ಧಾರವಾಡ : ಜಿಲ್ಲಾ ಟೇಕ್ವಾಂಡೋ ಸಂಸ್ಥೆ ಧಾರವಾಡ ಇವರ ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳು ಇದೆ ತಿಂಗಳು ದಿನಾಂಕ ೧೦ ರಿಂದ ೧೨ ರಂದು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೪೨ ನೇ ರಾಜ್ಯಮಟ್ಟದ ಟೆಕ್ವಾಂಡೋ ಕ್ರೀಡಾಕೂಟ ೨೦೨೫-೨೬ ಭಾಗವಹಿಸಿ ಉತ್ತಮ ಸಾಧನೆಗೈದೀರುತ್ತಾರೆ. ವಿವರ ಈ ಕೆಳಗಿನಂತಿದೆ.
ಬಾಲಕರ ಕಿರಿಯರ ವಿಭಾಗದಲ್ಲಿ
ಅರ್ಮಾನ್ ಕಳ್ಳಿಮನಿ (ಜೆ ಎಸ್ ಎಸ್ ಶ್ರೀ ಮಂಜುನಾಥೇಶ್ವರ ಇಂಗ್ಲೀಷ್ ಮಾಧ್ಯಮ ಶಾಲೆ, ಮೃತ್ಯುಂಜಯ ನಗರ) ೧೮ ಕೆಜಿ ವಿಭಾಗ ಬಂಗಾರದ ಪದಕ ಅಂಜನ ಕಿಟದಾಳ (ಲಯನ್ ಇಂಗ್ಲಿಷ್ ಮಾಧ್ಯಮ ಶಾಲೆ ನಾರಾಯಣಪುರ)೧೮ ಕೆಜಿ ವಿಭಾಗ ಕಂಚಿನ ಪದಕ, ರುದ್ರಾ ಶರಣಬಸಪ್ಪ ಗೋಕಲೆ (ಕೆಲಗೇರಿಯ ಜೆ ಎಸ್ ಎಸ್ ಪಬ್ಲಿಕ್ ಶಾಲೆ) ೨೫ಕೆಜಿ ವಿಭಾಗದಲ್ಲಿ ಕಂಚಿನ ಪದಕದ,
ಕಿರಿಯರ ಬಾಲಕಿಯರ ವಿಭಾಗದಲ್ಲಿ ಶಾಫಿನ್ ಕಳ್ಳಿಮನಿ (ಜೆ ಎಸ್ ಎಸ್ ಶ್ರೀ ಮಂಜುನಾಥೇಶ್ವರ ಇಂಗ್ಲೀಷ್ ಮಾಧ್ಯಮ ಶಾಲೆ, ಮೃತ್ಯುಂಜಯ ನಗರ) ೨೪ ಕೆಜಿ ವಿಭಾಗ ಬಂಗಾರದ ಪದಕ, ಆಹನಾ ನಿಂಗನೂರ (ಪಾಲಾಕ್ಷ ಪೋದಾರ್ ಲರ್ನ್ ಶಾಲೆ ಮುಮ್ಮಿಗಟ್ಟಿ, ಧಾರವಾಡ) ೩೨ಕೆಜಿ ವಿಭಾಗ ಬೆಳ್ಳಿ ಪದಕ,
ಬಾಲಕರ ಕೆಡೆಟ್ ವಿಭಾಗದಲ್ಲಿ
ಪ್ರಸಾದ ಲಿಂಗನಗೌಡ್ರ (ಸೆಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆ, ಧಾರವಾಡ) ೫೩ಕೆಜಿ ವಿಭಾಗ ಬಂಗಾರದ ಪದಕ ಪೃಥ್ವಿರಾಜ್ ಮೇಟಿ (ಕೇಂದ್ರೀಯ ವಿದ್ಯಾಲಯ ಸಮಿತಿ ಧಾರವಾಡ) ಅಂಡರ್ ೪೧ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ,
ಬಾಲಕಿಯರ ಜೂನಿಯರ್ ವಿಭಾಗ
