Tag: ‘ಬೆಂಗಳೂರು’

ಬೆಂಗಳೂರು ಕೋರಮಂಗಲದಲ್ಲಿರುವ ಹೆಸರಾಂತ ಸಫೈರ್ ಸ್ಕಿನ್ ಅಂಡ್ ಅಸ್ಥೆಟಿಕ್ ಕ್ಲಿನಿಕ್‌ನ ಆವರಣದಲ್ಲಿ, ಚರ್ಮರೋಗ ತಪಾಸಣೆ ಹೃದ್ರೋಗ ತಪಾಸಣೆಯ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದರು, ಖ್ಯಾತ ಚರ್ಮರೋಗತಜ್ಞೆ ಡಾ.ಶೀಲಾನಟರಾಜ್, ಬೆಂಗಳೂರು ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ವಿದೇಶಗಳಿಂದ ೪ ಎಫ್‌ಆರ್‌ಸಿಎಸ್ ಪದವಿ ಪಡೆದಿರುವ ಪ್ರೊ ಡಾ.ಹೆಚ್.ಎಸ್. ನಟರಾಜ ಶೆಟ್ಟಿರವರು ಉಚಿತ ಆರೋಗ್ಯ ಶಿಬಿರದಲ್ಲಿ ೫೦೦ಕ್ಕೂ ಹೆಚ್ಚಿನ ರೋಗಿಗಳಿಗೆ ಇಸಿಜಿ, ಎಕೋ, ಇತ್ಯಾದಿ ತಪಾಸಣೆ ಮಾಡಿ ೨ಲಕ್ಷಕ್ಕೂ ರೂಪಾಯಿ ಮೌಲ್ಯದ ಔಷಧಿಗಳನ್ನು ರೋಗಿಗಳಿಗೆ ಉಚಿತವಾಗಿ ವಿತರಿಸಿದರು. ಶಿಬಿರದಲ್ಲಿ ಡಾ.ಮೋಹಿತ್‌ಗೌಡ, ಡಾ.ರಾಕೇಶ್‌ರೆಡ್ಡಿ, ಡಾ.ದೀಪಕ್ ಅಟ್ವಿ, ಡಾ. ಕಾವ್ಯರೇಗಂಟಿ, ಡಾ.ವೈಷ್ಣವಿ, ಡಾ.ರಾಜಶ್ರೀ ಹಾಗೂ ಲ್ಯಾಬ್ ಟೆಕ್‌ನಿಷಿಯನ್ ನಂದಿತಾ ಇತರರಿದ್ದರು. ಚಿತ್ರ:ಜಿ.ಎಲ್.ಸಂಪAಗಿರಾಮುಲು

ಬೆಂಗಳೂರು ಬಸವನಗುಡಿ ಎಂ.ಎನ್. ಕೃಷ್ಣರಾವ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡರು, ಇದೇ ಸಮಾರಂಭದಲ್ಲಿ ಅಸೋಸಿಯೇಷನ್ ಅಧ್ಯಕ್ಷರಾದ ನಾಗರಾಜ್ ರವರಿಗೆ ಸನ್ಮಾನಿಸಿದರು, ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಡಾ. ತ್ಯಾಗರಾಜ್ ರವರಿಗೆ, ಅಗ್ರಹಾರ ಬಿನ್ನಿ ಕ್ಯಾಂಟಿನ್ ಬಳಿ ಇರುವ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಶಿವಾನಂದ ಹಿರೆಮಠ್ ರವರು ಸನ್ಮಾನಿಸಿದರು, ವಾಕರ್ಸ್ ಅಸೋಸಿಯೇಷನ್ ಪದಾಧಿಕಾರಿಗಳಾದ ನಾಗೇಂದ್ರ ಗುಪ್ತ, ಅಬ್ದುಲ್ ಕಲೀಮ್, ಜಯಲಕ್ಷಿ÷್ಮ, ಕೋಕಿಲ, ಮಲ್ಲಯ್ಯ ಶಿವಕುಮಾರ್, ರಾಮಚಂದ್ರ, ದೇವೇಗೌಡ, ಯೋಗನರಸಿಂಹ,ಜವರಯ್ಯ, ಮಂಜುನಾಥ್ ಸೇರಿದಂತೆ ಅನೇಕರಿದ್ದರು. ಚಿತ್ರ: ಜಿ. ಎಲ್. ಸಂಪAಗಿ ರಾಮುಲು

";