Tag: ಪ್ರಶಸ್ತಿಯನ್ನು

ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ರಾಯಲ್ ಡಾ. ಗುರುಮೂರ್ತಿ ರವರಿಗೆ ಸಾಮ್ರಾಟ್ ಸ್ಟಾರ್ ಅವಾರ್ಡ್ ಪ್ರಶಸ್ತಿ ಪ್ರದಾನ ಮೈಸೂರು: ಬೆಂಗಳೂರು ಜೆ.ಸಿ. ರಸ್ತೆ ರವೀಂದ್ರ ಕಲಾಕ್ಷೇತ್ರದಲ್ಲಿ, ಓಂ ಶ್ರೀ ಸಾಯಿರಾಂ ಸಾಂಸ್ಕöÈತಿಕ ಕಲಾ ವೇದಿಕೆಯ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮೈಸೂರು ಮಂಜುಳ(ಜೂ. ಮಾಲಾಶ್ರೀ) ಹಮ್ಮಿಕೊಂಡ ಕಾರ್ಯಕ್ರಮದಲ್ಲಿ, ಬೆಂಗಳೂರು ಇಟ್ಟಮಡುನಲ್ಲಿರುವ ಎಸ್.ಆರ್.ಟಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ರಾಯಲ್ ಡಾ.ಗುರುಮೂರ್ತಿ ರವರು, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕಗಳನ್ನು ಪಡೆಯಲು ಉತ್ತಮ ಶಿಕ್ಷಣ ನೀಡುತ್ತಿರುವ ಹಾಗೂ ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವ ಡಾ. ರಾಯಲ್ ಗುರುಮೂರ್ತಿ ರವರಿಗೆ ಸಾಮ್ರಾಟ್ ಸ್ಟಾರ್ ಅವಾರ್ಡ್ ಪ್ರಶಸ್ತಿಯನ್ನು, ಚಿತ್ರನಟ ಶಶಿಧರ್ ಕೋಟೆ ರವರು ನೀಡಿ ಗೌರವಿಸಿದರು, ಕಾರ್ಯಕ್ರಮದಲ್ಲಿ ಮೈಸೂರು ಲತಾ (ಜೂ. ರಕ್ಷಿತ) ಸೇರಿದಂತೆ ಅನೇಕ ಗಣ್ಯರಿದ್ದರು. ಚಿತ್ರ: ಜಿ.ಎಲ್.ಸಂಪAಗಿ ರಾಮುಲು

ಪತ್ತೇದಾರಿ ಕಾದಂಬರಿ ಸಾರ್ವಭೌಮ ಎನ್. ನರಸಿಂಹಯ್ಯರ ಜನ್ಮಶತಮಾನ ವರ್ಷಾಚರಣೆ ಕಾರ್ಯಕ್ರಮ-೫ರ ಪ್ರಯುಕ್ತ “ಸಮ್ಮಿಲನ” ಕಲೆ ಸಾಹಿತ್ಯ ಸಾಂಸ್ಕöÈತಿಕ ವೇದಿಕೆಯಿಂದ ಅಯೋಜಿಸಿದ್ದ ದೀಪಾವಳಿ ಹಾಗೂ ರಾಜ್ಯೋತ್ಸವ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿವೃತ್ತ ಡಿವೈಎಸ್ಪಿ ಹಾಗೂ ಸಾಹಿತಿಗಳೂ, ಅಂಕಣಕಾರರೂ ಬಹುಮುಖಿ ಹೋರಾ ಟಗಾರ ಜೆ.ಬಿ.ರಂಗಸ್ವಾಮಿ”ಜೇಬರ್” ರವರಿಗೆ,ಹಿರಿಯ ಕನ್ನಡಪರ ಹೋರಾಟಗಾರರೂ, ಸಾಹಿತಿ ಮಧು ಬಿಲ್ಲಿನಕೋಟೆ ಹಾಗೂ ಶೇಷಾದ್ರಿಪುರಂ ಸಂಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಚಂದ್ರಿಕಾ ಪುರಾಣಿಕ್ ರವರುಗಳಿಗೆ “ಪತ್ತೇದಾರಿ ಸಾಹಿತಿ ಎನ್ ನರಸಿಂಹಯ್ಯ ಸ್ಮಾರಕ ಪ್ರಶಸ್ತಿ”ಯನ್ನು “ಅಕ್ಷರ ಐಸಿರಿ” ಪತ್ರಿಕೆಯ ಗೌರವ ಸಂಪಾದಕ ರಾಂಕೆ.ಹನುಮAತಯ್ಯರವರು ಪ್ರದಾನ ಮಾಡಿದರು. ಈ ವೇಳೆ ರತ್ನಾರಾವ್, ನಾಗೇಶ್ ಡಿ.ಪಾಟಕ್, ಸುಭಾಷ್ ಎಂ. ಹರಾಳು, ಗೀತಾ ಡಿ. ಬಿ ಹಾಗೂ “ಸಮ್ಮಿಲನ”ದ ಸಂಸಾಪಕ ಕುವರ ಯಲ್ಲಪ್ಪ ಉಪಸ್ಥಿತರಿದ್ದಾರೆ.

";