ಸುಪ್ರಿಯಾ ಲಂಗೋಟಿ (ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ) ೬೮ಕೆಜಿ ಮೇಲ್ಪಟ್ಟ ವಿಭಾಗ ಕಂಚಿನ ಪದಕ, ಹಾಗೂ ಮಹಿಳೆಯರ ೭೩ಕೆಜಿ ಮೇಲ್ಪಟ್ಟ ವಿಭಾಗ ಬಂಗಾರದ ಪದಕವನ್ನು ಪಡೆದಿರುತ್ತಾಳೆ. ಸಾಯಿಕೃತಿ ಹಕ್ಕಿ (ಬಿವಿಬಿ ಇಂಜಿನೀರಿAಗ್ ಮಹಾವಿದ್ಯಾಲಯ ಹುಬ್ಬಳ್ಳಿ) ಮಹಿಳೆಯರ ೫೭ಕೆಜಿ ವಿಭಾಗದಲ್ಲಿ ಬಂಗಾರದ ಪದಕ, ೪೦ ವರ್ಷ ಮಿಶ್ರ ಪೂಮ್ಸೇ ಕ್ರೀಡೆಯಲ್ಲಿ ರೇಣು ಇಟ್ನಾಳ ಹಾಗೂ ಆನಂದ ಕಿಟದಾಳ ಇವರು ಕೂಡ ಬಂಗಾರದ ಪದಕ ಪಡೆದು ಮುಂಬರುವ ರಾಷ್ಟçಮಟ್ಟದ ಟೇಕ್ವಾಂಡೋ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ.
ಇವರೊಂದಿಗೆ ಸಾಂಚಿ ಹುನಗುಂದ, ಅಣವಿ ನಾಯಕ, ಸ್ವಪ್ನಾ ಹಡಪದ, ಆರ್ಣಾ ದೇಶಪಾಂಡೆ, ಪ್ರಣತಿ ಮೇಟಿ, ಸೃಜನ ದೇವರಮನಿ, ಹರ್ಷಿತ್ ಗೌಡಾ ಕಮತರ, ಆರಿವ ನಿಂಗನೂರ, ಸಂದೀಪ್ ಜೊತೆನ್ನವರ ಹಾಗೂ ಅಭಿಷೇಕ್ ಹಡಪದ ಇವರು ಬಾಗವಹಿಸಿ ಪದಕದಿಂದ ಒಂದು ಹೆಜ್ಜೆ ಹಿಂದುಳಿದಿರುತ್ತಾರೆ.
ಇದರೊAದಿಗೆ ಜಿಲ್ಲೆಯು ಸಮಗ್ರ ತೃತೀಯ ಸ್ಥಾನ ಪಡೆದಿರುತ್ತದೆ. ಇದು ನಮ್ಮ ಧಾರವಾಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿರುವುದರಿಂದ ಇವರಿಗೆ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷರು ಹಾಗೂ ಜಿಲ್ಲಾ ಒಲಿಂಪಿಕ್ ಸಂಸ್ಥೆಯ ಮುಖ್ಯ ಕಾರ್ಯದರ್ಶಿಗಳಾದ ಬಿ.ಎಸ್ ತಾಳಿಕೋಟಿ, ರಾಷ್ಟ್ರೀಯ ತರಬೇತುದಾರರು ಹಾಗೂ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಸಂಸ್ಥಾಪಕರು ಆದ ಪರಪ್ಪ ಎಸ್ .ಕೆ, ಮುಖ್ಯ ತರಬೇತುದಾರರು ಹಾಗೂ ಅಂತರಾಷ್ಟ್ರೀಯ ನಿರ್ಣಾಯಕರು ಆದ ಅಂಜಲಿ ಪರಪ್ಪ ಕೆ, ಸಹ ತರಬೇತುದಾರರಾದ ಆನಂದ ಕಿಟದಾಳ, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಪಾಲಕರು ಸಂತೋಷ ವ್ಯಕ್ತಪಡಿಸುವುದರೊಂದಿಗೆ ಮುಂಬರುವ ರಾಷ್ಟçಮಟ್ಟದ ಟೇಕ್ವಾಂಡೋ ಕ್ರೀಡಾಕೂಟಕ್ಕೆ ಶುಭ ಹಾರೈಸಿದ್ದಾರೆ.