ಮಾಗಡಿ: ಮಾಜಿ ವಿಧಾನಪರಿಷತ್ ಸದಸ್ಯರು ನನ್ನ ದೊಡ್ಡಪ್ಪ ಟಿ.ಎ.ರಂಗಯ್ಯರವರ ತತ್ವ ಸಿದ್ದಾಂತ, ಆದರ್ಶ, ಪ್ರಾಮಾಣಿಕತೆ, ನಿಷ್ಠೆ ಪರಿಪಾಲನೆಯೇ ನನ್ನ ಧ್ಯೇಯೋದ್ದೇಶ ಎಂದು ರಾಜ್ಯ ಬೆಸ್ಕಾಂ ನೌಕರರ ಸಂಘದ ಮಾಜಿ ರಾಜ್ಯಾದ್ಯಕ್ಷರಾದ ತಗ್ಗೀಕುಪ್ಪೆ ರಾಮಕೃಷ್ಣಯ್ಯ ಹೇಳಿದರು.
ತಮ್ಮ ಸ್ವಗೃಹದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿ.ಎ.ರಂಗಯ್ಯ ಅವರು ಮಾಜಿ ಮುಖ್ಯಮಂತ್ರಿಗಳಾದ ದೇವರಾಜು ಅರಸು ರಾಮಕೃಷ್ಣ ಹೆಗಡೆಯವರ ಗರಡಿಯಲ್ಲಿ ಬೆಳೆದು ಬಂದವರು.ಅವರು ತಾಲ್ಲೂಕಿಗೆ ಶ್ರೀರಂಗ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣರವರ ಜೊತೆಗೂಡಿ ತಾಲ್ಲೂಕಿನ ರೈತರ ಸಂಕಷ್ಟ ಬಗೆಹರಿಸಲು ಮೊಟ್ಟಮೊದಲ ಭಾರಿಗೆ ತಮ್ಮ ಉಜ್ವಲ ಭವಿಷ್ಯಕ್ಕೆ ಕನಸು ಕಂಡರು.ಜೊತೆಗೆ ಮಾಜಿ ಸಚಿವರಾದ ಹುಲೀಕಟ್ಟೆ ಚನ್ನಪ್ಪರವರ ಜೊತೆಗೂಡಿ ತಾಲ್ಲೂಕಿನ ಪ್ರಮುಖ ಜಲಾಶಯವಾದ ವೈಜಿ ಗುಡ್ಡ(ಗುಲಗಂಜಿಗುಡ್ಡ)ನಿರ್ಮಿಸುವ ಮೂಲಕ ನೀರಾವರಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದರು.ಹಾಗೂ ತಾಲ್ಲೂಕಿನಲ್ಲಿ ಆರು ಪ್ರಮುಖ ಕೆರೆಗಳನ್ನು ನಿರ್ಮಿಸಲು ಶ್ರಮಿಸಿದ್ದಾರೆ.
ಬೆಸ್ಕಾಂನಲ್ಲಿ 6 ಸಾವಿರ ಬಡ ಕುಟುಂಬದ ಯುವಕರಿಗೆ ನೌಕರಿ ಕೊಡಿಸುವ ಮೂಲಕ ಬಡ ಕುಟುಂಬಕ್ಕೆ ತುತ್ತಿನ ಚೀಲವನ್ನು ತುಂಬಿಸಲು ಶ್ರಮಿಸಿದ್ದರು ಎಂದು ರಾಮಕೃಷ್ಣಯ್ಯ ತಿಳಿಸಿದರು.ನನ್ನನ್ನು ಕೂಡಾ ಬೆಸ್ಕಾಂ ನೌಕರನಾಗಿ ಕೆಲಸ ಕೊಡಿಸುವ ಮೂಲಕ ನನ್ನ ಬದುಕಿಗೆ ಟಿ.ಎ.ರಂಗಯ್ಯ ಅವರು ದಾರಿ ದೀಪವಾದರು.ನಾನು ಪ್ರಸ್ತುತ ತಾಲ್ಲೂಕು ಒಕ್ಕಲಿಗರ ಸಂಘದ ಅದ್ಯಕ್ಷರಾಗಿ ತಾಲ್ಲೂಕಿನ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದ್ದುಕೆಂಪೇಗೌಡ ಪ್ರೌಡ ಶಾಲಾಭಿವೃದ್ದಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ.
