ಲಾಸನ್ನೆ: ಭಾರತದ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರನ್ನು ಸ್ವಿಟ್ಜರ್ಲ್ಯಾಂಡ್ ಪ್ರವಾಸೋದ್ಯಮವು ಯುರೋಪ್ನ ಉನ್ನತ ಸ್ಥಳವಾದ ಜಂಗ್ಫ್ರಾಜೋಸ್ನಲ್ಲಿರುವ ಪ್ರಖ್ಯಾತ ಐಸ್ ಪ್ಯಾಲೇಸ್ನಲ್ಲಿ ಫಲಕವೊಂದನ್ನು ಸ್ಥಾಪಿಸಿ ಗೌರವಿಸಿದೆ.
ನೀರಜ್ ಚೋಪ್ರಾ ಅವರಿಂದಲೇ ಅವರ ಸ್ಮರಣಾರ್ಥ ಸ್ಥಾಪಿಸಿದ ಫಲಕವನ್ನು ಅನಾವರಣಗೊಳಿಸಲಾಯಿತು ಎಂದು ಸ್ವಿಟ್ಜರ್ಲ್ಯಾಂಡ್ ಪ್ರವಾಸೋದ್ಯಮ ಪ್ರಕಟನೆಯಲ್ಲಿ ತಿಳಿಸಿದೆ. ಇದೇ ಸಂದರ್ಭ ಪ್ರವಾಸಿಗರ ಆಕರ್ಷಣೆಗಾಗಿ ತನ್ನಲ್ಲಿದ್ದ ಜಾವೆಲಿನ್ ಒಂದನ್ನು ದೇಣಿಗೆಯಾಗಿ ನೀಡಿದರು. ಈ ಜಾವೆಲಿನ್ ಅನ್ನು ಫಲಕದ ಬದಿಯಲ್ಲಿ ಇರಿಸಲಾಗಿದೆ.
ಐಸ್ ಪ್ಯಾಲೇಸ್ನಲ್ಲಿ ಈಗಾಗಲೇ ಸ್ಥಾಪಿಸಿದ ರೋಜರ್ ಫೆಡರರ್, ಗಾಲ್ಫ್ ಆಟಗಾರ ರೋರಿ ಮೆಕ್ರಾಯ್ ಅವರ ಫಲಕಗಳ ಸಾಲಿಗೆ ನೀರಜ್ ಚೋಪ್ರಾ ಸೇರಿ ಕೊಂಡಿದ್ದಾರೆ. ಜಂಗ್ಫ್ರಾಜೋಸ್ನಲ್ಲಿರುವ `ವಾಲ್ ಆಫ್ ಫೇಮ್’ ಆಟಗಾರರ ಸಾಧನೆ ಮತ್ತು ಸಮರ್ಪಣೆಯ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ಸ್ವಿಸ್ ಪ್ರವಾಸೋದ್ಯಮ ತಿಳಿಸಿದೆ.