿತು ಈಜುವಂತೆ ಗೋವಿಂದ್ ರವರು ಮಕ್ಕಳ ತರಬೇತಿ ಸಮಯದಲ್ಲಿ ವಿವರಿಸುತ್ತಿರುವುದರ ಜೊತೆಗೆ ನೀರಿನಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರದಂತೆ ಹಾಗೂ ಯಾವದೇ ಸೋಂಕು ಗಳು ಹರಡದಂತೆ ಮುಂಜಾಗ್ರತೆ ವಹಿಸಿ ತರಬೇತಿ ನೀಡುತ್ತಿದ್ದು ನಗರದಲ್ಲಿ ಅವರಿಂದ ಈಗಾ ಗಲೇ ತರಬೇತಿ ಪಡೆದ ನೂರಾರು ಮಕ್ಕಳು ಈಜ ಕಲಿಯುವಲ್ಲಿ ಯಶಸ್ವಿಯಾಗಿದ್ದಾರೆ.