ಬೆಸ್ಕಾಂ ನೌಕರರ ಸಂಘದಲ್ಲಿ ಸತತವಾಗಿ 27 ವರ್ಷಗಳಿಂದ ಹಿರಿಯ ಉಪಾಧ್ಯಕ್ಷನಾಗಿ ರಾಮನಗರ ಮತ್ತು ಬೆಂಗಳೂರು ಜಿಲ್ಲೆ ಉಪಾಧ್ಯಕ್ಷನಾಗಿ ಎರಡು ಭಾರಿ ಅವಿರೋಧವಾಗಿ ಆಯ್ಕೆಯಾಗಿ ಜೊತೆಗೆ ರಾಜ್ಯ ಬೆಸ್ಕಾಂ ನೌಕರರ ಸಂಘದ ಅಧ್ಯಕ್ಷನಾಗಿ ನೂರಾರು ಬಡ ಕುಟುಂಬದ ಯುವಕರಿಗೆ ಕೆಲಸ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.ಮದ್ಯಮವರ್ಗದ ನೌಕರರಿಗೆ ಲಕ್ಷಾಂತರ ರೂಪಾಯಿ ಕುಟುಂಬಕ್ಕೆ ಪೆನ್ಸನ್ ಬರಲು ನನ್ನ ಹೋರಾಟದ ಪ್ರತಿಫಲವಾಗಿದೆ ಎಂದು ರಾಮಕೃಷ್ಣಯ್ಯ ತಿಳಿಸಿದರು.
ನಾನು ರಾಜ್ಯ ಬೆಸ್ಕಾಂ ನೌಕರರ ಸಂಘದ ಅದ್ಯಕ್ಷರಾಗಲು ಕಾರಣದ ಜೊತೆಗೆ ನೂರಾರು ಬಡ ಕುಟುಂಬದ ಯುವಕರಿಗೆ ಕೆಲಸ ಕೊಡಿಸಿದ್ದೇನೆ.ಇದು ನನ್ನ ಪ್ರಾಮಾಣಿಕ ನಿಷ್ಠೆಗೆ ಪ್ರಮುಖ ಕಾರಣವಾಗಿದೆ.ಇಂಧನ ಸಚಿವರಾದ ಡಿ.ಕೆ.ಶಿವಕುಮಾರ್ ಅವರ ಪರಿಶ್ರಮದಿಂದವಿದ್ಯುತ್ ಸಮಸ್ಯೆ ಬಗೆಹರಿಸಲು ಪಾವಗಡದಲ್ಲಿ 6000 ಮೆಗಾವ್ಯಾಟ್ ಪ್ರಾರಂಭಿಸಿದ ಪರಿಣಾಮವಾಗಿ ಬೆಸ್ಕಾಂ ವಿದ್ಯುತ್ ಸಮಸ್ಯೆ ಬಗೆಹರಿಯಲು ಕಾರಣವಾಯಿತು.ನಾನು ರಾಜ್ಯದ ಆರು ಇಲಾಖೆಯಲ್ಲಿ ನೌಕರರಿಗೆ ನ್ಯಾಯ ಒದಗಿಸಲು ಶ್ರಮಿಸಿದ್ದೇನೆ.ಯುವಕರಿಗೆ ಕೆಲಸ ಕೊಡಿಸಲು ಒಂದೇ ಒಂದು ಟೀಯನ್ನು ಸ್ವೀಕರಿಸಿಲ್ಲ.
ಸರಕಾರಕ್ಕೆ 30 ಸಾವಿರ ಲಾಭ ಬರುತಿದ್ದನ್ನು 1 ಕೋಟಿ ಲಾಭ ಬರಲು ಕಾರಣಿಭೂತನಾಗಿದ್ದೇನೆ ಎಂದ ಅವರು ಯಾವುದೇ ಲಾಭಾಂಶವಿಲ್ಲದಿದ್ದರೂ ಮಾಗಡಿ ಕ್ಲಬ್ ಪ್ರಾರಂಭಿಸುವ ಮುಖೇನ ಕ್ರೀಡೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ.ಕೆಲವೇ ದಿನಗಳಲ್ಲಿ ಸಂಗೀತ ಕ್ಲಾಸ್,ಯೋಗಾಸನ,ಭರತನಾಟ್ಯ,ಸ್ವಿಮ್ಮಿಂಗ್ ಫೂಲ್ ಪ್ರಾರಂಭಿಸಲಾಗುವುದು ಎಂದು ರಾಮಕೃಷ್ಣಯ್ಯ ವಿವರಿಸಿದರು.ಇದೇ ತಿಂಗಳು ಲೋಕಸಭಾ ಚುನಾವಣೆ ಸಮೀಪಿಸುತಿದ್ದು ಶಾಸಕ ಹೆಚ್.ಸಿ.ಬಾಲಕೃಷ್ಣ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರ ಸಲಹೆ ಸೂಚನೆ ಮಾರ್ಗದರ್ಶನದಲ್ಲಿ ಕ್ರಿಯಾಶೀಲ ಸಂಸದರಾದ ಡಿ.ಕೆ.ಸುರೇಶ್ ಅವರ ಗೆಲುವಿಗೆ ಶ್ರಮಿಸಲಾಗುವುದು.
