ಗುಂಡ್ಲುಪೇಟೆ: ಪಟ್ಟಣದ ತಾಲೂಕು ಸಭಾಭವನದಲ್ಲಿ ನಡೆದರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಗುಂಡ್ಲುಪೇಟೆ ಇವರ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಅಂಗವಾಗಿ ವಿಶ್ವಮಾನವ ದಿನಚರಣೆ ಆಚರಿಸಲಾಯಿತುಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿಗಳಾದ ಟಿ ರಮೇಶ್ ಬಾಬುರವರುಎಲ್ಲರಿಗೂ ಸಮಬಾಳು ಸಮಾನ ಅವಕಾಶ ಸಿಗಬೇಕು.
ಸರ್ವ ಜನಾಂಗದ ಶಾಂತಿಯ ತೋಟ ಎಂದು ಸಾರಿದ ವಿಶ್ವಮಾನವ ಕುವೆಂಪು ರವರು ಹಾಗೆ ಅವರಿಗೆ ಜ್ಞಾನಪೀಠ ಮತ್ತು ಪದ್ಮಭೂಷಣ ಕರ್ನಾಟಕ ರತ್ನ ಹಲವಾರು ಪ್ರಶಸ್ತಿಗಳು ದೊರಕಿವೆ ಕುವೆಂಪು ಅವರು ಜಾತ್ಯತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವನ ಸಂದೇಶವಾಗಿದೆ ಬುದ್ಧ ಬಸವ ಅವರ ಆಶಯ ಸಮಾಜದಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಬಳಸಿಕೊಳ್ಳಬೇಕು ಪ್ರತಿಯೊಂದು ಮಗು ಹುಟ್ಟುವಾಗ ವಿಶ್ವಮಾನವ ಬೆಳೆಯುತ್ತಾ ಅಲ್ಪ ಮಾನವನಾಗುತ್ತಾನೆ ಎಂದು ಅವರು ಹೇಳಿದರು.
ವಿಶ್ವಮಾನವನ ಸಂದೇಶ ಸರಳ ಮನುಜ ಕುಲ ವಿಶ್ವಪಥ ಸರ್ವೋದಯ ಸಮನ್ವಯ ಇವುಗಳ ಮೇಲೆ ಈ ದರ್ಶನ ನಿಂತಿದೆ ಮಾನವ ಕುಲ ಎಂದರೆ ಎಲ್ಲರೂ ಒಂದೇ ಎಲ್ಲರೂ ಸಮಾನ ಎಂದು ಸಾರಿದವರು ಕುವೆಂಪು ಅವರದು ಅಪರೂಪದ ವ್ಯಕ್ತಿತ್ವ ಒಂದು ರೀತಿಯಲ್ಲಿ ಯುಗಪುರುಷರು ಅಂತ ಹೇಳಲು ಬಯಸುತ್ತೇನೆ ಅವರನ್ನು ಆಳವಾಗಿ ನೋಡಿದಾಗ ಅತ್ಯಂತ ಮಾನವೀಯ ಗುಣಗಳಿರುವ ವ್ಯಕ್ತಿ ವಿಸ್ತಾರವಾಗಿ ನೋಡಿದಾಗ ವಿಶ್ವ ಮಾನವರಾಗಿ ಕಾಣುತ್ತಾರೆ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿ ನುಡಿದ ಎಲ್ಐಸಿ ಅಭಿವೃದ್ಧಿ ಅಧಿಕಾರಿಯಾದ ಜಿಎನ್ ಮಹೇಶ್ ರವರು ಜಾತಿ ಮತ ಕಟ್ಟುಪಾಡುಗಳಿಂದ ಬಂಧಿಸಲಾಗಿದೆ ಹಾಗಾಗಬಾರದು ಜಾತ್ಯತೀತ ಮನೋಭಾವ ಮೂಡಿ ಬಂದ ಆಶಯವೇ ವಿಶ್ವ ಮಾನವನ ಸಂದೇಶವಾಗಿದೆ ಹಾಗೆ ಮೂಡನಂಬಿಕೆ ಕಂದಾಚಾರಗಳಿಂದ ದೂರ ಇರಬೇಕು ಎಂದು ಹಾಗೆ ಬುದ್ಧ ಬಸವ ಅಂಬೇಡ್ಕರ್ ಅವರ ಆಶಯದಂತೆ ಸಮ ಸಮಾಜ ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಟಿಎಪಎಂಸಿ ಅಧ್ಯಕ್ಷರಾದ ಆಲತ್ತೂರು ಜಯರಾಮ್ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಶಾಸಕರ ಜೊತೆ ಮಾತ
ನಾಡಿ ವಿಶ್ವಮಾನವನ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುವುದು ಮತ್ತು ನಾವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಪುರಸಭೆಯ ಮುಖ್ಯ ಅಧಿಕಾರಿಯಾದ ವಸಂತ್ ಕುಮಾರಿ ಹಾಗೂ ತಾಲೂಕು ದಂಡಾಧಿಕಾರಿಗಳಾದ ಟಿ ರಮೇಶ್ ಬಾಬುರವರು ಮತ್ತು ಜಿ.ಎನ್.ಮಹೇಶ್ರವರು ಆಲತ್ತೂರು ಜಯರಾಮ್ ಕನ್ನಡಪರ ಸಂಘಟನೆಯ ಮುಖಂಡರಾದ ಬ್ರಹ್ಮಾನಂದ ರಾಘವಾಪುರ ಗ್ರಾಪಂ ಸದಸ್ಯರಾದ ಆರ್ ಡಿ ಉಲ್ಲಾಸ್ ಮತ್ತು ದಲಿತ ಮುಖಂಡರಾದ ಮುತ್ತಣ್ಣ ಶಂಕರ್ ಮುನೀರ್
ಪಾಷ ಈಶ್ವರ್ ಹಾಗೂ ವಿವಿಧ ಸಂಘಟನೆಯ ಮುಖಂಡರು ಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.