ಮುಂಬೈ: ಬಹು ನಿರೀಕ್ಷಿತ ೨೦೨೬ರ ಟಿ೨೦ ವಿಶ್ವಕಪ್ಗೆ ವೇದಿಕೆ ಸಿದ್ಧಗೊಂಡಿದೆ. ಅಂತರರಾಷ್ಟ್ರೀಯ ಕ್ರಿಕೇಟ್ ಕೌನ್ಸಿಲಿಂಗ್ (ICC) ೨೦೨೬ರ ಟಿ೨೦ ವಿಶ್ವಕಪ್ನ ಅಧಿಕೃತ
ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಆತಿಥೇಯರು ಮತ್ತು ಹಾಲಿ ಚಾಂಪಿಯನ್ಸ್ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ
ಸ್ಥಾನ ಪಡೆದಿರುವುದು ಈ ಬಾರಿಯ ಟೂರ್ನಿಯ ಹೈಲೈಟ್ ಆಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಈ ಟೂರ್ನಿಯು ಫೆಬ್ರವರಿ ೭, ೨೦೨೬ ರಂದು ಆರಂಭವಾಗಲಿದೆ.
ಟೂರ್ನಿಯ ಬಹುನಿರೀಕ್ಷಿತ ಪಂದ್ಯದಲ್ಲಿ ಭಾರತಮತ್ತು ಪಾಕಿಸ್ತಾನ ತಂಡಗಳು ಫೆಬ್ರವರಿ ೧೫ ರಂದು ಕೊಲಂಬೋದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದ್ದು, ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ ೮ ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ; ಇದರ ಜೊತೆಗೆ, ೨೦೨೪ರ ಆವೃತ್ತಿಯ ವಿಜೇತ ನಾಯಕ ರೋಹಿತ್ ಶರ್ಮಾ ಅವರನ್ನು ೨೦೨೬ರ ಟಿ೨೦ ವಿಶ್ವಕಪ್ನ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಿಸಲಾಗಿದೆ. ಟಿ೨೦ ವಿಶ್ವಕಪ್ ೨೦೨೬ ವೇಳಾಪಟ್ಟಿ ಪ್ರಕಟಣೆಗಾಗಿ ನಡೆದ ಭವ್ಯ ಕಾರ್ಯಕ್ರಮದಲ್ಲಿಐಸಿಸಿ ಅಧ್ಯಕ್ಷ ಜಯ್ ಶಾ, ಭಾರತದ ಟಿ೨೦ ವಿಶ್ವಕಪ್ ೨೦೨೪ ವಿಜೇತ ನಾಯಕ ರೋಹಿತ್ಶರ್ಮಾ ಮತ್ತು ಭಾರತದ ಮಹಿಳಾ ವಿಶ್ವಕಪ್ ೨೦೨೫ ವಿಜೇತ ನಾಯಕಿ ಹರ್ಮನ್ಪ್ರೀತ್ ಕೌರ್ ಸೇರಿದಂತೆ ಹಲವು ತಾರೆಯರು ಭಾಗವಹಿಸಿದ್ದರು.
ಭಾರತ ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯ : ಎರಡು ಏಷ್ಯಾದ ದೈತ್ಯ ತಂಡಗಳು ಫೆಬ್ರವರಿ ೧೫, ೨೦೨೬ ರಂದು ಕೊಲಂಬೋದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಸಂಜೆ ೭:೦೦ PM IST ಕ್ಕೆ ಮುಖಾಮುಖಿಯಾಗಲಿವೆ. ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಒಂದು ವೇಳೆ ಪಾಕಿಸ್ತಾನ ಫೈನಲ್ ತಲುಪಿದರೆ,ಪ್ರಶಸ್ತಿ ಕದನ ಕೂಡ ಶ್ರೀಲಂಕಾದಲ್ಲಿ ನಡೆಯಲಿದೆ. ಪ್ರಮುಖ ದಿನಾಂಕಗಳು ಮತ್ತು ಫೈನಲ್
ಸ್ಥಳ: ಟೂರ್ನಿ ಆರಂಭ: ಫೆಬ್ರವರಿ ೭, ೨೦೨೬ ಫೈನಲ್: ಮಾರ್ಚ್ ೮, ೨೦೨೬, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ ಸೆಮಿ-ಫೈನಲ್ಸ್ ಸ್ಥಳಗಳು: ಕೋಲ್ಕತ್ತಾ ಮತ್ತು
ಮುಂಬೈಆತಿಥ್ಯ ವಹಿಸುವ ಸ್ಥಳಗಳು
ಭಾರತ: ಅಹಮದಾಬಾದ್, ಚೆನ್ನೈ ನವದೆಹಲಿ, ಕೋಲ್ಕತ್ತಾ, ಮುಂಬೈ
ಶ್ರೀಲಂಕಾ: ಕೊಲಂಬೋ (ಪ್ರೇಮದಾಸ,ಸಿಂಹಳೀಸ್ ಸ್ಪೋರ್ಟ್ ಕ್ಲಬ್), ಕ್ಯಾಂಡಿ.



