ಬುಧವಾರ, ಜೂನ್ 5ರಂದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಐರ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ಇದೀಗ ಕ್ರಿಕೆಟ್ ಜಗತ್ತು ನಿರೀಕ್ಷೆಯಲ್ಲಿ ಮುಳುಗಿದ್ದು, ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯವು ರೋಚಕ ಸ್ಪರ್ಧೆಯ ಭರವಸೆ ನೀಡಲಿದೆ.
ಆದರೆ, ವರುಣ ದೇವ ಪಂದ್ಯಕ್ಕೆ ಕೃಪೆ ತೋರುತ್ತಾನೆಯೇ ಅಥವಾ ಬಹುನಿರೀಕ್ಷಿತ ಹಣಾಹಣಿಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆಯೇ ಎಂದು ಕಾದುನೋಡಬೇಕಿದೆ.
ನ್ಯೂಯಾರ್ಕ್ನ ಹೃದಯ ಭಾಗದಲ್ಲಿರುವ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಈ ಹೈ-ವೋಲ್ಟೇಜ್ ಪಂದ್ಯವನ್ನು ಆಯೋಜಿಸಲು ಸಜ್ಜಾಗಿದೆ.
ಸವಾಲಿನ ಪಿಚ್ ಪರಿಸ್ಥಿತಿಗಳಿಗೆ ಹೆಸರುವಾಸಿಯಾದ ಮೈದಾನವು ಕೆಲವೇ ದಿನಗಳ ಹಿಂದೆ ತನ್ನ ಮೊದಲ ಟಿ20 ಪಂದ್ಯಕ್ಕೆ ಸಾಕ್ಷಿಯಾಯಿತು. ಆಗ ಶ್ರೀಲಂಕಾ ತಂಡದ ಬ್ಯಾಟಿಂಗ್ ವಿಭಾಗ ಕೇವಲ 77 ರನ್ಗಳಿಗೆ ಕುಸಿಯಿತು.