ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಭಾರತದ ಶಟ್ಲರ್ಗಳಿಗೆ ಮತ್ತೂಂದು ಸವಾಲು ಎದುರಾಗಿದೆ. ಮಂಗಳವಾರ `ಸ್ವಿಸ್ ಓಪನ್ ಸೂಪರ್ 300? ಬ್ಯಾಡ್ಮಿಂಟನ್ ಟೂರ್ನಿ ಆರಂಭವಾಗಲಿದ್ದು, ನಮ್ಮವರ ಆಟ ಹೇಗಿದ್ದೀತು ಎಂಬ ಪ್ರಶ್ನೆ ಎದುರಾಗಿದೆ.
ಪುರುಷರ ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಮೊನ್ನೆಯಷ್ಟೇ ಅವರು ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಸೆಮಿಫೈನಲ್ ತನಕ ಸಾಗಿದ್ದರು. 7ನೇ ಶ್ರೇಯಾಂಕದ ಲಕ್ಷ್ಯ ಸೇನ್ ಮಲೇಷ್ಯಾದ ಲಿಯಾಂಗ್ ಜುನ್ ಹಾವೊ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಇಲ್ಲಿಂದ ಮುಂದೆ ಸಾಗಿದರೆ 2021ರ ಚಾಂಪಿಯನ್ ಲೀ ಜೀ ಜಿಯಾ ಎದುರಾಗುವ ಸಾಧ್ಯತೆ ಇದೆ.