ಗೌರಿಬಿದನೂರು: ನಗರದ ಮಾದನಹಳ್ಳಿ ಗೇಟ್ ಬಳಿ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಸ್ಥಳೀಯ ನಾಗರೀಕರು ದೂರಿದಾಗ ಸ್ಥಳಕ್ಕೆ ತಹಸೀಲ್ದಾರ್ ಮಹೇಶ್ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಈ ಬಗ್ಗೆ ಮಾದನಹಳ್ಳಿ ನಿವಾಸಿ, ಬಿಜೆಪಿ ಎಸ್ಟಿ ಮೋರ್ಚಾ ನಗರ ಘಟಕದ ಅಧ್ಯಕ್ಷ ಟಿವಿ ಶಾಂತಕುಮಾರ್ ಮಾತನಾಡಿ, ಮಾದನಹಳ್ಳಿ ಗೇಟ್ ಬಳಿ ಅಪಘಾತಗಳ ಸ್ಥಳವಾಗಿದೆ. ಇದು ಹಿಂದೂಪುರ ಮತ್ತು ಬೆಂಗಳೂರು ಹೈವೇ ರಸ್ತೆಯಾಗಿದ್ದು, ವಾಹನಗಳು ಅತಿ ವೇಗವಾಗಿ ಬರುತ್ತವೆ. ಇಲ್ಲಿ ಕ್ರಾಸ್ ಮಾಡಿಕೊಳ್ಳುವ ಸಂದರ್ಭದಲ್ಲಿ ಅನೇಕ ಅಪಘಾತಗಳು ಸಂಭವಿಸಿದೆ, ಸಮೀಪದಲ್ಲಿ ಸೇಂಟ್ ಅನ್ಸ್ ಶಾಲೆ ಇದೆ. ಮಕ್ಕಳು ಶಾಲೆ ಬಿಟ್ಟಾಗ ಈ ರಸ್ತೆಯಲ್ಲಿ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಹಾದು ಹೋಗಬೇಕಿದೆ. ವರ್ಷದಲ್ಲಿ ಹತ್ತಾರು ಅಪಘಾತಗಳು ಆಗಿವೆ. ಅದರಲ್ಲಿ ಅದೇಷ್ಟೋ ಪ್ರಾಣ ಕಳೆದುಕೊಂಡಿದ್ದಾರೆ ಕೈಕಾಲು ಮುರಿದುಕೊಂಡು ಇದ್ದಾರೆ. ಇದಕ್ಕೆ ಪರಿಹಾರ ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಸೂಕ್ತ ಪರಿಹಾರವನ್ನು ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿ ಕ್ರಮ ಕೈಗೊಳ್ಳಲಾಗುವುದು ಅಲ್ಲಿವರಿಗೂ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗುವುದು. ಇದರಿಂದ ವೇಗವಾಗಿ ಬರುವ ವಾಹನಗಳನ್ನು ಕಡಿವಾಣ ಹಾಕಬಹುದು ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ಪಿಎಸ್ಸೈ ನಾಗೇಂದ್ರಕುಮಾರ್, ರೈತ ಸಂಘದ ಅಧ್ಯಕ್ಷ ಗುಂಡಾಪುರ ಲೋಕೇಶ್‍ಗೌಡ, ಸೋಮು, ಗೋಪಿ,ನರೇಶ್, ಆರ್‍ಐ ರವಿಕುಮಾರ್ ಮುಂತಾದವರು ಹಾಜರಿದ್ದರು.
Leave a Review