ನಿನ್ನೆಯಿಂದ ಟಿ ಟ್ವೆಂಟಿ ವಿಶ್ವಕಪ್ನ ಸೂಪರ್ 8 ಪಂದ್ಯಗಳು ಆರಂಭವಾಗಿದ್ದು, ಇಂದು ಬೆಳಗಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ಎದುರು ಎಂಟು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್ ತಂಡ ತನ್ನ ಹಳೆಯ ಫಾರ್ಮ್ ಗೆ ಮರಳಿದೆ.
ಇಂದು ನಡೆಯಲಿರುವ ಮೂರನೇ ಸೂಪರ್ 8 ಪಂದ್ಯದಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ಮುಖಾಮುಖಿಯಾಗಲಿವೆ.ಲೀಗ್ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದ ಅಫ್ಘಾನಿಸ್ತಾನ ಬಲಿಷ್ಠ ಭಾರತ ತಂಡದ ಎದುರು ಸ್ಪರ್ದಿಸಲು ಸಜ್ಜಾಗಿದೆ.
ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಆಫ್ಘಾನಿಸ್ತಾನ ತಂಡದ ಕುರಿತು ಮಾತನಾಡಿದ್ದು, ಈ ತಂಡ ತುಂಬಾ ಬಲಿಷ್ಠವಾಗಿದೆ. ಹಲವಾರು ಬಾರಿ ಪ್ರಮುಖ ಬ್ಯಾಟ್ಸ್ಮನ್ ಗಳ ವಿಕೆಟ್ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರನ್ನು ಅಷ್ಟೊಂದು ಸುಲಭವಾಗಿ ಪರಿಗಣಿಸುವಂತಿಲ್ಲ ಎಂದಿದ್ದಾರೆ.