ಸಂಸದ ಡಿ.ಕೆ.ಸುರೇಶ್ ಅವರು ಮಾಗಡಿ ತಾಲ್ಲೂಕಿಗೆ ತಮ್ಮದೇ ಆದಂತಹ ವಿಶೇಷ ಅಭಿವೃದ್ಧಿ ಕಾರ್ಯಕ್ರಮವನ್ನು ಮಾಡಿದ್ದು ಹೇಮಾವತಿ ಯೋಜನೆ ಪೂರ್ಣಗೊಳಿಸಲು ಸರಕಾರದ ಮೇಲೆ ಒತ್ತಡ ಹೇರಿ ಲಿಂಕ್ ಕೆನಾಲ್ ಯೋಜನೆಗೆ 900 ಕೋಟಿ,ಮಾಗಡಿ ಪಟ್ಟಣದ ಕೆಂಪೇಗೌಡ ಕೋಟೆ ಮೈದಾನ ಅಭಿವೃದ್ಧಿಗೆ ,50 ಕೋಟಿಕೆಂಪೇಗೌಡ ಐಕ್ಯಸ್ಥಳ ಅಭಿವೃದ್ಧಿಗೆ ವಿಶೇಷ ಅನುಧಾನ,ತಾಲ್ಲೂಕಿನ ರೈತರ ಜಮೀನುಗಳನ್ನು ಪೋಡಿಮುಕ್ತವನ್ನಾಗಿ ಮಾರ್ಪಡಿಸಲು ಕಂದಾಯ ಇಲಾಖೆಯ ಅಧಿಕಾರಿ ವರ್ಗಗಳ ಮೇಲೆ ಒತ್ತಡ ಹೇರಿ ಅವರ ನೆರವಿಗೆ ಶ್ರಮಿಸುತ್ತಿದ್ದಾರೆ.
ಶಾಸಕ ಹೆಚ್.ಸಿ.ಬಾಲಕೃಷ್ಣ ಅವರೂ ಕೂಡಾ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಯಾವ ಇಲಾಖೆಯಲ್ಲಿ ಎಷ್ಟೆಲ್ಲಾ ಅನುದಾನ ತರಬಹುದೆಂಬ ಅನುಭವವಿದ್ದು ಬಾಲಕೃಷ್ಣ ಅವರು ಅಭಿವೃದ್ಧಿಯ ಚಿಂತನೆಯಡಿಯಲ್ಲಿ ಡಿ.ಕೆ.ಸುರೇಶ್ ಅವರ ಗೆಲುವಿಗೆ ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರನ್ನು ಒಗ್ಗೂಡಿಸುವಲ್ಲಿ ಅವಿರತವಾಗಿ ಪ್ರಯತ್ನ ಮಾಡುತ್ತಿದ್ದಾರೆ. ನಾನೂ ಕೂಡಾ ತಗ್ಗೀಕುಪ್ಪೆ ಸೇರಿದಂತೆ ತಾಲ್ಲೂಕಿನಾದ್ಯಂತ ಯುವಕರನ್ನು ಸಂಘಟಿಸಿ ಡಿ.ಕೆ.ಸುರೇಶ್ ಗೆಲುವಿಗೆ ಒಂದೊಂದು ಮತಗಳಿಗೆಮನ್ನಣೆ ನೀಡುವ ಮೂಲಕ ಸುರೇಶ್ ಗೆಲುವಿಗೆ ಹಗಲಿರುಳು ಶ್ರಮಿಸಲಾಗುವುದು ಎಂದು ರಾಮಕೃಷ್ಣಯ್ಯ ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.